ಶ್ಯಾಮನೂರು ಆಸ್ಪತ್ರೆ ತೆರವಿಗೆ ಡಿ ೧೬ ಗಡವು

ಬೆಂಗಳೂರು,ಡಿ,೧೧- ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್ ಎಸ್ ಆಸ್ಪತ್ರೆಗೆ ನೋಟಿಸ್ ಜಾರಿಯಾಗಿದ್ದು, ತೆರವಿಗೆ ಜಿಲ್ಲಾಡಳಿತ ಡಿ ೧೬ ರ ವರಗೆ ಗಡವು ನೀಡಿದೆ.
ಎಸ್ ಎಸ್ ಹಾಸ್ಪಿಟಲ್, ಐಡಿಯಲ್ ಹೋಮ್ಸ್ ಸೇರಿದಂತೆ ಒಟ್ಟು ೪೦ ಮಂದಿಗೆ ನೋಟಿಸ್ ನೀಡಲಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಸರ್ಕಾರಿ ಜಾಗವನ್ನು ಕಬಳಿಕೆ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ಸ್ವಯಂಪ್ರೇರಿತವಾಗಿ ಭೂಮಿ ತೆರವು ಮಾಡುವಂತೆ ಜಿಲ್ಲಾಡಳಿತ ನೋಟೀಸ್ ನೀಡಿದೆ.
ಎಸ್ ಎಸ್ ಆಸ್ಪತ್ರೆ ಮತ್ತು ಉಳಿದ ೪೦ ಪ್ರಾಪರ್ಟಿಗಳನ್ನು ತೆರವು ಮಾಡಲು ಬಿಬಿಎಂಪಿ ಮುಂದಾಗಿತ್ತು. ಹೈಕೋರ್ಟ್ ಇದಕ್ಕೆ ನಾಲ್ಕು ವಾರಗಳ ತಡೆ ನೀಡಿತ್ತು. ಇದೀಗ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದ್ದು, ತೆರವು ಕಾರ್ಯಕ್ಕೆ ಡಿಸೆಂಬರ್ ೧೬ರವರೆಗೆ ಗಡುವು ನೀಡಿದೆ.ತೆರವುಗೊಳಿಸದೇ ಇದ್ದಲ್ಲಿ ಅಧಿಕಾರಿಗಳು ಎಲ್ಲಾ ಕಟ್ಟಡಗಳನ್ನು ನೆಲಸಮ ಮಾಡಲಿದ್ದಾರೆ.

Leave a Comment