ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಕಂಬನಿ

ಕೆ.ಆರ್.ಪೇಟೆ.ಜ.22- ಲಿಂಗೈಕ್ಯರಾದ ನಾಡಿನ ಸರ್ವಶ್ರೇಷ್ಠ ಅಕ್ಷರ ರತ್ನ, ಅನ್ನ-ಆರೋಗ್ಯ ದಾಸೋಹಿ, ನಡೆದಾಡುವ ದೇವರು ತುಮಕೂರು ಸಿದ್ದಗಂಗಾ ಶ್ರೀಮಠದ ಪೀಠಾಧ್ಯಕ್ಷರಾದ ಜಗದ್ಗುರು ಪದ್ಮಭೂಷಣ ಶ್ರೀ ಡಾ.ಶಿವಕುಮಾರಸ್ವಾಮಿಜೀ ಯವರಿಗೆ ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಅಗಲಿದ ಶ್ರೀಗಳಿಗೆ ಕಂಬನಿ ಮಿಡಿದು ಗೌರವ ನಮನ ಸಲ್ಲ್ಲಿಸಿದರು.
ಪ್ರತಿನಿತ್ಯ ಸುಮಾರು ಹತ್ತು ಸಾವಿರ ಮಕ್ಕಳಿಗೆ ಹಾಗೂ ಅಪಾರ ಭಕ್ತ ವೃಂದಕ್ಕೆ ಅಕ್ಷರ ಮತ್ತು ಅನ್ನದಾಸೋಹವನ್ನು 1945ರಿಂದ ನಿರಂತರವಾಗಿ ನೀಡುತ್ತಿರುವ ಸಿದ್ದಗಂಗಾ ಶ್ರೀಗಳು ಎಂದಿಗೂ ರಾಜಕೀಯ ಕೆಸರನ್ನು ಮಠಕ್ಕೆ ಅಂಟಿಸಿಕೊಳ್ಳದೆ ಸ್ವಾಭಿಮಾನದ ಜೀವನ ನಡೆಸಿದ್ದರು. ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೂ ಸಹಪಂಕ್ತಿ ಬೋಜನ ವ್ಯವಸ್ಥೆ ನೀಡುವ ಮೂಲಕ ಎಲ್ಲಾ ವರ್ಗದ ಹಾಗೂ ಎಲ್ಲಾ ಧರ್ಮದ ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರವಾಗಿದ್ದರು. 60ವರ್ಷಗಳ ಹಿಂದೆ ಅತ್ಯಂತ ಬರಗಾಲದ ಪರಿಸ್ಥಿತಿಯಲ್ಲಿ ಗ್ರಾಮ ಗ್ರಾಮಗಳಿಗೆ ತೆರಳಿ ಆಹಾರ ಧಾನ್ಯಗಳನ್ನು ಭಿಕ್ಷಾಟನೆ ಮಾಡುವ ಸಂಗ್ರಹಣೆ ಮಾಡುವ ಮೂಲಕ ಮಕ್ಕಳಿಗೆ ಆಸರೆಯಾಗಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ನಿಂತಿದ್ದಾರೆ. ಇಂತಹ ಮಹಾನ್ ಚೇತನವನ್ನು ಕಳೆದುಕೊಂಡು ದೇಶ ಹಾಗೂ ಮುಖ್ಯವಾಗಿ ಧಾರ್ಮಿಕ ಕ್ಷೇತ್ರ ಬಡವಾಗಿದೆ ಎಂದು ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಅಧ್ಯಕ್ಷ ಸಾಸಲು ಈರಪ್ಪ ಕಂಬನಿ ಮಿಡಿದರು. ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬುದು ನಾಡಿ ಕೋಟಿ ಕೋಟಿ ಜನರ ಭಾವನೆಯ ಒತ್ತಾಯವಾಗಿದೆ ಹಾಗಾಗಿ ಕೇಂದ್ರ ಸರಕಾರವು ಶ್ರೀಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪುರಸ್ಕಾರ ನೀಡಬೇಕು ಎಂದಿ ಒತ್ತಾಯ ಮಾಡಿದರು.
ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಬಸ್ತಿರಂಗಪ್ಪ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ತಾಲೂಕು ರೈತ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಮಂಚನಹಳ್ಳಿ ನಾಗಣ್ಣಗೌಡ, ಹಸಿರು ಸೇನೆಯ ಎ.ಸಿ.ವೆಂಕಟೇಶ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಸ್.ಆರ್.ದಿನೇಶ್, ಕನ್ನಡ ಪರ ಹೋರಾಟಗಾರ ಎ.ಸಿ.ಕಾಂತರಾಜು, ಮುಸ್ಲಿಂ ಯುವ ಜಾಗೃತಿ ವೇದಿಕೆಯ ಸಂಚಾಲಕ ಸಮೀರ್ ಅಹಮದ್, ಉಪಾಧ್ಯಕ್ಷ ಮೊಸಳೆಕೊಪ್ಪಲು ದಿನೇಶ್, ಗೌರವಾಧ್ಯಕ್ಷ ಪ್ರವೀಣ್, ಹರಿಚರಣತಿಲಕ್, ವಕೀಲರಾದ ಪುರ ಮಂಜುನಾಥ್, ವಿ.ಎಸ್.ಧನಂಜಯ, ಪುರುಷೋತ್ತಮ್, ಮುಖಂಡರಾದ ಶಿವಸ್ವಾಮಿ, ಚಂದ್ರಪ್ರಕಾಶ್, ಎಸ್.ಇ.ಚನ್ನರಾಜು, ಕೆ.ಎನ್.ಲಿಂಗರಾಜು, ನಟೇಶ್, ನೀರಾವರಿ ಇಲಾಖೆಯ ಪ್ರಕಾಶ್, ಕೆ.ಎಸ್.ನಾಗೇಶ್‍ಬಾಬು, ಜವಳಿ ಅಂಗಡಿ ನಾಗರಾಜು, ಚೋಕನಹಳ್ಳಿ ಅಪ್ಪಾಜಿ ಮತ್ತಿತರರ ಗಣ್ಯರು ಭಾಗವಹಿಸಿ ಅಗಲಿದ ಸಿದ್ದಗಂಗಾ ಶ್ರೀಗಳಿಗೆ ತಮ್ಮ ಕಂಬನಿ ಮಿಡಿದರು.

Leave a Comment