ಶಿವನಗೌಡ ನಾಯಕ ಅವರ ಹುಟ್ಟು ಹಬ್ಬ ಆಚರಣೆ

ರಾಯಚೂರು.ಜು.14- ದೇವದುರ್ಗ ಶಾಸಕರು ಹಾಗೂ ಮಾಜಿ ಸಚಿವರಾದ ಕೆ.ಶಿವನಗೌಡ ನಾಯಕ ಅವರ 42ನೇ ಹುಟ್ಟು ಹಬ್ಬವನ್ನು ಬಿಜೆಪಿ ಪಕ್ಷದ ಮುಖಂಡರು ಮತ್ತು ಅವರ ಬೆಂಬಲಿಗರು ಆಚರಿಸಿದರು.
ಮಾಣಿಕ್ ಪ್ರಭು ದೇವಸ್ಥಾನದ ಅಂಧ ಮಕ್ಕಳ ಶಾಲೆಯಲ್ಲಿ ಶಿವನಗೌಡ ನಾಯಕ ಅವರ ಹುಟ್ಟು ಹಬ್ಬ ಆಚರಿಸಲಾಯಿತು. ಶಾಲೆಯ ಎಲ್ಲಾ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಂಧ ಮಕ್ಕಳ ಸಮೂಹದೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಗದೀಶ್ ವಕೀಲರು, ಶಿವರಾಜ ಪತ್ತೇಪೂರು, ತ್ರಿವಿಕ್ರಮ ಜೋಷಿ, ಕಡಗೋಳ ಆಂಜಿನೇಯ್ಯ, ರವೀಂದ್ರ ಜಲ್ದಾರ್, ಜಂಬಣ್ಣ ಮಂದಕಲ್, ಪ್ರಕಾಶ, ಜಂಬಣ್ಣ ನಿಲೋಗಲ್, ತಿಮ್ಮಾರೆಡ್ಡಿ ಪತ್ತೇಪೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment