ಶೆಟ್ಟರ್, ಬೆಲ್ಲದ ವಿರುದ್ದ ಕಾಂಗ್ರೆಸ್ ಮುಖಂಡ ಚಿಂಚೋರೆ ವಾಗ್ದಾಳಿ

ಧಾರವಾಡ ಮೇ.23-: ಕರೋನಾ ಲಾಕ್ ಡೌನ್ ನಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಜನತೆ ಕಂಗೆಟ್ಟಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರವೇ ತೆರಿಗೆ ಕಡಿಮೆ ಮಾಡಿದೆ. ಆದರೆ ನಮ್ಮ ಮಹಾನಗರ ಪಾಲಿಕೆ ದುಪ್ಪಟ್ಟು ಆಸ್ತಿ ಕರ ಏಕಾಏಕಿ ಹೆಚ್ಚಳ ಮಾಡಿರುವುದು ನೋಡಿದರೆ ನಮ್ಮ ಜಿಲ್ಲೆಯ ಬಿಜೆಪಿ ನಾಯಕರು ಏನೂ ಮಾಡುತ್ತಿದ್ದಾರೆ ಎಂಬ ಸಂಶಯ ಮೂಡಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಕಿಡಿಕಾರಿದ್ದಾರೆ.
ಅವರು  ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಚಿವ ಜಗದೀಶ ಶೆಟ್ಟರ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷರು ಆಗಿರುವ ಧಾರವಾಡ ಶಾಸಕಅರವಿಂದ ಬೆಲ್ಲದಅವರಿಗೆ ಜನಸಾಮಾನ್ಯರ ಅದರಲ್ಲೂ ಮಧ್ಯಮ ವರ್ಗದ ಜನರ ಕಷ್ಟಅರ್ಥವಾಗುತ್ತಿಲ್ಲ ಎಂಬುದು ಅವರು ಮೌನವಹಿಸಿರುವುದು ನೋಡಿದರೆ ಕಾಣುತ್ತಿದೆ ಎಂದು ವಾಗ್ದಾಳಿನಡೆಸಿದರು.ಇದು ಬಹಳ ದೊಡ್ಡ ನಾಚಿಕೆಗೇಡಿನ ಸಂಗತಿಯಾಗಿದೆ. ಜನಪ್ರತಿನಿಧಿಗಳೇ ಇಲ್ಲದ ಮಹಾನಗರಪಾಲಿಕೆಯಲ್ಲಿ ಆಯುಕ್ತರು ಈ ರೀತಿಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಹೀಗಾಗಿ ಕೂಡಲೇ ಅವರನ್ನು ವರ್ಗ ಮಾಡಿ ಐಎಎಸ್ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.
ಒಂದು ತಿಂಗಳ ಒಳಗೆ ಮಹಾನಗರ ಪಾಲಿಕೆ ಆಸ್ತಿ ಕರ ಹೆಚ್ಚಳ ಹಿಂಪಡೆಯದಿದ್ದರೆ ಸಾಮಾಜಿಕಅಂತರ ಕಾಪಾಡಿಕೊಂಡೇ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ಮದ್ಯ ಮಾರಾಟ ನಿμÉೀಧದ ಹೆಸರಿನಲ್ಲಿಯೂ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ಜನಸಾಮಾನ್ಯರ ದಾರಿ ತಪ್ಪಿಸುತ್ತಿದ್ದಾರೆ. ಸುಖಾ ಸುಮ್ಮನೇ ಗೊಂದಲ ಸೃಷ್ಟಿಸುವ  ಇಂತಹ ಗಿಮಿಕ್ ಹೇಳಿಕೆ ನೀಡುವುದನ್ನು ಬಿಟ್ಟು ಅವರದೇ ಸರಕಾರವಿದೆ. ಅವರ ಮೇಲೆ ಒತ್ತಡ ಹೇರಲಿ. ಇಲ್ಲವೇ ಹೋರಾಟದ ಹಾದಿ ಹಿಡಿಯಲಿ ಅದು ಬಿಟ್ಟು ಕೇವಲ ಮಾಧ್ಯಮ ಹೇಳಿಕೆಗೆ ಸೀಮಿತವಾಗಬಾರದು ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಸಲಹೆ ನೀಡಿದರು.
ಮಹಾನಗರ ಪಾಲಿಕೆ ಪಿಂಚಣಿ ಹಣಕ್ಕಾಗಿ ಈ ಹಿಂದೆ ಹಲವು ಹೋರಾಟ ನಡೆಸಿದ ಶಾಸಕರು ಈಗಅವರದೇ ಸರಕಾರವಿದೆ. ಅದನ್ನು ತರಬೇಕಿತ್ತು. ಈಗ ಯಾಕೆ ಮೌನವಹಿಸಿದ್ದಾರೆ. ಹೋರಾಟ ನಡೆಸಿ ಹಣ ತರಲಿ. ಶಾಸಕ ಅರವಿಂದ ಬೆಲ್ಲದಅವರು ಬರೀ ಟ್ವೀಟರ್, ಫೇಸಬುಕ್, ಸಾಮಾಜಿಕಅಂತರ ಎಂದು ಜನರಿಂದ ದೂರ ಸರಿದಿದ್ದಾರೆ ಎಂದು ಟೀಕಿಸಿದರು.ತೆರಿಗೆ ಹಾಕುವುದರಲ್ಲಿ ಹುಬ್ಬಳ್ಳಿಧಾರವಾಡ ಭಾರತದಲ್ಲಿಯೇ ನಂಬರ್ ಒನ್ ಇದೆ. ಆದರೆ ಸೇವೆಯಲ್ಲಿ ಮಾತ್ರ ಶೂನ್ಯವಿದೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ತಿರುಗೇಟು ನೀಡಿದರು.

Leave a Comment