ಶೀಘ್ರದಲ್ಲಿಯೇ ಕುಶಾಲನಗರದವರೆಗೆ ಹೊಸ ರಸ್ತೆ ನಿರ್ಮಾಣ

ಮೈಸೂರು.ಫೆ.20. ರಾಜ್ಯದಲ್ಲಿ ಬೆಂಗಳೂರಿನ ನಂತರ ಅಭಿವೃದ್ಧಿ ಹೊಂದುತ್ತಿರುವ ಮೈಸೂರು ನಗರಕ್ಕೆ ಮತ್ತಷ್ಟು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮೈಸೂರು-ಕೊಡಗು ಕ್ಷೇತ್ರ ಸಂಸದ ಪ್ರತಾಪಸಿಂಹ ತಿಳಿಸಿದರು.
ಅವರು ಇಂದು ಬೆಳಿಗ್ಗೆ ನಗರದ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಾ ಮೈಸೂರು-ಬೆಂಗಳೂರು ನಡುವಿನ ಸಂಚಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು ಇದರಿಂದ ಎರಡೂ ನಗರಗಳಿಗೆ ತಲುಪುವ ಸಮಯ ಕೂಡಾ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರವು ಈ ಎರಡೂ ನಗರಗಳ ನಡುವೆ ಹೊಸ ಎಕ್ಸ್ ಪ್ರಸ್ ಹೆದ್ದಾರಿಯನ್ನು ನಿರ್ಮಿಸಲು ಯೋಚಿಸಿದೆ ಎಂದರೂ. 118ಕಿ.ಮೀ. ದೂರದ ಈ ಎರಡು ನಗರಗಳ ನಡುವೆ ಎಕ್ಸ್ ಪ್ರಸ್ ಹೆದ್ದಾರಿ ನಿರ್ಮಾಣಗೊಂಡಲ್ಲಿ 3 ಗಂಟೆಯ ಬದಲು ಒಂದೂವರೆ ಗಂಟೆಯೊಳಗೆ ತಲುಪಲು ಸಾಧ್ಯವಾಗುವಂತೆ 10ಪಥಗಳುಳ್ಳ ಹೆದ್ದಾರಿಯನ್ನು ನಿರ್ಮಿಸಲಾಗುವುದು. ಈ 10ಪಥಗಳ ಪೈಕಿ 6ರಲ್ಲಿ ಸಂಚರಿಸುವ ವಾಹನಗಳು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಹೆದ್ದಾರಿ ನಿರ್ಮಾಣಕ್ಕೆ ಒಟ್ಟು 7,400ಕೋಟಿ ರೂ.ಗಳು ವೆಚ್ಚ ತಗುಲಲಿದೆ ಎಂದರು.
ಈ ಹೊಸ ಹೆದ್ದಾರಿಯಲ್ಲಿ ಬರುವ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿಗಳಲ್ಲಿ ಬೈಪಾಸ್‍ಗಳನ್ನು ನಿರ್ಮಿಸಲಾಗುವುದು. ಎಂದರು. ಈ ಬೃಹತ್ ಕಾಮಗಾರಿಯನ್ನು ನಿರ್ಮಿಸಲು ಮಧ್ಯಪ್ರದೇಶದ ಮೆ|| ದಿಲೀಪ್ ಬಿಲ್ಡ್ ಕಾನ ಲಿಮಿಟೆಡ್ ಇವರೊಂದಿಗೆ ಒಪ್ಪಂಡ ಮಾಡಿಕೊಳ್ಳಲಾಗಿದೆ ಎಂದು ಸಂಸದರು ಹೇಳಿದರು.
ಬೆಂಗಳೂರಿನಿಂದ ದ.ಕ. ಜಿಲ್ಲೆಯ ಬಂಟ್ಟಾಳಗಳ ನಡುವಿನ 374ಕಿ.ಮೀ. ರಸ್ತೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275 ಎಂದು 2014ರಲ್ಲಿಯೇ ಘೋಷಿಸಿದ್ದು ಇವೆರಡೂ ನಗರಗಳಿಗೆ ಸಂಜರಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವದಿಸೆಯಲ್ಲಿ ಮೈಸೂರಿನಿಂದ ಕುಶಾಲನಗರದವರೆಗೆ (ಮೈಸೂರು ನಗರಕ್ಕೆ ಪ್ರವೇಶಿಸದಂತೆ) ಹೊಸ ರಸ್ತೆಯನ್ನು ನಿರ್ಮಿಸಲಾಗುವುದು. ಈ ರಸ್ತೆಯು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯ ಬಳಿಯಲ್ಲಿ ತಿರುವಿನಿಂದ ಆರಂಭಗೊಂಡು ಹಳೆಹುಂಡುವಾಡಿ, ಹೊಸ ರಾಮೇನಹಳ್ಳಿ ಮೂಲಕ ಹಾಲಿ ಇರುವ ಮೈಸೂರು ಹುಣಸೂರು ರಸ್ತೆಗೆ ಸಂಪರ್ಕ
ಕಲ್ಪಿಸಲಾಗುವುದು. ಈ ರಸ್ತೆಯು 4 ಪಥಗಳನ್ನು ಹೊಂದಿದ್ದು ಇದರ ನಿರ್ಮಾಣಕ್ಕಾಗಿ 2,100ಕೋಟಿರೂಗಳ ವೆಚ್ಚ ತಗುಲಲಿದ್ದು, ಈ ಬಗ್ಗೆ ಭೂ ಸ್ವಾಧೀನ ಪ್ರಿಯೆಯೂ ಆರಂಭಗೊಂಡಿದೆ ಎಂದರು. ಈ ಹೊಸ ರಸ್ತೆಯು 2022ಅಂತ್ಯದ ವೇಳೆಗೆ ಪೂರ್ಣಗೊಳ್ಳುವುದೆಂದರು. ಈ ಹೊಸ ರಸ್ತೆ ನಿರ್ಮಾಣಗೊಂಡ ನಂತರ ಬೆಂಗಳೂರಿನಿಂದ ಮಡಿಕೇರಿಗೆ 5 ಗಂಟೆಗಳು ಸಾಕಾಗುತ್ತದೆ. ಹಾಲಿ ಈ ಎರಡೂ ನಗರಗಳ ಪ್ರಯಾಣ ಅವಧಿ 7 ಗಂಟೆಗಳಿಗೂ ಹೆಚ್ಚು ಇದೆ.
ಈ ಮೇಲಿನ ಎರಡೂ ರಸ್ತೆಗಳು ನಿರ್ಮಾಣಗೊಳ್ಳುವುದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯಗಳು ಕಡಿಮೆಯಾಗುವ ಸಂಭವ ಹೆಚ್ಚಾಗಿದೆ ಎಂದು ಪ್ರತಾಮಸಿಂಹ ತಿಳಿಸಿದರು.
ಮೈಸೂರಿನ ಬಳಿ ಇರುವ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ವಿಸ್ತರಿಸಲು ಇನ್ನೂ 240 ಎಕರೆ ಜಮೀನು ಅವಶ್ಯವಿದ್ದು ಈ ದಿಸೆಯಲ್ಲಿ ರಾಜ್ಯಸರ್ಕಾರದೊಂದಿಗೆ ವಿಚಾರ ವಿನಿಮಯ ಪ್ರಗತಿಯಲ್ಲಿದ್ದು ವಿಮಾನ ನಿಲ್ದಾಣದ ವಿಸ್ತರಭೆಗೆ ಮುಖ್ಯಮಂತ್ರಿ ಯಡಿಯೂರಪ್ಪರವರ ಬಳಿ ಹಣ ನೀಡುವಂತೆ ಮನವಿ ಮಾಡಿಕೊಂಡಿರುವುದಾಗಿ ಪ್ರತಾಪ ಸಿಂಹ ನುಡಿದರು.
ಇಂದಿನ ಸುದ್ದಿ ಗೋಷ್ಠಿಯಲ್ಲಿ ಬಿ.ಜೆ.ಪಿ.ಯ ನೂತನ ಜಿಲ್ಲಾಧ್ಯಕ್ಷ ಅಧೀಕ್ಷಕ ಕಾರ್ಯಪಾಲಿಕ (ಸೂಪರಿಟೆಂಡೆಂಟ್ ಇಂಜಿನಿಯರ್) ಶ್ರೀಧರ್ ಉಪಸ್ಥಿತರಿದ್ದರು.

Leave a Comment