ಶ್ರೀಕೃಷ್ಣ ಜನ್ಮಾಷ್ಟಮಿ ಶೋಭಾಯಾತ್ರೆಯಲ್ಲಿ ಕಲ್ಲುತೂರಾಟ: ಐವರಿಗೆ ಗಾಯ

ಬರೇಲಿ, ಆ 24 – ಉತ್ತರ ಪ್ರದೇಶದ ದೇವ್ರಾಣಿಯನ್ ಪ್ರದೇಶದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಶೋಭಾಯಾತ್ರೆ ನಡೆಯುತ್ತಿದ್ದ ವೇಳೆ ಎರಡು ಕೋಮುಗಳ ನಡುವಿನ ಘರ್ಷಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ದೇವ್ರಾಣಿಯನ್ ಪ್ರದೇಶದ ಮಾಕ್ರಿ ನವಾಡಾ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ‘ಶೋಭಾಯಾತ್ರೆ’ ನಡೆಸುವ ಪದ್ಧತಿ ಚಾಲ್ತಿಯಲ್ಲಿದೆ ಆದರೆ ಅದಕ್ಕಾಗಿ ಅನುಮತಿ ಪಡೆದಿರಲಿಲ್ಲ ಎಂದು ತಿಳಿಸಿದ್ದಾರೆ
ಟ್ರಾಕ್ಟರ್ ಮೂಲಕ ಹೊರಟಿದ್ದ ಶೋಭಾಯಾತ್ರೆ ಗ್ರಾಮದ ‘ಹೋಲಿ ಚೌರಾಹ’ ಪ್ರದೇಶ ತಲುಪಿದಾಗ, ಮತ್ತೊಂದು ಕೋಮಿನ ಜನರು ಅದನ್ನು ತಡೆದಿದ್ದಾರೆ ಈ ವೇಳೆ ಪರಸ್ಪರ ಘರ್ಷಣೆಯಾಗಿ ಕಲ್ಲುತೂರಾಟ ನಡೆದು ಐವರು ಗಾಯಗೊಂಡಿದ್ದಾರೆ ಎನ್ನಲಾಗಿದೆ
ಗ್ರಾಮದಲ್ಲಿ ಮತ್ತೆ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿದೆ ಕಲ್ಲುತೂರಾಟ, ಘರ್ಷಣೆಗೆ ಸಂಬಂಧಿಸಿ ಈವರೆಗೂ ಯಾವ್ ವ್ಯಕ್ತಿಯನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ.

Leave a Comment