ಶ್ರಾವಣದ ಕನ್ನಡದ ಜ್ಯೋತಿ ಕಾರ್ಯಕ್ರಮ

ಮುಂಡಗೋಡ ಸೆ.8-  ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಕ.ಸಾ.ಪ ಅಧ್ಯಕ್ಷ ನಾಗೇಶ ಪಾಲನಕರ ನಿವಾಸದಲ್ಲಿ ಶ್ರಾವಣದ ಕನ್ನಡದ ಜ್ಯೋತಿ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಪಟ್ಟಣದ ಲೆಕ್ಕ ಪರಿಶೋಧಕರಾದ ಪ್ರಶಾಂತ ಬಾಡ್ಕರ ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಅಧ್ಯಕ್ಷ ನಾಗೇಶ ಪಾಲನಕರ ವಹಿಸಿದ್ದರು.ಪ್ರಸ್ತುತ ಕಾಲಘಟದಲ್ಲಿ ಕನ್ನಡದ ಭಾಷೆ ಬಳಜೆಯ ಕಡೆಗಣನೆ ಮತ್ತು ಅನ್ಯ ಭಾಷೆಯ ವ್ಯಾಮೋಹದ ಕುರಿತಾಗಿ ಸಾಹೀತಿಗಳಾದ ಚಿದಾನಂದ ಪಾಟೀಲ ಮತ್ತು ಕೃಷ್ಣಾ ಕಟ್ಟಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ನೂತನವಾಗಿ ಆಯ್ಕೆಯಾದ ಪಟ್ಟಣ ಪಂಚಾಯತ ಸದಸ್ಯ ಶ್ರೀಕಾಂತ ಸಾನು ಅವರನ್ನ ತಾಲೂಕಾ ಘಟಕದಿಂದಾ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಪಿ.ಹೂಗಾರ.ನಾಗಪ್ಪಾ ನಾಣಪೂರ.ರಮೇಶ ಕಾಮತ್.ಡಿ.ಜೆ.ಕುಲಕರ್ಣಿ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿಗಳಾದ ಲಕ್ಷ್ಮೀದೇವಿ ಪಾಟೀಲ ಸ್ವಾಗತಿಸಿದರು, ಇನ್ನೋರ್ವ ಗೌರವ ಕಾರ್ಯದರ್ಶಿ ರಾಕೇಶ ರಾಯ್ಕರ ವಂದಿಸಿದರು, ವಿನಯ ಪಾಲನಕರ ಕಾರ್ಯಕ್ರಮ ನಿರೂಪಿಸಿದರು.

Leave a Comment