ಶೋಕಿವಾಲ ಪೂರ್ಣ ನಿರ್ದೇಶಕರಿಗೆ ಮೆಚ್ಚುಗೆ

ಕೃಷ್ಣ ಅಜಯ್ ರಾವ್ ಮೊದಲ ಬಾರಿಗೆ ಹಳ್ಳಿ ಸೊಗಡಿನಲ್ಲಿ ಕಾಣಿಸಿಕೊಂಡಿರುವ “ಶೋಕಿವಾಲಾ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದ ಮೂಲಕ ಜಾಕಿ ತಮ್ಮ ಹಲವು ವರ್ಷಗಳ ಅನುಭವವನ್ನು ಚಿತ್ರದಲ್ಲಿ ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ.

ಜಾಕಿ ಕೆಲಸಕ್ಕೆ ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ. ಇದು ನಿರ್ದೇಶಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಗ್ರಾಮೀಣ ಸೊಗಡಿನಲ್ಲಿ ಶ್ರೀರಂಗಪಟ್ಟಣ, ಮೈಸೂರು, ಮದ್ದೂರು ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಿದ್ದು ಯುಗಾದಿಗೆ ಚಿತ್ರವನ್ನು ತೆರೆಗೆ ತರುವ ಉದ್ದೇಶವನ್ನು ನಿರ್ದೇಶಕರು ಹೊಂದಿದ್ದಾರೆ.

ಚಿತ್ರದಲ್ಲಿ ಅಜಯ್‌ಗೆ ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ.ಚಿತ್ರ ಮೂಡಿ ಬಂದಿರುವ ಪರಿಗೆ ಇಬ್ಬರೂ ಖುಷಿಯಲ್ಲಿದ್ಧಾರೆ. ಇನ್ನು:ಳಿದಂತೆ ಶರತ್ ಲೋಹಿತಾಶ್ವ ,ಗಿರಿ,ತಬಲಾ ನಾಣಿ , ಮುನಿರಾಜ್, ಅರುಣ ಬಾಲರಾಜ್, ವಾಣಿ ,ಚಂದನ,ಲಾಸ್ಯ, ನಾಗರಾಜಮೂರ್ತಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ನಿರ್ಮಾಪಕರು ೫೦ ದಿನದಲ್ಲಿ ಚಿತ್ರೀಕರಣ ಮಾಡ್ತೀನಿ ಅಂತ ಹೇಳಿದ್ದೆ , ನೋ ಪ್ರಾಬ್ಲಮ್ ನಿಮ್ಮ ಮೇಲೆ ತುಂಬಾ ನಂಬಿಕೆ ಇದೆ ಮಾಡಿ.. ಸಿನಿಮಾ ಚೆನ್ನಾಗಿ ಬರಬೇಕು ಜಾಕಿ ಎಂದಿದ್ದರು.೪೫ ದಿನಕ್ಕೆ ಮುಗಿಸಿದ್ದೇನೆ. ಇದರಿಂದ ನಿರ್ಮಾಪಕರು ಖುಷಿಯಲ್ಲಿದ್ದಾರೆ ಇದಕ್ಕಾಗಿಯೇ ಅವರು ನಿರ್ಮಾಪಕರ ನಿರ್ದೇಶಕ ನೀನು ಅಂತ ಜಾಕಿ ಹೇಳಿದ್ದಾರೆ ,ಅವರ ಪ್ರೀತಿಗೆ ನಾನು ಋಣಿ ಎಂದಿದ್ಧಾರೆ ಅವರು.

ಚಿತ್ರವನ್ನು ಚನ್ನಪಟ್ಟಣ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿ ತರ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಅಲ್ಲಿನ ಜನರೆಲ್ಲ ತುಂಬಾ ಸಹಕರಿಸಿದ್ದಾರೆ . ಕೊನೆಯ ಭಾಗದ ಚಿತ್ರೀಕರಣವನ್ನು ಮದ್ದೂರಿನ ಬಳಿ ತೈಲೂರಿನಲ್ಲಿ ಮುಗಿಸುತ್ತಾ ಅದೇ ಜಾಗದಲ್ಲಿ ಕುಂಬಳಕಾಯಿ ಹೊಡೆದಿದ್ದೇವೆ.

ಶ್ರೀಧರ್. ವಿ. ಸಂಭ್ರಮ್ ೪ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೇಯ ಘೋಷಲ್, ವಿಜಯಪ್ರಕಾಶ್ ಅವರಿಗಾಗಿ ಕಾಯುತ್ತಿದ್ದು ನಂತರ ಹಾಡುಗಳನ್ನು ಬಿಡುಗಡೆ ಮಾಡುತ್ತೇವೆ .

ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಸಾಹಿತ್ಯ ಶೋಕಿವಾಲನಿಗಿದೆ.

ಶೋಕಿವಾಲ ಡಬ್ಬಿಂಗ್ ಮುಕ್ತಾಯ ಹಂತದಲ್ಲಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಯುಗಾದಿ ಹಬ್ಬಕ್ಕೆ ಶೋಕಿವಾಲನ ಶೋಕಿ ಶುರುವಾಗಲಿದೆ, ಈ ಮೂಲಕ ನಿರ್ದೇಶಕ ಜಾಕಿ ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.

Leave a Comment