ಶೀರ್ಷಾಸನ

‘ಶೀರ್ಷಾಸನ’ ಶೀರ್ಷ ಎಂದರೆ ತಲೆ ಮತ್ತು ಆಸನ ಅಂದರೆ ಯೋಗಭಂಗಿ.  ತಲೆ ಕೆಳಗಾಗಿ ದೇಹವನ್ನು ನೇರವಾಗಿ ನಿಲ್ಲಿಸುವ ಆಸನ ಎಂದರ್ಥ.  ಈ ಆಸನವನ್ನು ‘ಆಸನಗಳ ರಾಜ’ ಎಂದು ಕರೆಯುತ್ತಾರೆ.

ಅಭ್ಯಾಸ ವಿಧಾನ:
ಎರಡು ಮಂಡಿಗಳ ಮೇಲೆ ಕುಳಿತುಕೊಳ್ಳುವ ಸ್ಥಿತಿಗೆ ಬನ್ನಿ ಯೋಗ ಮ್ಯಾಟ್ ಅಥವಾ ಮೃದುವಾದ ಬಟ್ಟೆಯ ಮೇಲೆ ತಲೆಇರಿಸಿ ಎರಡು ಕೈಗಳ ಬೆರಳುಗಳನ್ನು ಜೋಡಿಸಿ ತಲೆಯ ಹಿಂಬದಿ ಒತ್ತಿ ಹಿಡಿಯುವುದು.

ನಂತರ ಎರಡು ಮೊಣಕೈಗಳನ್ನು ನೆಲದ ಮೇಲೆ ಭದ್ರಗೊಳಿಸಿ ಕೆಳಭಾಗದ ದೇಹವನ್ನು, ಕಾಲುಗಳನ್ನು ಮೇಲೆತ್ತಲು ಪ್ರಯತ್ನಿಸಿ.
ಮೊದಲು ಕಾಲುಗಳು ಮಡಿಚಿರಲಿ, ನಿಧಾನವಾಗಿ ಕಾಲುಗಳನ್ನು ನೇರ ಮಾಡಿ ನಿಲ್ಲಿರಿ.

ಇದು ಶೀರ್ಷಾಸನದ ಅಂತಿಮ ಸ್ಥಿತಿ ಮೊದಲು ೫ ರಿಂದ ೧೫ ಸೆಕೆಂಡುಗಳ ಸಮಯ ಇರಲು ಪ್ರಯತ್ನಿಸಿ ನಂತರ ಹೆಚ್ಚು ಸಮಯ ಇರಲು ಅಭ್ಯಾಸ ಮಾಡಬಹುದು

ಪ್ರಯೋಜನಗಳು:
ಮೆದುಳಿನ ಆಲೋಚನಶಕ್ತಿಗಳನ್ನು ವೃದ್ಧಿಸುತ್ತದೆ.
ರಕ್ತ ಶುದ್ಧಿಕರಣಕ್ಕೆ ಉತ್ತಮವಾದ ಆಸನ.
ನರಗಳ ಚೈತನ್ಯ ಶಕ್ತಿಗೆ ಸಹಾಯ ಮಾಡುತ್ತದೆ.
ಕಣ್ಣಿನ ದೃಷ್ಟಿ, ಮನಸ್ಸಿನ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೂಲವ್ಯಾಧಿ, ಅಸ್ತಮ ಇಂತಹ ಕಾಯಿಲೆಗಳನ್ನು ವಾಸಿ ಮಾಡುವುದರಲ್ಲಿ ಸಹಕಾರಿಯಾಗಿದೆ.
ಜಠರಾಗ್ನಿ ಶಕ್ತಿಯನ್ನು ಹೆಚ್ಚಿಸುತ್ತದೆ.
ಮುಪ್ಪನ್ನು ತಡಮಾಡಲು ಸಹಾಯಕವಾಗಿದೆ ಮತ್ತು ಕುಂಡಲೀನಿ ಶಕ್ತಿಯ ವೃದ್ಧಿಗೆ ಉತ್ತಮವಾದ ಆಸನ.

ಮುಂಜಾಗ್ರತೆ:
ಅಧಿಕ ರಕ್ತದೊತ್ತಡ ಇರುವವರು
ಥೈರಾಯಿಡ್ ಸಮಸ್ಯೆ ಇರುವವರು
ಕಣ್ಣಿನ ಸಮಸ್ಯೆ, ಕುತ್ತಿಗೆ ಮತ್ತು ಭುಜಗಳ ನೋವಿನಿಂದಿರುವವರು ಈ ಆಸನವನ್ನು ಮಾಡುವುದು ಸೂಕ್ತವಲ್ಲ.

ವಿಶೇಷ ಸೂಚನೆ:
ಪ್ರಾರಂಭದಲ್ಲಿ ಗೋಡೆಯ ಸಹಾಯ ಅಥವಾ ನುರಿತ ಯೋಗಶಿಕ್ಷಕರ ಸಹಾಯದಿಂದ ಅಭ್ಯಾಸ ಮಾಡಿ ನಂತರ ಸ್ವತಂತ್ರವಾಗಿ ಅಭ್ಯಾಸ ಮಾಡುವುದು ಸೂಕ್ತ.

Leave a Comment