ಶಿಸ್ತು ಸಂಯಮದಿಂದ ವಿದ್ಯಾರ್ಜನೆಗೆ ಅರ್ಥಬರುತ್ತದೆ

ದಾವಣಗೆರೆ.ಡಿ.5; ಆಧುನಿಕತೆಯ ತಂತ್ರe್ಞÁನದ ಭರಾಟೆಯಲ್ಲಿ ಶಿP್ಷÀಣದ ಮೌಲ್ಯ, ಮಾನವೀಯತೆ ಕಡಿಮೆ ಆಗುತ್ತಿರುವುದು ದುರಂತ. ಕೇವಲ ಅಂಕಪಟ್ಟಿಗೆ ಸೀಮಿತವಾದ ಇಂದಿನ ಶಿP್ಷÀಣದಿಂದ ಮಕ್ಕಳ ಆದರ್ಶ, ತತ್ವ, ಸೇವಾ ಮನೋಭಾವನೆ, ಕನ್ನಡ ಪ್ರೇಮ ಇವೆಲ್ಲವೂ ಮರೆಯಾಗುತ್ತಿದೆ. ಶಿP್ಷÀಣದ ಜತೆಯಲ್ಲಿ  ಸಾಹಿತ್ಯ ಕೃಷಿ, ಸಾಂಸ್ಕøತಿಕ ಸಾಧನೆ, ನಮ್ಮ ನಾಡು-ನುಡಿಗಳ ಬಗ್ಗೆ ಕಾಳಜಿಯೊಂದಿಗೆ ಬದ್ಧತೆಯಿಂದ ವ್ಯಾಸಂಗ ಮಾಡಿದರೆ ಶಿP್ಷÀಣಕ್ಕೆ ಪರಿಪೂರ್ಣತೆ ಬರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಜಿ¯್ಲÁಧ್ಯP್ಷÀರಾದ ಬಿ.ಎಂ. ಸದಾಶಿವಪ್ಪ ಶ್ಯಾಗಲೆ ಹೇಳಿದರು.
ನಗರದ ಕೆ.ಬಿ. ಬಡಾವಣೆಯ ಡಿ.ಜೆ.ವಿ. ಸರ್ಕಾರಿ ಪ್ರೌಢಶಾಲೆ ಹಾಗೂ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿನಿನ್ನೆ ದಿನ ಶಾಲಾ ಆವರಣದಲ್ಲಿ ನಡೆದ ಶಾಲಾ ಕಾಲೇಜು ಅಂಗಳದಲ್ಲಿ  ಸಾಹಿತ್ಯೋತ್ಸವ, ದತ್ತಿ ಉಪನ್ಯಾಸ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯP್ಷÀತೆ ವಹಿಸಿ ಅವರು ಮಾತನಾಡಿದರು.ಸಮಾರಂಭವನ್ನು ಉದ್ಘಾಟನೆ ಮಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯP್ಷÀರಾದ ಬಿ. ವಾಮದೇವಪ್ಪ ಮಾತನಾಡಿ, 10ನೇ ಶತಮಾನದ ಜೈನ ಪರಂಪರೆಯ ಕನ್ನಡ ಭಾಷಾ ಸಂಸ್ಕøತಿಗೆ ಅನ್ಯಭಾಷಿಗರ ಕೊಡುಗೆ ಅಪಾರವಾಗಿದೆ. ಇಡೀ ಭಾರತದಲ್ಲಿ  ಕನ್ನಡ ಭಾಷೆಗೆ ಇದ್ದ ಸ್ಥಾನಮಾನ, ಘನತೆ, ಗೌರವ ಬೇರೆ ಭಾಷೆಗಳಿಗಿಲ್ಲ. ಅದನ್ನು ಉಳಿಸಿ ಬೆಳೆಸುವ ಆದ್ಯ ಕರ್ತವ್ಯ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದರು.
“ಕರ್ನಾಟಕ ವೈಭವ ನಿರ್ಮಾಣದಲ್ಲಿ ಕವಿಗಳ ಪಾತ್ರ” ಎಂಬ ವಿಷಯವಾಗಿ ಉಪನ್ಯಾಸ ನೀಡಿದ ಗೋಪನಾಳು ಸರ್ಕಾರಿ  ಪದವಿ ಪೂರ್ವಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಓಹಿಲೇಶ್ವರ್ ಮಾತನಾಡಿ, 10ನೇ ಶತಮಾನದ ಕವಿ ಪುಂಗವರು ಕನ್ನಡ ಸಾಹಿತ್ಯಕ್ಕೆ ಭದ್ರವಾದ ಬುನಾದಿ ಹಾಕಿದ್ದು ಇಂದು ಈ ಭಾಷೆ ಇಷ್ಟು ಸಮೃದ್ಧವಾಗಿ ಬೆಳೆಯಲು ಕಾರಣವಾಗಿದೆ. ನಂತರದ ದಿನಮಾನಗಳಲ್ಲಿ ವಚನ ಸಾಹಿತ್ಯ, ದಾಸಸಾಹಿತ್ಯ ಹೀಗೆ ಹತ್ತು ಹಲವು ಪ್ರಕಾರಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯೊಂದಿಗೆ ಕನ್ನಡ ಭಾಷೆ ವಿಶ್ವ ಮಾನ್ಯತೆ ಪಡೆಯಲು ಕಾರಣವಾಗಿದೆ ಎಂದರು.
ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಕುಮಾರ್ ಹೆಚ್. ಪ್ರಶಸ್ತಿ ಪತ್ರ ಸ್ಮರಣ ಕೆ ನೀಡಿ ಗೌರವಿಸಿ, ಸನ್ಮಾನಿಸಿದರು. ಪರಿಷತ್ತಿನ ಮಹಿಳಾ ಗೌರವ ಕಾರ್ಯದರ್ಶಿಯಾದ ಎಸ್.ಎಂ. ಮಲ್ಲಮ್ಮ, ಸಾಲಿಗ್ರಾಮ ಗಣೇಶ್ ಶೆಣೈ, ನಿರ್ದೇಶಕ ಎಂ. ಷಡಾP್ಷÀರಪ್ಪ, ದತ್ತಿ ದಾನಿಗಳಾದ ವಿ. ಬಾಬುಲಾಲ್ ಜೈನ್, ವಿ. ಲಲಿತ್‍ಕುಮಾರ್ ಜೈನ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿP್ಷÀಕಿ ದಿನಮಣ  ಕೆ.ಎಸ್‍ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ಕಾರ್ಯಕ್ರಮ ನಿರೂಪಣೆ ಮಾಡಿದ ಕನ್ನಡ ಶಿP್ಷÀಕ ಪಂಪಾಪತಿ ಪಿ.ಬಿ. ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Leave a Comment