ಶೌಚ ಬಳಕೆ ಜಾಗ್ರತೆ ಅವಶ್ಯ

ಶೌಚಾಲಯಕ್ಕೆ ಹೋದಾಗ ಸ್ವಚ್ಛತೆಗೆ ಅವಶ್ಯ ಗಮನ ಕೊಡಬೇಕು. ಅದರಲ್ಲೂ ಸಾರ್ವಜನಿಕ ಶೌಚಾಲಯ ಬಳಕೆ ಮಾಡುವಾಗ ಜಾಗ್ರತೆ ಅವಶ್ಯ. ಕಾರಣ ಶೌಚಾಲಯದಲ್ಲಿ ಇರುವಷ್ಟು ಕೀಟಾಣುಗಳು, ಬ್ಯಾಕ್ಟೀರಿಯಾಗಳು ಬೇರೆ ಯಾವುದೇ ಸ್ಥಳದಲ್ಲಿ ಇರುವುದಿಲ್ಲ. ಹಾಗಾಗಿ ಶೌಚ ಮಾಡಿದ ನಂತರ ಚೆನ್ನಾಗಿ ನೀರು ಹಾಕಿ ಶೌಚಾಲಯ ಸ್ವಚ್ಛಗೊಳಿಸಬೇಕು.
ಅದರಲ್ಲೂ ಟಾಯ್ಲೆಟ್ ಫ್ಲೆಶ್ ಮಾಡುವುದು ಜಾಗ್ರತೆ ಅವಶ್ಯ. ಟಾಯ್ಲೆಟ್ ಫ್ಲೆಶ್ ಮಾಡಿದಾಗ ಕಲ್ಮಶ ತೆಗೆಯಲು ನೀರು ಅತಿ ವೇಗದಲ್ಲಿ ಬರುವುದರಿಂದ ನೀರಿನ ಸಣ್ಣ ಹನಿಗಳು 15 ಅಡಿ ತನಕ ಚಿಮ್ಮುವ ಸಾಧ್ಯತೆ ಇರುತ್ತದೆ. ಹಾಗಾಗಿ ಫ್ಲೆಶ್ ಮಾಡುವ ಮೊದಲು ಮುಚ್ಚಳ ಹಾಕಿ ಫ್ಲೆಶ್ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ ಕೀಟಾಣು ಶೌಚಾಯಲದಲ್ಲಿ ಪಸರಿಸಿ, ದೇಹ ಪ್ರವೇಶಿಸುವ ಅಪಾಯ ಹೆಚ್ಚಿರುತ್ತದೆ. ಸ್ನಾನದ ಮನೆಯಲ್ಲೇ ಶೌಚಾಲಯ ಇದ್ದರಂತೂ ಅತಿ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಬ್ಯಾಕ್ಟೀರಿಯಾಗಳು ಹಲ್ಲುಜ್ಜುವ ಬ್ರಶ್‌ನಲ್ಲಿ ಸೇರಿ ದೇಹದ ಒಳ ಪ್ರವೇಶಿಸಿ ಅನಾರೋಗ್ಯ ತರಬಹುದು.
ಸಾರ್ವಜನಿಕ ಶೌಚಾಲಯ ಬಳಸುವವರು ಖಾಲಿ ಕೈಯಲ್ಲಿ ಬಾಗಿಲಿನ ಹಿಡಿ ಅಥವಾ ನಲ್ಲಿ ಮುಟ್ಟಬಾರದು. ಇವುಗಳ ಮೇಲೆ ಹೆಚ್ಚಿನ ಕೀಟಾಣು ಇರುವುದರಿಂದ ಸೋಂಕು ಬರಬಹುದು. ಹಾಗಾಗಿ ಬಾಗಿಲಿನ ಹಿಡಿಯನ್ನು ಹಿಡಿಯುವಾಗ ಟಿಶ್ಯು ಪೇಪರ್ ಬಳಸುವುದು ಒಳ್ಳೆಯದು.

Leave a Comment