ಶೀಘ್ರವೇ ಡಮ್ಕಿ ಡಮಾರ್..

ಸಂಗೀತ ನಿರ್ದೇಕರಾಗಿ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಸದ್ಗುಣಮೂರ್ತಿ, ನಿರ್ಮಾಪಕರಾಗಿ ಭಡ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲ ’ಡಮ್ಕಿ ಡಮಾರ್ ಚಿತ್ರದ ಮೂಲಕ ಪುತ್ರ ಪ್ರದೀಪ್ ವರ್ಮಾ ಅವರನ್ನು ನಾಯಕನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ಪ್ರದೀಪ್ ವರ್ಮಾ ಹಲವು ಚಿತ್ರಗಳಿಗೆ ಸಂಗೀತ ನೀಡಿದ್ದು ಅಪ್ಪನ ಹಾದಿಯಲ್ಲಿ ಸಾಗಿದ್ದಾರೆ. ಇದೀಗ ನಾಯಕನಾಗಿ ಚಿತ್ರರಂಗದಲ್ಲಿ ಒಂದು ಕೈ ನೋಡಲು ಮುಂದಾಗಿದ್ದಾರೆ. ಅವರಿಗೆ ನಿರ್ದೇಶಕ ಎಸ್.ಕೆ ಶ್ರೀನಿವಾಸ್ ಸಾಥ್ ನೀಡಿದ್ದಾರೆ.

ಚಿತ್ರದಲ್ಲಿ ಚೈತ್ರಾ ಶೆಟ್ಟಿ ಮತ್ತು ಅನೂಷ್ಕಾ ಶೆಟ್ಟಿ ನಾಯಕಿಯರು. ಚಿತ್ರದಲ್ಲಿ ನಟಿಸಿರುವ ಬಹುತೇಕರಿಗೆ ಇದು ಮೊದಲ ಚಿತ್ರ. ಕಳೆದ ವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಹಮ್ಮಿಕೊಳ್ಳಲಾಗಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ ಗೋವಿಂದು, ಸಂಗೀತ ನಿರ್ದೇಶಕ ಮನೋಮೂರ್ತಿ,ಸೇರಿದಂತೆ ಹಲವು ಗಣ್ಯರು ಆಗಮಿಸಿ ಚಿತ್ರಕ್ಕೆ ಮತ್ತು ಕಲಾವಿದರಿಗೆ ಒಳ್ಳೆಯದಾಗಲಿ ಎಂದು ಹರಸಿ ಹಾರೈಸಿದರು.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ, ಸದ್ಗುಣ ಮೂರ್ತಿ,ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಮಗನನ್ನು ಅದೇ ಹಾದಿಯಲ್ಲಿ ಕರೆದೊಯ್ದಿದ್ದೆ. ಇದ್ದಕ್ಕಿದ್ದ ಹಾಗೆ ಆತ ನಾಯಕನಾಗಿದ್ದಾನೆ. ನಿಮ್ಮ ಎಲ್ಲರ ಸಹಕಾರ ಪ್ರೀತಿ ವಿಶ್ವಾಸ ಆತನ ಮೇಲೆ ಇರಲಿ.

ಚಿತ್ರದ ಹೆಸರು ಬಿಟ್ಟು ಉಳಿದೆಲ್ಲವೂ ಇಂಗ್ಲೀಷ್‌ನಲ್ಲಿದೆ. ಇದು ನಿರ್ಮಾಪಕನಾಗಿ ನನಗೆ ಬೇಜಾರಾಗಿದೆ. ಮಾತೃಭಾಷೆ ತಮಿಳಾದರೂ ನಾನು ತಮಿಳು ಕನ್ನಡಿಗ. ಕನ್ನಡದ ಮೇಲೆ ಎಲ್ಲಿಲ್ಲದ ಪ್ರೀತಿ ಅಭಿಮಾನವಿದೆ. ಹೀಗಾಗಿ ಮುಂದೆ ಚಿತ್ರದಲ್ಲಿ ಎಲ್ಲವೂ ಕನ್ನದಲ್ಲಿಯೇ ಇರುವಂತೆ ನೋಡಿಕೊಳ್ಳುತ್ತೇನೆ. ಆಗಿರುವ ತಪ್ಪಿಗೆ ಕ್ಷಮೆಯಾಚಿಸುತ್ತೇನೆ ಮುಂದೆ ತಪ್ಪು ಆಗದಂತೆ ಎಚ್ಚರಿಕೆ ವಹಿಸುತ್ತೇನೆ. ಕನ್ನಡ ಡಿಂಡಿಮ ನಿರಂತರವಾಗಿರಬೇಕೆನ್ನುವ ಆಶಯ ವ್ಯಕ್ತಪಡಿಸಿದರು.

ನಟ ಪ್ರದೀಪ್ ವರ್ಮಾ, ಚಿತ್ರಗಳಲ್ಲಿ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಒಳ್ಳೆಯ ಕಥೆ ಸಿಕ್ಕಿತು. ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದೇನೆ. ಡಮ್ಕಿ ಡಮಾರ್‌ನಲ್ಲಿ ಒಳ್ಳೆಯ ಕಥೆ ಇದೆ ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ. ಚಿತ್ರ ಆರಂಭಕ್ಕೂ ಮುನ್ನ ನಾಲ್ಕು ಕಥೆ ಆಯ್ಕೆ ಮಾಡಿಕೊಂಡಿದ್ದೆವು. ಅದರಲ್ಲಿ ಈ ಕಥೆ ಇಷ್ಟವಯಿತು. ಹೊಸ ತಂಡ ಚಿತ್ರ ಮಾಡಿದ್ದೇವೆ. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ನೀಡಿದೆ ಸದ್ಯದಲ್ಲಿಯೇ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.

ನಿರ್ದೇಶಕ ಎಸ್.ಕೆ ಶ್ರೀನಿವಾಸ್, ತಂತ್ರಜ್ಞರೇ ಸೇರಿಕೊಂಡು ಮಾಡಿರುವ ಚಿತ್ರ ಇದು. ವಾರದ ದಿನಗಳಲ್ಲಿ ಕೆಲಸ ಮಾಡಿ ವಾರಾಂತ್ಯದ ದಿನಗಳನ್ನು ರಜೆಯ ಮೂಡಿನಲ್ಲಿ ಕಳೆಯಲು ಹೊರಡುವ ಹುಡುಗ ಹುಡುಗಿಯರು ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಜೊತೆಗೆ ಚಿತ್ರಕ್ಕೆ ಯಾಕೆ ಹೆಸರಿಟ್ಟಿದ್ದೇವೆ ಎನ್ನುವುದಕ್ಕೆ ಸಮಜಾಯಿಷಿಯನ್ನೂ ನೀಡಿದ್ದೇವೆ ಎಂದು ವಿವರ ನೀಡಿದರು.

ನಾಯಕಿ ಚೈತ್ರಾ ಶೆಟ್ಟಿ, ಮೊದಲ ಚಿತ್ರ. ಮೂಲತಃ ಭರತನಾಟ್ಯ ಕಲಾವಿದೆ. ಮುಗ್ದ ಹುಡುಗಿಯ ಪಾತ್ರ ಎಲ್ಲರ ಸಹಕಾರ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡರು.

Leave a Comment