ಶುದ್ಧ ಕುಡಿಯುವ ನೀರಿಗಾಗಿ ಮಹಿಳಾ ಸಂಘಟನೆ ಪ್ರತಿಭಟನೆ

ಬಳ್ಳಾರಿ, ಆ.10: ನಗರದ 34ನೇ ವಾರ್ಡಿಗೆ ಆಶುದ್ಧ ನೀರು ಸರಬರಾಜಾಗುತ್ತಿದ್ದು ಶುದ್ಧ ಕುಡಿಯುವ ನೀರು ಸರಬರಾಜಿಗೆ ಆಗ್ರಹಿಸಿ ಇಂದು ನಗರಪಾಲಿಕೆ ಮುಂದೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಝಂಡಾಕಟ್ಟೆ, ರೂಪನಗುಡಿ ರಸ್ತೆ, ನಾರಪ್ಪಬೀದಿ, ಮಿಲ್ಲರಪೇಟೆ, ಪ್ರದೇಶಗಳಲ್ಲಿ ಕಳೆದ ಹಲವು ತಿಂಗಳಿಂದ ಚರಂಡಿ ಮಿಶ್ರಿತ ನೀರು ಸರಬರಾಜಾಗುತ್ತಿದೆ. ಈ ಬಗ್ಗ ಅನೇಕ ಬಾರಿ ಕೌನ್ಸಲರ್ ಗಮನಕ್ಕೆ ತಂದರೂ ದುರಸ್ತಿ ಮಾಡಿರುವುದಾಗಿ ಹೇಳುತ್ತಾರೆ. ಆದರೆ ಶುದ್ಧ ನೀರು ಮಾತ್ರ ಬರುತ್ತಿಲ್ಲ, ಕಳೆದ ಒಂದು ವಾರದಿಂದ ಚರಂಡಿ ಮಿಶ್ರಿತ ನೀರು ಬರುವುದರಿಂದ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಶುದ್ಧ ಕುಡಿಯುವ ನೀರನ್ನು ನೀಡಿ ಒಂದು ವಾರದಲ್ಲಿ ಈ ಕೆಲಸ ಆಗದಿದ್ದರೆ, ನಾಗರಿಕ ಹೋರಾಟ ಸಮಿತಿ ಮತ್ತಿತರೆ ಸಂಘಟನೆಗಳು ಸೇರಿ ತೀವ್ರ ಹೋರಾಟ ನಡೆಸಬೇಕಾಗತ್ತಿದೆಂದರು. ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷೆ ಎಸ್.ಪ್ರಭಾವತಿ, ಜಿಲ್ಲಾ ಕಾರ್ಯದರ್ಶಿ ಜೆ.ಚಂದ್ರಕುಮಾರಿ, ಕಾರ್ಯದರ್ಶಿ ಸಾವಿತ್ರಿ, ಸತ್ಯಬಾಬು, ಮೊದಲಾದವರು ಪಾಲ್ಗೊಂಡಿದ್ದರು.

Leave a Comment