ಶಿವಮಂದಿರದಲ್ಲಿ ಶ್ರಾವಣ ಪ್ರವಚನ 12 ರಿಂದ

ಕಲಬುರಗಿ ಆ.10: ನಗರದ ಸೇಡಂ ರಿಂಗ್‍ರಸ್ತೆ ಬಳಿಯ ಜಯನಗರ ಶಿವಮಂದಿರದಲ್ಲಿ ಆಗಸ್ಟ್ 12 ರಿಂದ ಸಪ್ಟೆಂಬರ್ 10 ರವರೆಗೆ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರವಾರ ಜಿಲ್ಲೆ ಮುಂಡಗೋಡ ತಾಲೂಕಿನ ಅತ್ತಿವೇರಿ ಬಸವಧಾಮದ ಬಸವರಾಜೇಶ್ವರಿ ಮಾತಾಜಿ ಅವರು ವೈರಾಗ್ಯ ನಿಧಿ ಅಕ್ಕ ಮಹಾದೇವಿಯ ಜೀವನ ಚರಿತ್ರೆ ಕುರಿತಾಗಿ ಪ್ರತಿದಿನ ಸಂಜೆ 6.30 ರಿಂದ ರಾತ್ರಿ 8 ಗಂಟೆಯವರೆಗೆ ಪ್ರವಚನ ನೀಡುವರು. ಶಿವಮಂದಿರ ಹಾಗೂ ಜಯನಗರ ಅಭಿವೃದ್ಧಿ ಸಮಿತಿಯು ಕಾರ್ಯಕ್ರಮ ಆಯೋಜಿಸಿದೆ ಎಂದು ಸಮಿತಿ ಅಧ್ಯಕ್ಷ ಶಿವಪುತ್ರಪ್ಪ ಕೋಟನೂರ ಮತ್ತು ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ ಬಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರವಚನ ಸಂದರ್ಭದಲ್ಲಿ ಜಯನಗರ ಮಹಿಳಾ ಮಂಡಳಿವತಿಯಿಂದ ಪ್ರಾರ್ಥನೆ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.

ಪ್ರವಚನ ಕಾರ್ಯಕ್ರಮವನ್ನು ಶ್ರೀನಿವಾಸ ಸರಡಗಿ ಶಕ್ತಿಪೀಠದ ಡಾ ಅಪ್ಪಾರಾವ ದೇವಿ ಮುತ್ತ್ಯಾ ಅವರು ಉದ್ಘಾಟಿಸುವರು.ಮೇಯರ್ ಶರಣಕುಮಾರ ಮೋದಿ,ಹೈಕಶಿ ಸಂಸ್ಥೆ ಅಧ್ಯಕ್ಷ ಡಾ ಭೀಮಾಶಂಕರ ಬಿಲಗುಂದಿ, ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ  ಆರ್ ಎಸ್ ಪಾಟೀಲ,ಎಚ್‍ಕೆಸಿಸಿಐ ಮಾಜಿ ಅಧ್ಯಕ್ಷ ಡಾ ಸೋಮಶೇಖರ ತೆಂಗಳಿ, ಬಿಜೆಪಿ ಮುಖಂಡ ಸುಭಾಷ ರಾಠೋಡ ,ಜೆಡಿಎಸ್ ಮುಖಂಡ ಸೂರ್ಯಕಾಂತ ಕೊರಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ವಿವರಿಸಿದರು..

Leave a Comment