ಶುದ್ದನೀರು ಕುಡಿಯುವ ಭಾಗ್ಯ ರಾಮಸಮುದ್ರದ ಜನತೆಗೆ ಇಲ್ಲವೇ?

ಚಾಮರಾಜನಗರ, ಫೆ.13- ರಾಜ್ಯ ಸರ್ಕಾರದದಿಂದ ಗ್ರಾಮಗಳಿಗೆ ಶುದ್ದನೀರನ್ನು ಕೊಡೊವ ಉದ್ದೇಶ ದಿಂದ ಶುದ್ದನೀರು ಕೇಂದ್ರಗಳನ್ನು ತೆರೆಯಲಾಗಿದೆ ಚಾಮರಾಜನಗರ ಜಿಲ್ಲಾ ಕೇಂದ್ರಗಳಲ್ಲಿ ಕೆಲವು ಕೆಡೆ ಮಾತ್ರ ಶುದ್ದ ನೀರು ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ಮತ್ತೆ ಕೆಲವು ಕಡೆ ಉದ್ಘಾಟನೆಯಾಗಿ ಮರು ದಿನಗಳಿಂದಲೆ ಕಾರ್ಯ ನಿರ್ವಹಿಸುತ್ತಿಲ್ಲ ಇದಕ್ಕೆ ಉದಾರಣೆ ರಾಮಸಮುದ್ರ ಎನ್.ಟಿ.ಎಂ ಶಾಲೆಯ ರಸ್ತೆಯಲ್ಲಿ ಇರುವ ಕುಡಿಯುವ ನೀರಿನ ಶುದ್ದನೀರಿನ ಘಟಕ.
ಚಾಮರಾಜನಗರ ಶಾಸಕರಾದ ಪುಟ್ಟರಂಗಶೆಟ್ಟಿ ನಗರಸಭೆಯಿಂದ ನಿರ್ಮಿಸಿರುವ ಶುದ್ದನೀರಿನ ಘಟಕವನ್ನು ಉದ್ಘಾಟಿಸಿ ಒಂದು ವರ್ಷಗಳೆ ಕಳೆದಿದೆ ಅದರೆ ಶುದ್ದ ನೀರು ಕುಡಿಯುವ ಭಾಗ್ಯ ರಾಮಸಮುದ್ರದ ಜನತೆಗೆ ಬಂದಿಲ್ಲ. ರಾಮಸಮುದ್ರದ ಕೆಲವರು ಶುದ್ದನೀರಿಗಾಗಿ ಜಿಲ್ಲಾ ಕೇಂದ್ರಕ್ಕೆ ಬರುವ ಪರಿಸ್ಥಿತಿ ಉಂಟಾಗಿದೆ.
ನಗರಸಭೆಯ ಅಧ್ಯಕ್ಷರು ರಾಮಸಮುದ್ರದವರೆ ಅಗಿದ್ದರು ಅವರು ಶುದ್ದ ನೀರಿ ಘಟದ ಕಡೆಯು ತಲೆಯಾಕೂತ್ತಿಲ್ಲ ಅಧಿಕಾರ ಇದ್ದರೆ ಸಲದು ಜನಪ್ರತಿ ನಿಧಿಗಳು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವವನೆ ನಿಜವಾದ ಜನಪ್ರತಿನಿಧಿ ಜಿಲ್ಲೆಗೆ ಬಂದಿರುವ ಕೆಲವು ಅಧಿಕಾರಿಗಳು 10 ಗಂಟೆ ಕಛೇರಿ ಬಂದು 5ಗಂಟೆಗೆ ತಮ್ಮ ಊರಿಗೆ ತೆರಳುವುದೆ ಅವರ ಕಾರ್ಯ ವೈಕರಿಯಾಗಿದೆ. ಜಿಲ್ಲಾಧಿಕಾರಿಗಳು ಕಛೇರಿಯಲ್ಲಿಯೆ ಕೆಲಸ ನಿರ್ವಹಿಸುತ್ತಾರೆ ಅದರೆ ಜಿಲ್ಲಾ ಕೇಂದ್ರದಲ್ಲಿ ಯಾವರೀತಿ ಬೆಳವಳಿಗೆ ಯಾಗಿದೆ. ಮತ್ತು ಕಚೇರಿಗಳಿಗೆ ಭೇಟಿ ನೀಡಿದರೆ ನಿಜವಾದ ಪರಿಸ್ಥಿತಿ ತಿಳಿಯಲಿದೆ. ಎಂದು ಸಾರ್ವಜನಿಕರು ತಿಳಿಸಿದ್ದಾರೆ.

Leave a Comment