ಶಿವಗಾಂಧಿ ಛಾಯಚಿತ್ರ ಪ್ರದರ್ಶನ

shiv-gandhi-2ಪ್ರಶಸ್ತಿ ಪುರಸ್ಕೃತ ಛಾಯಾಚಿತ್ರಗ್ರಾಹಕ, ವಾಣಿಜ್ಯ ಚಿತ್ರಗಾರ, ಮತ್ತು ವನ್ಯ ಜೀವಿ ಸಂರಕ್ಷಣೆ ಮುಂದಾಳು ಶಿವ ಅವರು ಶಿವ ಗಾಂಧಿ ಎಂದೇ ಜನಜನಿತ. ಗಾಂಧಿ ಅವರು ತಮ್ಮ ಸಂಗ್ರಹದ ವಿಶೇಷ ಅಪರೂಪದ ಪ್ರತಿಷ್ಠಿತ ಛಾಯಾಚಿತ್ರಗಳ ಪ್ರದರ್ಶನವನ್ನು ಸ್ಕೇಪ್ಸ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ ಬೆಂಗಳೂರಿನ ರೇವಾಸ್ ಆರ್ಟ್ ಗ್ಯಾಲರಿಯಲ್ಲಿ ಫೆ.೧೧ ರವರೆಗೆ ಏರ್ಪಡಿಸಲಾಗಿದೆ. ತಮ್ಮ ವೃತ್ತಿಜೀವನದಲ್ಲಿ ಇದೂವರೆಗೂ ಸೆರೆಹಿಡಿದ ಅತ್ಯುದ್ಭುತ, ವಿಶಿಷ್ಟ ಮತ್ತು ಪ್ರತಿಷ್ಠಿತ ಚಿತ್ರಗಳಾದ, ನಿಸರ್ಗ ಚಿತ್ರಣ, ಪರ್ವತಗಳು, ನದಿಗಳು, ಪ್ರವಾಸದ ಸ್ಮರಣೀಯ ಛಾಯಾಚಿತ್ರಗಳನ್ನು ಈ ಪ್ರದರ್ಶನದಲ್ಲಿ ವೀಕ್ಷಕರು ಕಾಣಬಹುದಾಗಿದೆ.

ಪ್ರವಾಸ ಮತ್ತು ನಿಸರ್ಗ ಚಿತ್ರಣ ಛಾಯಾಗ್ರಹಣ ಹೇಳುವಷ್ಟು ಸುಲಭವೂ ಅಲ್ಲ, ಸರಳವೂ ಅಲ್ಲ, ಅದು ಆ ಕ್ಷಣಕ್ಕೆ ಕ್ಲಿಕ್ಕಿಸುವ ಅದ್ಭುತ ಅವಕಾಶ ಎನ್ನುತ್ತಾರೆ ಶಿವ. ಆ ಚಿತ್ರ ಸೆರೆಹಿಡಿಯುವಾಗ ಅದರ ಸ್ಕೆಚ್, ಫ್ರೇಮ್‌ವರ್ಕ್ ನನ್ನ ತಲೆಯಲ್ಲಿ ನಡೆದಿರುತ್ತೆ, ಅದನ್ನು ಕಲ್ಪಿಸಿಕೊಂಡು ಅನೇಕ ಸರಣಿ ಆಲೋಚನೆಗಳು, ಕ್ರಿಯಾಶೀಲ ತಂತ್ರಗಳು ಹೊಳೆಯುತ್ತವೆ. ಅದನ್ನು ಪಾರಂಪರಿಕತೆ, ಇತಿಹಾಸ, ಸಮಕಾಲೀನ ಮತ್ತು ಅಭೂತಪೂರ್ವ ಚೆಲುವಿನ ಆಧಾರದ ಮೇಲೆ ಚಿತ್ರಣ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಕಾಲ್ಪನಿಕ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. ಅದನ್ನು ಕ್ಯಾಮೆರಾದ ಲೆನ್ಸಿನ ಮೂಲಕ ಕುಂಚ ಕಾವ್ಯ ಮೂಡುವಂತೆ ಸೆರೆಹಿಡಿಯುತ್ತಾರೆ. ಈ ಕಲೆಗೆ ನೆರಳು ಬೆಳಕಿನ ಸಂಯೋಜನೆ, ವಿವಿಧ ಕೋನಗಳ ಸಂಯೋಜನೆಯ ಜ್ಞಾನ, ಕ್ಯಾಮೆರಾದ ಸೆಟ್ಟಿಂಗ್, ಅತಿಯಾದ ತಾಳ್ಮೆ, ಮತ್ತು ಸಹನೆ ಈ ಚಿತ್ರಣಕ್ಕೆ ಅತ್ಯವಶ್ಯಕತೆಯಿದೆ ಎಂಬುದು ಶಿವ ಅವರ ಅನುಭವದ ಮಾತು.

ಈ ಪ್ರದರ್ಶನದಲ್ಲಿ ಪ್ರದರ್ಶನ ಮಾಡುವ ಛಾಯಾಚಿತ್ರಗಳನ್ನು ಅವುಗಳನ್ನು ಸೆರೆಹಿಡಿದ ರೀತಿಯಲ್ಲಿಯೇ ನಿಸರ್ಗದ ಸಹಜ ಸೌಂದರ್ಯ ಉಳಿಸಿಕೊಂಡು ಯಾವುದೇ ಬೇರೆ ತಂತ್ರಜ್ಞಾನ ತಿದ್ದುಪಡಿ ಮಾಡದೇ ಸಹಜವಾಗಿ ಸೌಂದರ್ಯಪ್ರಜ್ಞೆಯ ಮೌಲ್ಯಗಳನ್ನು ಉಳಿಸಿಕೊಂಡೇ ಚಿತ್ರ ಪ್ರದರ್ಶನ ಮಾಡಲಾಗಿದೆ. ಅವರ ಛಾಯಾಚಿತ್ರಗಳು ಸಹಜ ಬೆಳಕನ್ನು ಉಪಯೋಗಿಸಿಕೊಂಡು ಅತ್ಯದ್ಭುತ ವಿಸ್ಮಯಕಾರಿ ರೀತಿಯಲ್ಲಿ ನಮ್ಮೊಂದಿಗೆ ಸಂಭಾಷಿಸುತ್ತವೆ. ನಿಸರ್ಗದ ಅದ್ಭುತ ರಹಸ್ಯಗಳನ್ನು ಹೇಳುತ್ತವೆ, ಸ್ಕೇಪ್ಸ್ ಆಫ್ ಇಂಡಿಯಾ ಸಂಗ್ರಹದಲ್ಲಿ ಮೂರು ಅಳತೆಯಲ್ಲಿ ಪ್ರದರ್ಶನ ಮಾಡಲಾಗಿದೆ. ೧೨*೧೮, ೧೬*೨೪, ೨೦*೩೦ ಇಂಚುಗಳಲ್ಲಿ ಈ ಛಾಯಾಚಿತ್ರಗಳಿವೆ.

shiv-gandhi_himalayas-1

ಹಿಮಾಲಯ ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊಂಡಂತೆ ಪ್ರಪಂಚದ ಅತಿ ಎತ್ತರದ ಹಲವಾರು ಪರ್ವತಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ.

ಹಿಮಾಲಯ ಪರ್ವತ ಶ್ರೇಣಿಗಳು ನೂರಾರು ಸರೋವರಗಳಿಂದ ಕೂಡಿದ್ದು ಎತ್ತರ ಸಾಗುತ್ತಿರುವ ಹಾಗೆ ಕೆರೆಗಳ ಆಕಾರವು ಸಣ್ಣದಾಗುತ್ತ ಹೋಗುತ್ತದೆ. ಆದಾಗ್ಯೂ ಭಾರತ-ಚೀನಾ ಗಡಿಯಲ್ಲಿರುವ ಪ್ಯಾಂಗಾಂಗ್ ಸರೋವರ ೭೦೦ ಚ.ಕಿ.ಮೀ ವಿಸ್ತಾರ ಹೊಂದಿರುವ ಅತಿ ಸುಂದರ ಕೆರೆಯಾಗಿದೆ. ಹಿಮಾಲಯ ಪರ್ವತಗಳು ಒಟ್ಟಾರೆ ಭೂಮಿಯ ೦.೪% ರಷ್ಟು ಸ್ಥಳವನ್ನು ಆಕ್ರಮಿಸಿಕೊಂಡಿದ್ದು ದಟ್ಟ ಹಸಿರಿನಿಂದ ಕೂಡಿದ ಕಾಡುಗಳಿಂದ ಹಿಡಿದು ದಟ್ಟ ಹಿಮಚ್ಛಾದಿತ ಹಿಮಗಳವರೆಗೆ ವೈವಿಧ್ಯಮಯ ಭೂಪ್ರದೇಶಗಳನ್ನು ಪ್ರವಾಸಿಗರಿಗೆ ಕರುಣಿಸುತ್ತದೆ. ಅಂತಹ ಸುಂದರ ಪ್ರಕೃತಿಯನ್ನು  ಶಿವಗಾಂಧಿ ಅವರು ಸೆರೆಹಿಡಿದು ಪ್ರದರ್ಶನಕ್ಕೀಟ್ಟಿದ್ದಾರೆ. ಹಿಮಾಲಯದ ನಿಜವಾದ ಸೋಬಗನ್ನು ನಾವು ಪ್ರದರ್ಶಣದಲ್ಲಿ ಸವಿಯಬಹುದು.

ಶಿವ ಅವರ ಲೆನ್ಸ್‌ನಲ್ಲಿ ಸೆರೆ ಸಿಕ್ಮ ಭಾರತದ ಅತ್ಯದ್ಭುತ ಲ್ಯಾಂಡ್‌ಸ್ಕೇಪ್‌ಗಳ ಸ್ಕೇಪ್ಸ್ ಆಫ್ ಇಂಡಿಯಾ ಅನಾವರಣ.

ಸಂಗ್ರಹಾಕಾರರ ಡಾರ್ಲಿಂಗ್ ಎಂದೇ ಜನಜನಿತ ಶಿವ ಅವರ ಬಳಿ ವನ್ಯಜೀವಿ, ಪಾರಂಪರಿಕತೆ, ಸ್ಮಾರಕಗಳು, ಮತ್ತು ಚಿತ್ರಗಾರ ದಿಗ್ಗಜರಾದ ರಾಜಾ ರವಿ ವರ್ಮ, ಜಾನ್ ವಿಲಿಯಂ ಗೋಡ್‌ವರ್ಡ್ ಅವರ ಕಲೆಯ ಚಿತ್ರಗಳ ಅದ್ಭುತ ಸಂಗ್ರಹ

ಸ್ಥಳ : ೪೬೭, ಮಾರೇನಹಳ್ಳಿ ರಸ್ತೆ, ೮ ನೇ ಬ್ಲಾಕ್, ಜಯನಗರ, ಸಮಯ ೧೦ ರಿಂದ ರಾತ್ರಿ ೮ ರವರೆಗೆ ೯೬೨೦೧೬೪೫೨೮

Leave a Comment