ಶೇ 16 ಮೀಸಲಾತಿ ಯತ್ನಕ್ಕೆ ಆಗ್ರಹ

 

ಕಲಬುರಗಿ ಫೆ 12: ವೀರಶೈವ ಲಿಂಗಾಯತ ಸಮಾಜಕ್ಕೆ ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ನೀಡಿದ ಮಾದರಿಯಲ್ಲಿ ಶೇ 16 ರಷ್ಟು  ಮೀಸಲಾತಿ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಮುಂದಾಗಿ  ಸರ್ಕಾರವನ್ನು ಆಗ್ರಹಿಸಬೇಕು ಎಂದು  ಅಖಿಲ ಕರ್ನಾಟಕ ವೀರಶೈವ ಆದಿ ಬಣಜಿಗರ ಸಂಘದ ರಾಜ್ಯಾಧ್ಯಕ್ಷ ಆರ್ ಬಿ ಶಂಕರಗೌಡರ ಇಂದು ಸುದ್ದಿಗೋಷ್ಠಿಯಲ್ಲಿ ಮನವಿಮಾಡಿದರು.

ವೀರಶೈವ ಲಿಂಗಾಯತ ಸಮಾಜದ ಉಪಪಂಗಡಗಳನ್ನು ತನ್ನ ಜೊತೆಗೆ ಕರೆದೊಯ್ಯುವಲ್ಲಿ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವೀರಶೈವ ಮಹಾಸಭಾ ವಿಫಲವಾಗಿದೆ. ಇದರಿಂದ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದ ವೀರಶೈವ ಲಿಂಗಾಯತರ ಸಂಖ್ಯೆ ಕುಸಿದು ಕೇವಲ 60 ಲಕ್ಷಕ್ಕೆ ಇಳಿದಿದೆ .ಎಲ್ಲ ಒಳಪಗಂಡಗಳು ಒಳಗೊಳ್ಳುವಂತೆ ಮಹಾಸಭಾ ತನ್ನ ನಿಯಮಾವಳಿಗಳನ್ನು ಬದಲಿಸಬೇಕು.ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್ ಪಿ ಬಿರಾದಾರ, ಗುರುಬಸಪ್ಪ ಪಾಟೀಲ.ಶ್ರೀಮಂತರಾವ ಸೋಮಜಾಳ, ಶ್ರೀಮಂತರಾವ ಗೋದೆ ಸೇರಿದಂತೆ ಹಲವರಿದ್ದರು..

Leave a Comment