ಶಿಷ್ಟಾಚಾರ ಬದಿಗೊತ್ತಿ ಪುತ್ರ ನಿಖಿಲ್ ಅಭಿನಯದ ಚಿತ್ರೀಕರಣಕ್ಕೆ ಭೇಟಿ ನೀಡಿದ ಸಿ.ಎಂ.

ಬೆಂಗಳೂರು, ಜು. ೪- ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇಂದು ಬೆಳಿಗ್ಗೆ ದಿಢೀರನೆ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಪುತ್ರ ನಿಖಿಲ್ ಕುಮಾರ್ ಅಭಿನಯದ ಚಿತ್ರದ ಚಿತ್ರೀಕರಣ ಸೆಟ್‌ಗೆ ಭೇಟಿ ನೀಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದರು.
ಯಾವುದೇ ಬೆಂಗಾವಲು ವಾಹನವಿಲ್ಲದ ಕುಮಾರಸ್ವಾಮಿ ಅವರು ಅರಮನೆ ಮೈದಾನಕ್ಕೆ ತೆರಳಿ ಪುತ್ರನ ಸೀತಾರಾಮ ಕಲ್ಯಾಣ ಚಿತ್ರೀಕರಣದ ಸೆಟ್‌ಗೆ ಭೇಟಿ ನೀಡಿ ಪುತ್ರ ಹಾಗೂ ಚಿತ್ರದ ತಂಡದೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.
ಚಿತ್ರ ಯಾವ ಹಂತದಲ್ಲಿದೆ. ಯಾವಾಗ ಪೂರ್ಣಗೊಳ್ಳಲಿದೆ ಎನ್ನುವ ಬಗ್ಗೆ ಕುಮಾರಸ್ವಾಮಿ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಿಂದ ಮಾಹಿತಿ ಪಡೆದರು.
ದಿಢೀರನೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಿತ್ರೀಕರಣ ಸೆಟ್‌ಗೆ ಆಗಮಿಸಿದ್ದರಿಂದ ಸಹಜವಾಗಿಯೇ ಚಿತ್ರತಂಡದ ಎಲ್ಲರೂ ಖುಷಿ ವ್ಯಕ್ತಪಡಿಸಿದರು.

Leave a Comment