ಶೂಟಿಂಗ್ ಭಾರತಕ್ಕೆ ಮತ್ತೊಂದು ಚಿನ್ನ

ನವದೆಹಲಿ, ಮಾ. ೧೧- ಮೆಕ್ಸಿಕೊದ ಗೌಡ್ಲಾಜರಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಯುವ ಶೂಟರ್ ಅಖಿಲ್ ಶೆರೋನ್, 50 ಮೀಟರ್ ಶೂಟಿಂಗ್‌ನಲ್ಲಿ ಚಿನ್ನದ ಪದಕಗಳಿಸುವ ಮೂಲಕ ಭಾರತ ತನ್ನ ಅಭಿಯಾನವನ್ನು ಮುಂದುವರೆಸಿದೆ.

ಈ ಮೂಲಕ ಶೆರೂನ್ ಟೂರ್ನಿಯಲ್ಲಿ ಚಿನ್ನದ ಪದಕಗಳಿಸಿದ ನಾಲ್ಕನೇ ಭಾರತೀಯ ಯುವ ಆಟಗಾರನೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಕಳೆದವಾರ ಶಹಜಾರ್ ರಿಜ್ವಿ, ಮನು ಬಕರ್, ಮೆಹೂಲಿ ಘೋಷ್, ಮತ್ತು ಅಂಜುಂ ಮೊದ್ಗೀಲ್ ಅದ್ವಿತೀಯ ಸಾಧನೆ ಮಾಡಿ ಪದಕ ಪಟ್ಟಿ ಭಾರತ ಅಗ್ರ ಸ್ಥಾನಕ್ಕೆ ಕೊಂಡೊಯ್ಯಲು ಪ್ರಮುಖ ಪಾತ್ರ ವಹಿಸಿದ್ದರು.

ಅಂತಿಮ ಪಂದ್ಯದಲ್ಲಿ ಶೆರೋನ್ 455.6 ಅಂಕಗಳಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರೆ, ಆಸ್ಟೇಲಿಯಾದ ಬರ್ನಾರ್ಡ್ ಪಿಕ್ಲ್ 452 ಅಂಕಗಳಿಸಿ ಎರಡನೇ ಸ್ಥಾನಗಳಿಸಿದರು.

Leave a Comment