ಶೂ ಒಳಗೆ ಸೇರಿಕೊಂಡಿದ್ದ ನಾಗರಹಾವು

ಬೆಂಗಳೂರು,ಫೆ.೧೨-ನೆಲಮಂಗಲ ಬಳಿಯ ನಾರಾಯಣಪ್ಪನ ಪಾಳ್ಯದ ಮನೆಯ ಮುಂದೆ ಬಿಟ್ಟಿರುವ ಶೂ ಒಳಗೆ ನಾಗರಹಾವು ಸೇರಿಕೊಂಡು ಮನೆಯವರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ನಾರಾಯಣಪ್ಪನ ಪಾಳ್ಯದ ಮೂರ್ತಿ ಅವರ ಮನೆಯ ಮುಂದೆ ಬಿಟ್ಟಿದ್ದ ಶೂ ಒಳಗೆ ಸುಮಾರು ೫ ಅಡಿಯ ನಾಗರಹಾವು ಪತ್ತೆಯಾಗಿದ್ದು, ನಾಗರಹಾವು ಕಂಡು ಮನೆಯವರು ಗಾಬರಿಯಾಗಿದ್ದು, ತಕ್ಷಣ ನೆಲಮಂಗಲದ ಉರಗ ರಕ್ಷಕ ಸ್ನೇಕ್ ಲೋಕೇಶ್‌ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ಲೋಕೇಶ್ ಬಂದು ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಶೂ ಒಳಗೆ ಹಾವು ಕಂಡು ಜನರು ಆತಂಕಗೊಂಡಿದ್ದರು.ನಾಗರಹಾವು ರಕ್ಷಣೆಯಿಂದ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

Leave a Comment