ಶ್ರದ್ಧಾ ಕಡುಕೋಪ : ಫರ್ಹಾಖಾನ್ ಜೊತೆ ಸಂಬಂಧಗ ಗುಸು ಗುಸು

ಬಾಲಿವುಡ್ ನಟ ನಟಿಯರು ಯಾವಾಗ ಯಾರ ಜೊತೆಯಲ್ಲಿರುತ್ತಾರೆ ಎನ್ನುವುದು ಯಾರಿಗೂ ಗೊತ್ತಾಗದ ಸಂಗತಿ. ಇದರ ಜಾಡು ಹುಡುಕುವುದೂ ಕೂಡ ಕಷ್ಟದ ಕೆಲಸ.
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತು ನಟ ಫರ್ಹಾನ್ ಅಕ್ತರ್ ನಡುವೆ ಗುಸು ಗುಸು ಬಾಲಿವುಡ್ ಅಂಗಳಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಶ್ರದ್ಧಾಳನ್ನು ಕೇಳಿದ್ದಕ್ಕೆ ಪತ್ರಕರ್ತರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ನಾನು ಯಾರನ್ನು ಪ್ರೀತಿಸುತ್ತೇನೆ ನಿಮಗೆ ಏನು ಎಂದು ಪ್ರಶ್ನಿಸಿದ್ದಾರೆ.
ಒಬ್ಬರ ಜೊತೆ ಮರ ಸುತ್ತಿ ಸಿನಿಮಾ ಸಂಬಂಧಿಸಿದ ಕಾರ್ಯಕ್ರಮಗಳು, ಪಬ್-ಗಿಬ್‌ಗಳಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ ಬಳಿಕ ಸದ್ದಿಲ್ಲದೆ ಅವರನ್ ಬಿಟ್ ಇವರ್‍ಯಾರು ಎಂದು ಮತ್ತೊಬ್ಬರ ತೋಳ ತೆಕ್ಕೆಯಲ್ಲಿ ಬಂಧಿಯಾಗುವರ ಸಂಖ್ಯೆಯೇ ಚಿತ್ರರಂಗದಲ್ಲಿ ಅಧಿಕ. ಬೇರೆ ಭಾಷೆಯ ಚಿತ್ರರಂಗಗಳಿಗೆ ಹೋಲಿಸಿದರೆ ಇದು ಬಾಲಿವುಡ್‌ನಲ್ಲಿ ಅತಿ ಹೆಚ್ಚು.
ಸಿನಿಮಾಗಳಲ್ಲಿ ಅವಕಾಶ ಇಲ್ಲದಿದ್ದಾಗ,ಸಿನಿಮಾ ಮಾಡಿಯೂ ಅವುಗಳು ಯಶಸ್ಸು ಕಾಣದಿದ್ದಾಗ ನಟಿಮಣಿಯರು ಅನುಸರಿಸುವ ಸುಲಭ ಮಾರ್ಗ ಸ್ಕಿನ್ ಶೋ. ಅದರ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಮುಂದೆ ಅದನ್ನೇ ತಮ್ಮ ಟ್ರಂಪ್‌ಕಾರ್ಡ್ ಆಗಿ ಬಳಸಿಕೊಳ್ಳುತ್ತಾರೆ.
ಸ್ಕಿನ್ ಶೋ ವಿಷಯ ಬಾಲಿವುಡ್ ನಟಿಯರನ್ನು ಬಿಟ್ಟಿರಲಾಗದ ಸಂಗತಿ. ಇಂತಹುದರಿಂದಲೇ ಹೆಚ್ಚು ಜನಪ್ರಿಯತೆ ಪಡೆದವರು ಬಾಲಿವುಡ್‌ನ ನಟಿ ಶ್ರದ್ಧಾ ಕಪೂರ್ ಕೂಡ ಒಬ್ಬರು. ಹಿರಿಯ ನಟ ಶಕ್ತಿ ಕಪೂರ್ ಅವರ ಪುತ್ರಿ ಈಕೆ.
ಅಪ್ಪನ ಇಮೇಜ್‌ನ್ನು ಚಿತ್ರಜೀವನದಲ್ಲಿ ಬಳಸಿಕೊಳ್ಳದೆ ತಮ್ಮದೇ ಕಾರ್ಯತಂತ್ರಗಳ ಮೂಲಕ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದವರು. ಇತ್ತೀಚೆಗೆ ಶ್ರದ್ಧಾ ಕಪೂರ್ ಹೆಚ್ಚಾಗಿ ನಟ ಫರ್ಹಾನ್ ಅಕ್ತರ್ ಜೊತೆ ಪಾರ್ಟಿಗಳಲ್ಲಿ, ಅದರಲ್ಲಿಯೂ ರಾತ್ರಿ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಾಕಷ್ಟು ಸಿನಿಮಾ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರಿಬ್ಬರು ಮಧ್ಯೆ ಏನೂ ನಡೆಯುತ್ತಿದೆ ಎನ್ನುವ ಗುಸು ಗುಸು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತತಿರುವ ಮಾತು.
ಇತ್ತೀಚೆಗೆ ಶ್ರದ್ಧಾ ಕಪೂರ್ ಜಾವೇದ್ ಅಕ್ತರ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಪತ್ರಕರ್ತರು ಫರ್ಹಾನ್ ಅಕ್ತರ್ ನಡುವಿನ ಸಂಬಂಧ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಪ್ರತ್ರಕರ್ತರ ವಿರುದ್ದ ತಿರುಗಿ ಬಿದ್ದರು.
ನಿಮಗೆ ಯಾಕೆ ಈ ವಿಷಯಗಳು ನಾನು ಯಾರ ಜೊತೆ ಇರುತ್ತೇನೆ ಯಾರೊಂದಿಗೆ ಸಂಬಂಧ ಇಟ್ಟುಕೊಂಡಿದ್ದೇನೆ ಎನ್ನುವುದೆಲ್ಲಾ ನಿಮಗೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಶ್ರದ್ಧಾ ಕಪೂರ್ ಮತ್ತು ಫರ್ಹಾನ್ ಅಕ್ತರ್ ನಡುವೆ ನಡೆಯುತ್ತಿರುವ ಗುಸು ಗುಸು ಹಾಗು ಗಾಳಿ ಸುದ್ಧಿಯ ಬಗ್ಗೆ ಪ್ರತಿಕ್ರಿಯಿಸಿರುವ ಫರ್ಹಾನ್ ಅಕ್ತರ್ ತಾಯಿ ಹನಿ ಇರಾನಿ, ಅವರಿಬ್ಬರೂ ಪ್ರೀತಿಸುತ್ತಿದ್ದರೆ ಪ್ರೀತಿಸಲಿ ಬಿಡಿ, ಯುವ ಜೋಡಿಗಳು ಒಳ್ಳೆಯದಾಗಲಿ ಎಂದು ಹಸಿರು ನಿಶಾನೆ ತೋರಿದ್ದಾರೆ.

Leave a Comment