ಶೀಘ್ರವೇ ಬಾಕಿ ವಿದ್ಯುತ್ ಬಿಲ್ಲು ಪಾವತಿಸಲು ಮನವಿ

ಬಳ್ಳಾರಿ,ಜೂ.30: ಕೋವಿಡ್-2019ರ ವೈರಸ್‍ನಿಂದ ನಿಮಿತ್ತ ಮತ್ತು ಸರ್ಕಾರ ಆದೇಶದ ಮೇರೆಗೆ ಜೂನ್-2020 ವಿದ್ಯುತ್ ಬಿಲ್ಲು ಪಾವತಿಗೆ ಅವಕಾಶ ನೀಡಿರುವ ಅವಧಿಯು ಮುಕ್ತಾಯಗೊಂಡಿರುತ್ತದೆ. ಸದರಿ ಗ್ರಾಹಕರು ಶೀಘ್ರವೇ ಬಾಕಿವಿರುವ ವಿದ್ಯುತ್ ಬಿಲ್‍ನ್ನು ಶೀಘ್ರವೇ ಪಾವತಿಸಬೇಕು ಎಂದು ಜೆಸ್ಕಾಂ ನಗರ ಉಪವಿಭಾಗ-1 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಬಿಲ್ ಪಾವತಿಸದೇ ಇದ್ದಲ್ಲಿ ಜುಲೈ 01 ರಿಂದ ಬಾಕಿ ಇರುವ ಎಲ್ಲಾ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಗ್ರಾಹಕರು ವಿದ್ಯುತ್ ಕಡಿತಗೊಳಿಸುವುದನ್ನು ತಪ್ಪಿಸಲು ನಿಗದಿತ ಸಮಯದೊಳಗೆ ವಿದ್ಯುತ್ ಬಿಲ್‍ನ್ನು ಆನ್‍ಲೈನ್ ಮೂಲಕ ಪಾವತಿಸಿ, ನಿರಂತರ ವಿದ್ಯುತ್‍ನ್ನು ಪಡೆಯಿರಿ. ಜೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್‍ನ್ನು ಆನ್‍ಲೈನ್ ಪೇಮೆಂಟ್ ಆ್ಯಪ್‍ಗಳಾದ ಭೀಮ್ ಆ್ಯಪ್, ಪೋನ್ ಪೇ, ಗೂಗಲ್ ಪೇ ಅಥವಾ ಕಂಪನಿಯ ಕೌಂಟರ್‍ಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Share

Leave a Comment