ಶ್ರೀಕಾರ ಮುಕ್ತಾಯ

ಮನುಷ್ಯ ಸಂಘಜೀವಿ. ಆತ ಸಮಾಜವನ್ನು ಬಿಟ್ಟರೆ ಜೀವನ ಮಾಡಲು ಸಾಧ್ಯವೇ ಇಲ್ಲ. ಅಂಥಾ ಮನುಷ್ಯ ಕಾಮ, ಕ್ರೋಧ, ಮೋಹ, ಲೋಭ ಹಾಗೂ ಮದ-ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡರೆ ಸಮಾಜ ಹೇಗಿರುತ್ತದೆ ಎಂಬುದನ್ನು ಚಲನಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.ಅದುವೇ  ಶ್ರೀಕಾರ.

ಸ್ಟ್ರೈಕರ್ ಸಂಪೂರ್ಣ

ಕ್ರೈಂ – ಥ್ರಿಲ್ಲರ್ ಕಥಾ ವಸ್ತುವಿನೊಂದಿಗೆ ಪ್ರೇಕ್ಷಕರಿಗೆ ಕುತೂಹಲ ಹೆಜ್ಜೆ ಹೆಜ್ಜೆಗೆ ನೀಡಲು ‘ಸ್ಟ್ರೈಕರ್ ೫೯ ದಿವಸಗಳ ಮಾತಿನ ಭಾಗದ ಚಿತ್ರೀಕರಣ ಹಾಗೂ ಎರಡು ಹಾಡಿನ ಚಿತ್ರೀಕರಣ ಸಂಪೂರ್ಣ ಮಾಡಿಕೊಂಡು ಸಿದ್ದವಾಗುತ್ತಿದೆ.

ಪೊಲೀಸ್ ವರ್ಸಸ್ ಕ್ರಿಮಿನಲ್ ಸುತ್ತ ತಿರುಗುವ ಚಿತ್ರ. ಪವನ್ ತ್ರಿವಿಕ್ರಮ್ ನಿರ್ದೇಶನ ಮಾಡಿದ್ದಾರೆ. ಯಾರು ಯಾವಾಗ ಎದುರಾಗುತ್ತಾರೆ, ಯಾತಕ್ಕಾಗಿ ಎಂಬುದನ್ನೂ ಕುತೂಹಲ ಎನ್ನುತ್ತಾರೆ ನಿರ್ದೇಶಕರು

ಜಿ ಶಂಕರಪ್ಪ, ರಮೇಶ್ ಬಾಬು ಹಾಗೂ ಸುರೇಶ್ ಬಾಬು ನಿರ್ಮಾಣದ ಚಿತ್ರದಲ್ಲಿ ಎರಡು ಹಾಡುಗಳಿವೆ. ಬೆಂಗಳೂರಿನ ಸುತ್ತ ಮುತ್ತ, ಯಲಹಂಕ, ಜಿ ಕ ವಿ ಕೆ ಕ್ಯಾಂಪಸ್, ಕಂಠೀರವ ಸ್ಟುಡಿಯೋ, ಟೋರಿನೊ ಖರ್ಖಾನೆ ಚಿತ್ರೀಕರಣವಾದ ಸ್ಥಳಗಳು.

ಪ್ರವೀಣ್ ತೇಜ್ ನಾಯಕ, ಭಜರಂಗಿ ಲೋಕಿ ಖಳ ನಾಯಕ, ಶಿಲ್ಪಾ ಮಂಜುನಾಥ್ ನಾಯಕಿ. ಶರ್ಮ, ಧರ್ಮಣ್ಣ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ರಾಕೇಶ್ ವೈ ಛಾಯಾಗ್ರಹಣ, ಭಾರತ್ ಬಿ ಜೆ ಸಂಗೀತ, ಕೆ ಕಲ್ಯಾಣ್, ಸಿಂಪಲ್ ಸುನಿ ತಲಾ ಒಂದು ಗೀತೆ ರಚಿಸಿದ್ದಾರೆ. ಅದನ್ನು ವಿಜಯ ಪ್ರಕಾಷ್ ಹಾಗೂ ಸುಪ್ರಿಯ ಲೋಹಿತ್ ಕಂಠದಲ್ಲಿ ಧ್ವನಿ ಮುದ್ರಿಸಿಕೊಳ್ಳಲಾಗಿದೆ. ವಂಶಿ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಿರುವರು.

 

Leave a Comment