ಶ್ರದ್ಧಾಭಕ್ತಿಯಿಂದ ಈದ್ ಮಿಲಾದ್ ಆಚರಣೆ

ರಾಯಚೂರು.ನ.11- ಪವಿತ್ರ ಈದ್ ಮಿಲಾದ್ ಹಬ್ಬ ನಿನ್ನೆ ನಗರದಲ್ಲಿ ಮುಸ್ಲೀಂ ಬಾಂಧವರು ಅತ್ಯಂತ ವೈವಿಧ್ಯಮಯವಾಗಿ ಮತ್ತು ಸಂಭ್ರಮದಿಂದ ಆಚರಿಸಿದರು.
ನಗರದಲ್ಲಿ ಮಧ್ಯಾಹ್ನದಿಂದ ಭವ್ಯ ಮೆರವಣಿಗೆ ಕೈಗೊಳ್ಳಲಾಯಿತು. ಮಕ್ಕಾ ಮದೀನಾ ಭಾವಚಿತ್ರಗಳು ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆದವು. ವಿವಿಧ ಬಡಾವಣೆಗಳಿಂದ ಡಿಜೆಗಳ ಮೂಲಕ ಟ್ರ್ಯಾಕ್ಟರ್‌ಗಳಲ್ಲಿ ಸ್ತಬ್ಧ ಚಿತ್ರಗಳ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಅನೇಕ ಯುವಕರು ಸಾಂಪ್ರದಾಯಿಕ ಉಡುಗೆಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿನ್ನೆಯ ಕಾರ್ಯಕ್ರಮದಲ್ಲಿ ಅತ್ಯಂತ ಶಾಂತಿ ಸುವ್ಯವಸ್ಥೆಯಿಂದ ಮೆರವಣಿಗೆ ನಿರ್ವಹಿಸಲಾಯಿತು.
ಆಯೋಧ್ಯೆ ತೀರ್ಪಿನ ಮಾರನೇ ದಿನವೇ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆಯ ಕಾರ್ಯಕ್ರಮದಲ್ಲಿ ಗಮನಾರ್ಹ ಸಂಗತಿಯೆಂದರೆ, ಮಾಜಿ ಶಾಸಕರಾದ ಸೈಯದ್ ಯಾಸೀನ್ ಹಾಗೂ ಶಾಸಕರಾದ ಡಾ.ಶಿವರಾಜ ಪಾಟೀಲ್ ಅವರು ಪರಸ್ಪರ ಅಲಂಗಿಸಿ ಶುಭಾಶಯ ಕೋರಿದರು.
ಈ ಮೆರವಣಿಗೆಯಲ್ಲಿ ಮಾಜಿ ಶಾಸಕ ಸೈಯದ್ ಯಾಸೀನ್, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಸಂಸದ ಬಿ.ವಿ.ನಾಯಕ, ಬೋಸರಾಜು, ರವೀಂದ್ರ ಜಲ್ದಾರ್, ಕಡಗೋಳ ಆಂಜಿನೇಯ್ಯ, ರವಿ ಬೋಸರಾಜು, ಕೆ.ಶಾಂತಪ್ಪ, ಅಬ್ದುಲ್ ಕರೀಂ, ಯೂಸೂಫ್ ಖಾನ್, ಉಮರ್ ಫಾರೂಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment