ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಬಾದಾಮಿ,ಸೆ.3-ಧÀರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಘೇ ಯುಘೇ ಎಂಬ ಶ್ಲೋಕದಂತೆ ಲೋಕದಲ್ಲಿ ಅಧರ್ಮ, ಅನ್ಯಾಯ, ಅಕ್ರಮ ಹೆಚ್ಚಾದಾಗ ದೇವನು ಅವತರಿಸಿ ಧರ್ಮವನ್ನು ಸ್ಥಾಪಿಸುತ್ತಾನೆ ಎಂಬುದನ್ನು ನಾವು ಪುರಾಣ ಪುಣ್ಯ ಕಥೆಗಳಿಂದ ಕೇಳಿದ್ದೆವೆ. ಎಂದು ನಿವೃತ್ ಪ್ರಾಧ್ಯಾಪಕ ಎಮ್.ಎಫ್.ಕುರಿ ಹೇಳಿದರು.
ಅವರು ನಗರದ ದಿ.ಕೇಂಬ್ರೀಜ್ ಪಬ್ಲಿಕ್ ಸ್ಕೂಲನಲ್ಲಿ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಶ್ರೀಕೃಷ್ಣ ಪರಮಾತ್ಮನ ಜನನವು ಕೂಡಾ ಅಷ್ಠೇ ಮಹತ್ವದಾಗಿದ್ದು. ಶ್ರೀಕೃಷ್ಣನ ಗೀತೋಪದೇಶ ಸಮಸ್ತ ಮನುಕುಲದ ಜೀವನಕ್ಕೆ ದಾರಿದೀಪವಾಗಿದೆ, ಶ್ರೀಕೃಷ್ಣ ಪರಮಾತ್ಮನ ವಿಶ್ವರೂಪವನ್ನು ಅವಲೋಕಿಸಿದಾಗ ಸತ್ಯಕ್ಕೆ ಜಯವಿದೆ ಎನ್ನುವುದು ಮನವರಿಕೆಯಾಗುತ್ತದೆ ಎಂದು ಹೇಳಿದರು.
ಧರ್ಮ ಸಂಸ್ಥಾಪನಾರ್ಥಾಯಾ ಸಂಭವಾಮಿ ಯುಗೇ…ಯುಗೇ ಎನ್ನುವುದು ಅಕ್ಷರಶಃ ಸತ್ಯವಾಗಿದೆ. ನಮ್ಮ ನಿತ್ಯ ನೂತನ ಜೀವನದಲ್ಲಿ ಗೀತೆಯ ಸಾರವನ್ನು ಅಳವಡಿಸಿಕೊಂಡಿದ್ದೆ ಆದರೆ ಶಾಂತಿ, ಸಮಾಧಾನದ ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ದೇವನನ್ನು ಸ್ಮರಿಸಿ ಮುಕ್ತಿಯ ಮಾರ್ಗವನ್ನು ಕಂಡುಕೊಳ್ಳಬೇಕೆಂದು ಹೇಳಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಆಚರಿಸುವ ಪ್ರತಿಯೊಂದು ಆಚರಣೆಗಳು ಮುಗ್ಧ ಮಕ್ಕಳ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರಿ ಅವರನ್ನು ಸಂಸ್ಕಾರವಂತರನ್ನಾಗಿಸುತ್ತವೆ. ಶಿಕ್ಷಕ, ಶಿಕ್ಷಕಿಯರತು ತಾಯಂದಿರ ದಿನ, ಜನ್ಮಾಷ್ಠಮಿ ಸೇರಿದಂತೆ ಇನ್ನಿತರ ಹಲವಾರು ಸಂಸ್ಕಾರವಂತ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷೆ ಶ್ರೀಮತಿ ರೇಣುಕಾ ಗುಡ್ಡದ ಮಹಿಳೆಯರೊಂದಿಗೆ ಸೇರಿ ಶ್ರೀಕೃಷ್ಣನ ತೊಟ್ಟಿಲೋತ್ಸವ ನೆರವೇರಿಸಿದರು. ಸಂಸ್ಥಾಪಕ ಚೇರಮನ್ನ ವಾಯ್.ಎಸ್. ಗುಡ್ಡದ ಮುಖ್ಯೋಪಾಧ್ಯಾಯಿನಿ ಆರ್.ಡಿ.ಪತ್ತೇಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪಾಲಕರಾದ ಪರ್ತಕರ್ತ ಬಸವರಾಜ್ ಉಳ್ಳಾಗಡ್ಡಿ, ನಿವೇದಿತಾ ಉಳ್ಳಾಗಡ್ಡಿ, ಪೋಲಿಸ್ ಮಿರಾಕರ, ಶಿವಪ್ಪಯ್ಯನಮಠ, ಶ್ರೀದೇವಿ ಕುಲಕರ್ಣಿ, ಸ್ವಾತಿ ಮಾಲ್ಪಾಣಿ ನಿರೂಪಿಸಿದರು, ರಾಜೀಬಿ ಪಟವೇಗಾರ ವಂದಿಸಿದರು. ಈ ಸಂದರ್ಭದಲ್ಲಿ ಮಕ್ಕಳು ಶ್ರೀಕೃಷ್ಣ, ರಾಧಾ ಮತ್ತು ರುಕ್ಮೀಣಿಯ ವೇಷಧಾರಿಗಳಾಗಿ ನೃತ್ಯ ಮಾಡಿದ್ದು ನೋಡುಗರ ಗಮನ ಸೆಳೆಯಿತು.

Leave a Comment