ಶಿವರಾತ್ರಿ ಪ್ರಯುಕ್ತ ಶಿವಾಲಯದಲ್ಲಿ ಕಾರ್ಯಕ್ರಮ

ಧಾರವಾಡ ಫೆ.19-ನಗರದ ಕೊಪ್ಪದಕೆರಿಯ ಎಂ.ಬಿ ನಗರದ ಶಿವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ದಿ.21,22 ರಂದುಶಿವಾಲಯ ವಿಶ್ವಸ್ಥ ಮಂಡಳಿಯ ವತಿಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ ಎಂದು ಶಿವಾಲಯದ ಅಧ್ಯಕ್ಷ ಡಾ,ಎಸ್.ಆರ್.ರಾಮನಗೌಡರ ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಶಿವಾಲಯ ಆವರಣ ಸುಮಾರು 4 ಗುಂಟೆ ಜಾಗವಿದ್ದು 1992 ರಲ್ಲಿ ದೇವಾಲಯ ನಿರ್ಮಾಣಗೊಂಡಿದ್ದು ಶಿರಾತ್ರಿ ಹಬ್ಬದ ನಿಮಿತ್ತು ನವೀಕರಿಸಲಾಗಿದ್ದು ಸುಮಾರು 20 ಲಕ್ಷ ರೂ ವೆಚ್ಚವಾಗಿದ್ದು ಮಹಾನಗರ ಪಾಲಿಕೆಯವರು ಹಣ ಮಂಜೂರು ಮಾಡಿದ್ದಾರೆಂದು ವಿವರಿಸಿದರು.
ದಿ.21 ರಂದು ಬೆಳಿಗ್ಗೆ 5-30 ಕ್ಕೆ  ಶಿವನ ಮೂರ್ತಿಗೆ ಮಹಾರುದ್ರಾಭಿಷೇಕ ಅಲಂಕಾರ ಸೇವೆ ನಡೆಯಲಿದ್ದು ನಂತರ ಸಾರ್ವಜನಿಕರು ಅಭಿಷೇಕ ಮಾಡಲಿದ್ದಾರೆಂದರು.ಶುಕ್ರವಾರ  5 ಗಂಟೆಗೆ ಶಿವಾಲಯದ ಆವರಣಲದಲಿ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸಹಾಯಕ ಪೀಲಿಸ ಆಯುಕ್ತ ರುದ್ದಪ್ಪ ಎಮ್.ಎನ್ ಅವರನ್ನು ಸನ್ಮಾನಿಸಲಾಗುವದು.
ದಿ.22 ರಂದು ಶಿವನಿಗೆ ಬುತ್ತಿ ಪೂಜೆ ಜರುಗಲಿದ್ದು ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಶೋಕ ಬೇಲೂರ,ಬಸವರಾಜ ಕಡಕೋಳ, ಸಂಜಯ ಭಾವಿಕಟ್ಟಿ,ಶಿವಾನಂದ ಹಂಜಿ, ಸಂಜು ಹೊಸಕೋಟೆ, ಹರೀಶ ಮಾನೆ,ಆರ್.ಬಿ ತುಪ್ಪದ, ನಾಗರಾಜ ಗೋಡೆ ಶ್ರೀಕಾಂತ ಕುರ್ಲಿ ಉಪಸ್ಥಿತರಿದ್ದರು.

Leave a Comment