ಶಿವಾಜಿ ಸುರತ್ಕಲ್ ಅದ್ಭುತ ಚಿತ್ರ : ರಾಹುಲ್ ದ್ರಾವಿಡ್

ಬೆಂಗಳೂರು, ಫೆ 19 – ‘ಶಿವಾಜಿ ಸುರತ್ಕಲ್’ ರಮೇಶ್ ಅರವಿಂದ್ ಅಭಿನಯದ 101ನೇ ಚಿತ್ರ ಪತ್ತೆದಾರಿ ಕಥಾಹಂದರವಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ
ಶುಕ್ರವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆಯಾದರೂ, ಖ್ಯಾತಿ ಕ್ರಿಕೆಟಿಗ ಈ ಚಿತ್ರದ ಮೊದಲ ಪ್ರೇಕ್ಷಕರಾಗಿದ್ದಾರೆ ಹೌದು, ಚಿತ್ರತಂಡ ಅವರಿಗಾಗಿಯೇ ಮಂಗಳವಾರ ವಿಶೇಷ ಪ್ರದರ್ಶನ ಏರ್ಪಡಿಸಿತ್ತು

ಚಿತ್ರತಂಡದೊಡನೆ ಕುಳಿತ ಸಿನಿಮಾ ವೀಕ್ಷಿಸಿದ ರಾಹುಲ್ ದ್ರಾವಿಡ್ “ಶಿವಾಜಿ ಸುರತ್ಕಲ್ ಅದ್ಭುತವಾಗಿದೆ ಕ್ಲೈಮ್ಯಾಕ್ಸ್ ಬೆರಗುಗೊಳಿಸಿತು ಎಲ್ಲ ಪ್ರೇಕ್ಷಕರಿಗೂ ಇದೇ ಬಗೆಯ ಅನುಭವವಾಗಲಿದೆ” ಎಂದು ಹೇಳಿದ್ದಾರೆ

ಉತ್ತಮ ಚಿತ್ರ ನೀಡಿದ್ದಕ್ಕಾಗಿ ನಾಯಕ ನಟ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ಶ್ರೀವತ್ಸ ಅವರಿಗೆ ಧನ್ಯವಾದ ಸಲ್ಲಿಸಿದ್ದು, ‘ಶಿವಾಜಿ ಸುರತ್ಕಲ್’ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

Leave a Comment