ಶೀಥಲೀಕರಣ ಘಟಕಗಳಲ್ಲಿ ರೈತರ ಉತ್ಪನ್ನಗಳ ದಾಸ್ತಾನಿಗೆ ಅನುವು-ಬಿ.ಸಿ.ಪಾಟೀಲ

ಧಾರವಾಡ,ಏ7-  ಕೊರೊನಾ ನಿಯಂತ್ರಣಕ್ಕೆ ಭಾರತ ಲಾಕ್‍ಡೌನ್ ಆಗಿರುವುದು ಒಂದು ರೀತಿಯಲ್ಲಿ ಸಾಮಾಜಿಕ ತುರ್ತು ಪರಿಸ್ಥಿತಿಯಾಗಿದೆ.ಬಹುತೇಕ ಪೌಲ್ಟ್ರಿ ಫಾರ್ಮುಗಳು ಹಕ್ಕಿಜ್ವರ ಹರಡುತ್ತಿದೆ ಎಂಬ ತಪ್ಪು ಕಲ್ಪನೆಯಿಂದ ಸಾವಿರಾರು ಕೋಳಿಗಳನ್ನು ಹೂತು ಹಾಕಿರುವುದರಿಂದ, ಪೌಲ್ಟ್ರಿಫಾರ್ಮಗಳಿಂದ ಆಹಾರ ಬೇಡಿಕೆ ಕಡಿಮೆಯಾಗಿದೆ, ಇದರ ಪರಿಣಾಮ ಮೆಕ್ಕೆಜೋಳ ಬೆಳೆದ ರೈತರ ಮೇಲೆ ಉಂಟಾಗಿದೆ. ಮೆಕ್ಕೆಜೋಳಕ್ಕೆ ಬೇಡಿಕೆ ಬರುವವರೆಗೂ ಕಾಯಲು ಸಿದ್ಧವಿರುವ ರೈತರ ಉತ್ಪನ್ನಗಳ ದಾಸ್ತಾನಿಗೆ ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಾಲ್ಕು ಶೀಥಲೀಕರಣ ಘಟಕಗಳಲ್ಲಿ ಯಾವುದೇ ಶುಲ್ಕ ವಿಧಿಸದೇ ಅವಕಾಶ ಕಲ್ಪಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ 19 ರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಮದರೆಯಾಗದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದ ಅವರು,ಕೊರೊನಾ ಸೋಂಕು ತಡೆಯಲು ಮಾರ್ಚ 24 ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪ್ರಧಾನ ಮಂತ್ರಿಗಳು ಅನಿವಾರ್ಯವಾಗಿ ಲಾಕ್‍ಡೌನ್ ಘೋಷಿಸಿದರು.ಇದರಿಂದ ಸಹಜವಾಗಿಯೇ ರೈತ ಸಮುದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.ಕೃಷಿ ಉತ್ಪನ್ನಗಳ ಸಾಗಣೆ ,ಮಾರುಕಟ್ಟೆ ಚಟುವಟಿಕೆಗಳಿಗೆ ತೊಂದರೆಯಾಗಿರುವುದು ವಾಸ್ತವದ ಸಂಗತಿಯಾಗಿದೆ.ಸರ್ಕಾರವೂ ಕೂಡ ರೈತರ ಹಿತ ಕಾಯಲು ಈ ನಿಟ್ಟಿನಲ್ಲಿ ದೇಶದಾದ್ಯಂತ  ಹಲವು ಸಡಿಲಿಕೆಗಳನ್ನು ಮಾಡಿದೆ. ಹಕ್ಕಿಜ್ವರ ಹರಡುವಿಕೆ ಬಗ್ಗೆ ಸುಳ್ಳು ವದಂತಿಗಳು ಹರಡಿದ ಪರಿಣಾಮ ಪೌಲ್ಟ್ರಿಫಾರ್ಮಗಳ ಮಾಲೀಕರು, ರಾಜ್ಯದ ಅನೇಕ ಕಡೆಗಳಲ್ಲಿ ಸಾವಿರಾರು ಕೋಳಿಗಳನ್ನು ಹೂತು ಹಾಕಿಬಿಟ್ಟರು ಇದರಿಂದ ಕೋಳಿಗಳ ಆಹಾರ ಬೇಡಿಕೆ ಇಲ್ಲವಾಯಿತು. ಇದರ ನೇರ ಪರಿಣಾಮ ಮೆಕ್ಕೆಜೋಳ ಬೆಳೆದ ರೈತರು ಎದುರಿಸಬೇಕಾಗಿದೆ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಇಳಿಕೆಯಾಗಿದೆ.ಜೂನ್‍ವರೆಗೂ ಕಾಯಲು ಶಕ್ತಿ,ಸಾಮಥ್ರ್ಯ ಇರುವ ರೈತರು ಇಚ್ಛೆಪಟ್ಟರೆ ಹುಬ್ಬಳ್ಳಿ,ಹುಮ್ನಾಬಾದ್,ವಿಜಯಪುರ ಹಾಗೂ ಬಾಗಲಕೋಟದಲ್ಲಿ ಇರುವ ಗೋದಾಮು ಮತ್ತು ಶೀಥಲೀಕರಣ ಘಟಕಗಳಲ್ಲಿ ದಾಸ್ತಾನು ಮಾಡಿಕೊಳ್ಳಲು ಉಚಿತವಾಗಿ ಸ್ಥಳಾವಕಾಶ ಕಲ್ಪಿಸಲಾಗುವುದು.ಅಲ್ಲಿ 3324 ಮೆಟ್ರಿಕ್ ಟನ್ ಧಾನ್ಯಗಳ ಸಂಗ್ರಹಣೆ ಸಾಮರ್ಥ್ಯವಿದೆ.ಜೂನ್ ಬಳಿಕೆ ಮೆಕ್ಕೆಜೋಳಕ್ಕೂ ಒಳ್ಳೆಯ ಬೆಲೆ ಸಿಗುವ ನಿರೀಕ್ಷೆ ಇದೆ.ತರಕಾರಿ,ಹಣ್ಣು ಬೆಳೆದ ರೈತರು ನೇರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಉತ್ಪನ್ನಗಳ ಕುರಿತು ಜನರಿಗೆ ಮಾಹಿತಿ ನೀಡಿ ಕೆಲವೆಡೆ ಮಾರಾಟ ಮಾಡುತ್ತಿರುವುದು ಅನುಕರಣೀಯ ವಿಧಾನವಾಗಿದೆ.ಉಳಿದ ರೈತರೂ ಈ ಪದ್ಧತಿ ಅನುಸರಿಸಬಹುದು ಎಂದರು.
ಕೃಷಿ ಚಟುವಟಿಕೆ ಕೈಗೊಳ್ಳಲು ಮತ್ತು ಉತ್ಪನ್ನಗಳ ಸಾಗಾಟಕ್ಕೆ ಟ್ರಾಕ್ಟರ್, ತೆರೆದ ಟೆಂಪೋ ಮತ್ತಿತರ ವಾಹನಗಳ ಅವಶ್ಯಕತೆ ಇರುತ್ತದೆ, ಅವುಗಳ ರಿಪೇರಿ,ಪಂಕ್ಚರ್ ತಿದ್ದುವುದು,ಕೃಷಿ ಉಪಕರಣಗಳು,ಪಂಪ್‍ಸೆಟ್‍ಗಳ ಮಾರಾಟ  ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಂಡು,ಕೃಷಿಕರ ಹಿತ ಕಾಯಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಬೀಜ,ಗೊಬ್ಬರ ಪೂರೈಕೆಗೆ ಈಗಲೇ ಎಚ್ಚರ ವಹಿಸಬೇಕು. ಜಾನುವಾರಗಳಿಗೆ ಮೇವು ಕೊರತೆಯಾಗುವ ಲಕ್ಷಣಗಳಿವೆ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ,ಹತ್ತಿ ಖರೀದಿ ಕಾರ್ಯ ಪ್ರಾರಂಭಕ್ಕೆ ಒತ್ತು ನೀಡಬೇಕು.ಕಡಲೆ ಖರೀದಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದರು.ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ.ಉತ್ತಮ ಮುಂಗಾರು ಮಳೆ ನಿರೀಕ್ಷೆಯಿದೆ.ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಯಾವುದೇ ತೊಂದರೆಗಳಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರೈತರ ಉತ್ಪನ್ನಗಳ ಮಾರಾಟಕ್ಕೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಮದು ಹೇಳಿದರು.ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ ಮಾತನಾಡಿ, 2020-21 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2,46,014 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.ಏಕದಳ,ದ್ವಿದಳ,ಎಣ್ಣೆಕಾಳುಗಳು ಹಾಗೂ ವಾಣಿಜ್ಯ ಬೆಳೆಗಳು ಸೇರಿದಂತೆ ಒಟ್ಟು 80988.65 ಕ್ವಿಂಟಾಲ್ ಬಿತ್ತನೆ ಬೀಜಗಳ ಅವಶ್ಯಕತೆ ಇದೆ. ಬರುವ ಸೆಪ್ಟಂಬರ್ ವರೆಗೆ 60,184 ಮೆ.ಟನ್ ರಸಗೊಬ್ಬರದ ಬೇಡಿಕೆ ಅಂದಾಜು ಮಾಡಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ,ರಸಗೊಬ್ಬರ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.ಧಾರವಾಡ ಎಪಿಎಂಸಿ ಅಧ್ಯಕ್ಷ ಮಹಾವೀರ ಅಳೆಬಸಪ್ಪನವರ (ಜೈನ್) ,ಕೆಎಂಎಫ್, ವಿವಿಧ ಗ್ರಾಮಗಳ  ರೈತ ಪ್ರತಿನಿಧಿಗಳು, ಬೀಜ,ರಸಗೊಬ್ಬರಗಳ ಮಾರಾಟಗಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು

ವ್ಯಕ್ತಪಡಿಸಿದರು.ಶಾಸಕರಾದ ಅಮೃತ ದೇಸಾಯಿ,ಪ್ರಸಾದ ಅಬ್ಬಯ್ಯ,ಜಿ.ಪಂ.ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ,ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ,ಕೃಷಿ ವಿ.ವಿ.ಕುಲಪತಿ ಡಾ.ಎಂ.ಬಿ.ಚೆಟ್ಟಿ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ಬೀಜ,ರಸಗೊಬ್ಬರ,ಮಾರುಕಟ್ಟೆ ಕುರಿತ ವಿವರಗಳನ್ನು ಸಭೆಗೆ ಒದಗಿಸಿದರು.
ಶ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Comment