ಶುಕ್ರವಾರ ಬರ್ತಿದ್ದಾನೆ  ‘ಫುಲ್ ಟೈಟ್ ಪ್ಯಾತೆ’

ಬೆಂಗಳೂರು, ಜು 9 – ಕುಡಿದು ಟೈಟಾಗೋರ್ನೆಲ್ಲ ಎಚ್ಚರಿಸೋದಕ್ಕೆ ಬರ್ತಿದ್ದಾನೆ “ಫುಲ್ ಟೈಟ್ ಪ್ಯಾತೆ”  ಎಸ್ಎಲ್ ಜಿ ಪುಟ್ಟಣ್ಣ ಸಿನಿಮಾಸ್ ಲಾಂಛನದಲ್ಲಿ ಬ್ರದರ್ಸ್ ಪಿಕ್ಚರ್ಸ್ ಹೌಸ್  ಬ್ಯಾನರ್ ಅಡಿಯಲ್ಲಿ ನಿರ್ಮಾಣ, ನಿರ್ದೇಶನದೊಡನೆ ನಾಯಕ ನಟನಾಗಿಯೂ ಎಸ್ಎಲ್ ಜಿ ಪುಟ್ಟಣ್ಣ ಅಭಿನಯಿಸಿದ್ದಾರೆ   ಸಂತೋಷವಿರಲಿ, ದುಃಖವಾಗಲಿ, ಮದ್ಯಪಾನಕ್ಕೆ ಮೊರೆಹೋಗುವವರೇ ಹೆಚ್ಚು   ಹೀಗೆ ಕುಟುಂಬದಲ್ಲಿನ ಸಮಸ್ಯೆಗಳನ್ನು ಎದುರಿಸಲಾಗೆ ಕುಡಿಯಲು ಪ್ರಾರಂಭಿಸುವ ಕಥೆಯನ್ನು ‘ಫುಲ್ ಟೈಟ್ ಪ್ಯಾತೆ’ ಚಿತ್ರ ಒಳಗೊಂಡಿದ್ದು, ಇದೇ ಶುಕ್ರವಾರ ಜುಲೈ 12ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ

ಮಂಗಳವಾರ ‘ಇದ್ದಾನೋ, ಇಲ್ಲವೋ ಆ ನಿಮ್ಮ ದೇವರು’ ಸೇರಿದಂತೆ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆಗೊಳಿಸಿರುವ ಲೂಸ್ ಮಾದ ಯೋಗೇಶ್, ‘ಕರುನಾಡ ಸೇವಕರು’ ಸಂಘಟನೆಯ ರೂಪೇಶ್ ರಾಜಣ್ಣ, ಸೋಮಣ್ಣ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ  ಎಲ್ಲ ಹಾಡುಗಳೂ ಈಗಾಗಲೇ ಜಾಲತಾಣದಲ್ಲಿ ಜನಪ್ರಿಯವಾಗಿವೆ  “ಕುಡಿತದಿಂದ ಸಮಸ್ಯೆಗಳು ಇನ್ನಷ್ಟು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ  ಈ ಸತ್ಯವನ್ನು ಅರಿತ ನಂತರ ನಾಯಕ ಚಟದಿಂದ ಮುಕ್ತಿಹೊಂದುತ್ತಾನೆ.  ನೈಜ ಕಥೆ ಆಧರಿಸಿ ಚಿತ್ರ ಮಾಡಲಾಗಿದ್ದು, ಮಳವಳ್ಳಿ ಭಾಗದ ಭಾಷೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ” ಎಂದು ನಾಯಕ, ನಿರ್ದೇಶಕ ಪುಟ್ಟಣ್ಣ ತಿಳಿಸಿದ್ದಾರೆ

ತಮ್ಮ ಊರಿನ ಕುಡುಕನೊಬ್ಬ ಲೈಫ್ ನಲ್ಲಿ ಸಮಸ್ಯೆಗಳು ಎದುರಾದಾಗ ಅದನ್ನು ಮರೆಯಲು ಕುಡಿತಕ್ಕೆ ದಾಸನಾಗಿ, ನೋವನ್ನು ಎದೆಯಲ್ಲೇ ಇಂಗಿಸಿಕೊಂಡು ನಗುತ್ತ, ನಗಿಸುತ್ತ ತಿರುಗಾಡುತ್ತಿರುವ ವ್ಯಕ್ತಿಯ ಕಥೆ ಸಿನಿಮಾ ಆಗಿದೆ  ಆತ ಈಗಲೂ ಇದ್ದಾನೆ  ಕಂಡಾಗಲೆಲ್ಲ ದುಡ್ಡು ಕೊಡು ಎಂದು ಕೇಳುತ್ತಾನೆ ಕುಡಿತ ಬಿಟ್ಟಿದ್ದವನು ಮತ್ತೆ ಆರಂಭಿಸಿದ್ದಾನೆ ಹೊಸಬರ ತಂಡ ಸೇರಿ ಚಿತ್ರ ಮಾಡಿದ್ದೇವೆ ಎಂದು ಪುಟ್ಟಣ್ಣ ಮಾಹಿತಿ ನೀಡಿದ್ದಾರೆ

ತಾರಾಗಣದಲ್ಲಿ ಎಸ್ಎಲ್ ಜಿ ಪುಟ್ಟಣ್ಣ, ಮಾನಸ ಗೌಡ, ಬಿರಾದಾರ್, ಶಿವ ರಾಮನಗರ, ಸೂರ್ಯತೇಜ, ಅಜಯ್ ಕೃಷ್ಣಪ್ಪ, ಗಿರೀಶ್, ರಾಜು ಟಿ, ಆನಂದ್, ಸಾಯಿನಾಗ, ಬೇಬಿ ಪ್ರಾಪ್ತಿ ಮೊದಲಾದವರಿದ್ದಾರೆ.

Leave a Comment