ಶುದ್ಧ ನೀರಿನ ಘಟಕಗಳಿಂದ ಒಂದೇ ತಿಂಗಳಲ್ಲಿ 7.81 ಲಕ್ಷ ರೂ. ಸಂಗ್ರಹ

ತುಮಕೂರು, ಜೂ. ೧೫- ಮಹಾನಗರ ಪಾಲಿಕೆ ಸುಪರ್ದಿನ ಚಾಲನೆಯಲ್ಲಿರುವ 22 ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಮಹಾನಗರ ಪಾಲಿಕೆಗೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಒಟ್ಟು 7,81,987 ರೂ.ಗಳು ಸಂಗ್ರಹವಾಗಿದೆ.

ನಗರದ ವಿವಿಧ ಬಡಾವಣೆಗಳಲ್ಲಿ ಸರ್ಕಾರಿ ಏಜೆನ್ಸಿಗಳಿಂದ ಸ್ಥಾಪಿತವಾಗಿದ್ದ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆಯ ಆಯುಕ್ತ ಟಿ.ಭೂಬಾಲನ್ ಅವರು ಮೇ 8 ರಂದು ಅಧಿಕೃತವಾಗಿ ಪಾಲಿಕೆಯ ವಶಕ್ಕೆ ಪಡೆದಿದ್ದು, ಅಂದಿನಿಂದ ಕೇವಲ ಒಂದು ತಿಂಗಳ ಅಲ್ಪ ಅವಧಿಯಲ್ಲೇ ಪಾಲಿಕೆಗೆ ಇಷ್ಟೊಂದು ದೊಡ್ಡ ಮೊತ್ತದ ಸಂಪನ್ಮೂಲ ಸಂಗ್ರಹವಾಗಿರುವುದು ಪಾಲಿಕೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದ್ದು, ಭಾರೀ ಗಮನ ಸೆಳೆಯಲಾರಂಭಿಸಿದೆ.

2ನೇ ವಾರ್ಡ್‌ನ ಶಿರಾಗೇಟ್-25,489 ರೂ., 6 ನೇ ವಾರ್ಡ್‌ನ ಭೀಮಸಂದ್ರ ಹಳೆ ಗ್ರಾಮ- 28,465 ರೂ., 6ನೇ ವಾರ್ಡ್‌ನ ದಿಬ್ಬೂರು ಗ್ರಾಮದ ಬಸ್ ನಿಲ್ದಾಣದ ಬಳಿ- 47,215 ರೂ., 9ನೇ ವಾರ್ಡ್‌ನ ಹೌಸಿಂಗ್ ಬೋರ್ಡ್ ಕಾಲೋನಿ- 24,036 ರೂ., 11ನೇ ವಾರ್ಡ್‌ನ ಮೆಳೆಕೋಟೆ- 33,207 ರೂ., 13ನೇ ವಾರ್ಡ್‌ನ ಕುರಿಪಾಳ್ಯ ಮುಖ್ಯರಸ್ತೆ- 43,048 ರೂ., 18ನೇ ವಾರ್ಡ್‌ನ ಶಾಂತಿನಗರದ ಜಗಜ್ಯೋತಿ ರಸ್ತೆ- 37,270 ರೂ., 19ನೇ ವಾರ್ಡ್‌ನ ಎನ್.ಆರ್. ಕಾಲೋನಿ ಸರ್ಕಾರಿ ಶಾಲೆ ಆವರಣ- 55,385 ರೂ., 21ನೇ ವಾರ್ಡ್‌ನ ಹನುಮಂತಪುರ ಪಾರ್ಕ್- 37,950 ರೂ., 22ನೇ ವಾರ್ಡ್‌ನ ಭಾರತಿ ನಗರ- 29,080 ರೂ., 23ನೇ ವಾರ್ಡ್‌ನ ಸತ್ಯಮಂಗಲದ ಅರಳಿಮರದ ಹತ್ತಿರ- 6575 ರೂ., 23ನೇ ವಾರ್ಡ್‌ನ ಜಗನ್ನಾಥಪುರ- 7,050 ರೂ., 23ನೇ ವಾರ್ಡ್‌ನ ಪುಟ್ಟಸ್ವಾಮಯ್ಯನ ಪಾಳ್ಯ- 30,355 ರೂ., 24ನೇ ವಾರ್ಡ್‌ನ ಸರ್ಕಾರಿ ಉರ್ದುಶಾಲೆ ಹತ್ತಿರ- 40,945 ರೂ., 24ನೇ ವಾರ್ಡ್‌ನ ಚನ್ನಪ್ಪನಪಾಳ್ಯ- 61,015 ರೂ., 29ನೇ ವಾರ್ಡ್‌ನ ಮರಳೂರು ದಿಣ್ಣೆ ಮೊದಲನೇ ಕ್ರಾಸ್ ಓವರ್‍ಹೆಡ್ ಟ್ಯಾಂಕ್ ಬಳಿ- 19,556 ರೂ., 31ನೇ ವಾರ್ಡ್‌ನ ಎಚ್.ಎಂ.ಎಸ್. ಕಾಲೇಜು ಪಂಪ್‍ಹೌಸ್ ಬಳಿ- 17,701 ರೂ., 32ನೇ ವಾರ್ಡ್‌ನ ಶೆಟ್ಟಿಹಳ್ಳಿ ದೇವಸ್ಥಾನದ ಹಿಂಭಾಗ- 36,728 ರೂ., 33ನೇ ವಾರ್ಡ್‌ನ ಚಂದ್ರಮೌಳೀಶ್ವರ ಬಡಾವಣೆಯ ಓವರ್‍ಹೆಡ್ ಟ್ಯಾಂಕ್- 50,341 ರೂ., 33ನೇ ವಾರ್ಡ್‌ನ ಕ್ಯಾತ್ಸಂದ್ರ ಶಾಲೆ ಆವರಣ- 56,581 ರೂ., 35ನೇ ವಾರ್ಡ್‌ನ ದೇವರಾಯಪಟ್ಟಣದ ಅಂಬೇಡ್ಕರ್ ಭವನದ ಹತ್ತಿರ- 15,700 ರೂ., 8ನೇ ವಾರ್ಡ್‌ನ ಪಿ.ಜಿ.ಲೇಔಟ್- 28,145 ರೂ. ಸೇರಿ ಒಟ್ಟಾರೆ ಮೊತ್ತ 7,81,987 ರೂ. ಸಂಗ್ರಹವಾಗಿದೆ.

Leave a Comment