ಶಿವರಾತ್ರಿ ಹಬ್ಬಕ್ಕೆ ‘ಉಘೇ ಉಘೇ…ಮಹದೇಶ್ವರ

ಕಿರಿತೆರೆಯಲ್ಲಿ ಮೂಡಿ ಬರುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಯಶಸ್ವಿ ೫೦ನೇ ಸಂಚಿಕೆಯನ್ನು ಪೂರ್ಣಗೊಳಿಸಿದ್ದು ಶಿವರಾತ್ರಿ ಹಬ್ಬದಂದು ವಿಶೇಷ ಸಂಚಿಕೆ ಪ್ರಸಾರವಾಗಲಿದೆ.ಜೀ ವಾಹಿನಿಯಲ್ಲಿ ಉಘೇ ಉಘೇ ಮಾದೇಶ್ವರ ಪ್ರಸಾರವಾಗುತ್ತಿದ್ದು ಇಡೀ ತಂಡ ಮಲೆ ಮಹದೇಶ್ವರ ಸನ್ನಿಧಾನಕ್ಕೆ ಭೇಟಿ ನೀಡಿ ಸ್ವಾಮಿಯ ಮೂಲ ನೆಲೆ ಸ್ಪರ್ಶಿಸಿ ಪುಳಕಗೊಂಡಿದೆ.

ಧಾರಾವಾಹಿ ವಾರಾಂತ್ಯದಲ್ಲಿ ಮಹತ್ವದ ೫೦ ಸಂಚಿಕೆಗಳನ್ನು ಪೂರೈಸಿದೆ. ಭೇಟಿ ನೀಡಿದ ಮೇಲೆ ಪ್ರತಿಯೊಬ್ಬರೂ ಕಥೆಯನ್ನು ತಮ್ಮ ಪಾತ್ರವನ್ನು ಗ್ರಹಿಸುವ ರೀತಿ ಬದಲಾಗುತ್ತದೆ. ಧಾರಾವಾಹಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನೆರವಾಗುತ್ತದೆ ಎಂದು ಪ್ರಧಾನ ನಿರ್ದೇಶಕ ಕೆ.ಮಹೇಶ್ ಸುಖಧರೆ ಹೇಳಿದ್ದಾರೆ

ಮಲೆ ಮಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ ಮೇಲೆ ಇದೇ ದೇವರ ಪಾತ್ರವನ್ನು ಮಾಡುತ್ತಿರುವುದಕ್ಕೆ ಮತ್ತಷ್ಟು ಹೆಮ್ಮೆ ಎನ್ನಿಸಿತು ಎಂದು ಮರಿದೇವ ಪಾತ್ರಧಾರಿ ಮಾ|ಅಮೋಘ ಹೇಳಿದರು.

ಮಾದೇಶ್ವರರ ತಾಯಿ-ತಂದೆಯರಾಗಿ ಪಾತ್ರ ನಿರ್ವಹಿಸುತ್ತಿರುವ ನಮಗೆ ಇಲ್ಲಿನ ಭಕ್ತರೂ ವಿಶೇಷ ಗೌರವದಿಂದ ಮಾತಾಡಿಸುತ್ತಿದ್ದರು. ಪಾತ್ರ ದೊರಕಿರುವುದು ಪುಣ್ಯವೆಂಬುದೇ ನಮ್ಮ ಭಾವನೆ. ಇಲ್ಲಿ ಭೇಟಿ ನೀಡಿದ್ದು ವಿಶೇಷ ಅನುಭವ ನೀಡಿತು ಎನ್ನುತ್ತಾರೆ ಉತ್ತರಾಜಮ್ಮ ಪಾತ್ರಧಾರಿ ಕೃತಿ ಹಾಗೂ ಕಲ್ಯಾಣದೇವ ಪಾತ್ರಧಾರಿ ಚಂದ್ರಶೇಖರ ಹೇಳಿಕೊಂಡರು.

ಶಾಸ್ತ್ರಿ. ಕಂಸಾಳೆ ನೃತ್ಯ ಹಾಗೂ ಮಾದೇಶ್ವರ ಕಾವ್ಯ ಗಾಯನ ಒಳಗೊಂಡ ವಿಶೇಷ ಸಂಚಿಕೆ ‘ಉಘೇ ಉಘೇ ಮಾದೇಶ್ವರ-ಶಿವರಾತ್ರಿ ಯಾತ್ರಾ ಸಮಯ’ ಮಾ.೪ ರಂದು ಬೆಳಗ್ಗೆ ೧೦ ಗಂಟೆಗೆ ಹಾಗು ರಾತ್ರಿ ೧೨:೩೦ ಕ್ಕೆ ‘ಉಘೇ ಉಘೇ ಮಾದೇಶ್ವರ -ಶಿವರಾತ್ರಿ ಕಥಾ ಸಮಯ’ ವಿಶೇಷ ಸುದೀರ್ಘ ಸಂಚಿಕೆ ಪ್ರಸಾರವಾಗಲಿದೆ.

Leave a Comment