ಶಿಳ್ಳೆಯೇ ಪ್ರಶ್ನೆ, ಉತ್ತರ

ಈ ಊರಿನಲ್ಲಿ ಮಾತಿಲ್ಲ, ಕಥೆ ಇಲ್ಲ, ಎದುರಿಗೆ ಸಿಕ್ಕರೆ ಮಾತೇ ಬಾರದು. ಎಲ್ಲಾ ಪ್ರಶ್ನೆಗಳು, ಉತ್ತರಗಳಿಗೆ ಇಲ್ಲಿ ಶಿಳ್ಳೆಯೇ ಪ್ರಮುಖ ಸಾಧನ. ಮೇಘಾಲಯದಲ್ಲೊಂದು ಸಾಮಾನ್ಯ ಹಳ್ಳಿ ಇದೆ. ಇದರ ಹೆಸರೇ ವಿಸಿಲಿಂಗ್ ವಿಲೇಜ್ ಎಂದು. ಪ್ರವಾಸಿಗರೇನಾದರೂ ಈ ಹಳ್ಳಿಗೆ ಹೋದರೆ ತಲೆಕೆಟ್ಟು ಪಜೀತಿ ಪಡುತ್ತಾರೆ.

ಶಿಳ್ಳೆ ಬಂದದ್ದು ಹೇಗೆ?
ಹಳ್ಳಿಯ ಯಾವುದೋ ವ್ಯಕ್ತಿ ಶತ್ರುಗಳಿಂದ ತಪ್ಪಿಸಿಕೊಂಡು ಓಡುತ್ತಾ ಮರದ ಮೇಲೆ ಹತ್ತಿದನು. ಸಹಾಯಕ್ಕಾಗಿ ಸ್ನೇಹಿತರನ್ನು ಕರೆಯಲು ಯಾವುದೋ ಪ್ರಾಣಿಗಳ ಶಬ್ಧ ಮಾಡತೊಡಗಿದನು. ಶತ್ರುಗಳು ಆತನ ದನಿಯನ್ನು ಗುರುತಿಸಲಾರರು. ಕೊನೆಗೆ ಸ್ನೇಹಿತರು ಆತನನ್ನು ರಕ್ಷಿಸಿದರು.
ಆ ನಂತರದಿಂದ ಆ ಗ್ರಾಮದಲ್ಲಿ ಶಿಳ್ಳೆ ಹೊಡೆಯುವ ಪದ್ಧತಿ ಆರಂಭಗೊಂಡಿತು ಎನ್ನಲಾಗಿದೆ.

ಈ ಹಳ್ಳಿಯಲ್ಲಿರುವ ಜನರು ವಿಶೇಷ ಜಾತಿಯವರು. ಇವರು ಮಾತನಾಡುವ ಮಾಧ್ಯಮ ಶಿಳ್ಳೆ. ಒಬ್ಬರಿಗೊಬ್ಬರು ಏನಾದರೂ ಕೇಳಬೇಕಾದರೆ ಶಿಳ್ಳೆಯ ಮೂಲಕವೇ ವ್ಯವಹರಿಸುತ್ತಾರೆ. ಈ ಹಳ್ಳಿಯ ಮೂಲ ಹೆಸರು ಕೊಂಗ್‌ತಾಂಗ್. ಆದರೆ ಈ ಜನರು ಶಿಳ್ಳೆಯ ಮೂಲಕವೇ ವ್ಯವಹರಿಸುವುದರಿಂದ ಯಾರೂ ಕೂಡ ಆ ಹೆಸರನ್ನಿಡಿದು ಕರೆಯುವುದಿಲ್ಲ. ಭಾಷೆಯ ಬದಲಿಗೆ ಶಿಳ್ಳೆ ಹೊಡೆಯುವುದು ನಿನ್ನೆ – ಮೊನ್ನೆಯದಲ್ಲ. ಈ ಶಿಳ್ಳೆಯ ಮೂಲಕ ಸಂಭಾಷಣೆ ನಡೆಸುವ ಪರಂಪರೆ ಅನಾದಿಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ.

whistlehistoryಮುರುಡೇಶ್ವರ ಬಿಟ್ಟರೆ, ಅತಿ ಎತ್ತರದ ಶಿವನ ವಿಗ್ರಹ ಇರುವುದೇ ಇಲ್ಲ. ಈ ಜನರಿಗೆ ಎರಡೆರಡು ಹೆಸರು ಇದೆ. ಒಂದು ಸಾಮಾನ್ಯ ಹೆಸರು. ಇನ್ನೊಂದು ಶಿಳ್ಳೆ ಮೂಲಕ ಗುರುತಿಸುವ ಹೆಸರು. ಒಂದೊಂದು ಹೆಸರಿಗೂ ಒಂದು ಟ್ಯೂನ್ ಇದೆಯಂತೆ!. ಶಿಳ್ಳೆ ಮೂಲಕ ವ್ಯವಹರಿಸುವುದನ್ನು ಮಕ್ಕಳಿಗೆ ಪೋಷಕರು ಚಿಕ್ಕವಯಸ್ಸಿನಿಂದಲೇ ಹೇಳಿಕೊಡುತ್ತಾರೆ. ನೂರಕ್ಕೂ ಹೆಚ್ಚು ಕುಟುಂಬಗಳಿರುವ ಹಳ್ಳಿಯಲ್ಲಿ ಸದಸ್ಯರ ಹೆಸರನ್ನು ಪ್ರತ್ಯೇಕ ಶಿಳ್ಳೆ ಮೂಲಕ ಗುರುತಿಸಲಾಗುತ್ತದೆ.

ಶಿಳ್ಳೆಗಳನ್ನು ಗುರುತಿಸಲು ಪ್ರಾಣಿ-ಪಕ್ಷಿಗಳನ್ನು ಅನುಕರಣೆ ಮಾಡುತ್ತಾರೆ. ಪಕ್ಷಿಗಳ ಹಲವು ಬಗೆಯ ಸದ್ದುಗಳನ್ನು ಸೂಕ್ಷ್ಮವಾಗಿ ಗಮನಿಸಿ ಶಿಳ್ಳೆಗಳನ್ನು ರೂಪಿಸುತ್ತಾರೆ. ಒಂದು ಹೊಸ ಶಿಳ್ಳೆಯನ್ನು ಗುರುತಿಸಬೇಕಾದರೆ ಮನೆಯ ಸದಸ್ಯ ಕಾಡು – ಮೇಡುಗಳನ್ನು ಅಲೆದಾಡಬೇಕಾಗುತ್ತದೆ. ಪಕ್ಷಿಗಳ ಸದ್ದುಗಳ ಕಡೆ ಗಮನ ಹರಿಸಬೇಕು. ಆದರೆ ಇರುವ ಶಿಳ್ಳೆಯನ್ನು ಮತ್ತೊಂದು ಬಾರಿ ಅನುಕರಿಸಬಾರದು.

ಇಲ್ಲಿ ಎಲ್ಲವೂ ಶಿಳ್ಳೆ ಹೊಡೆಯುವುದರೊಂದಿಗೆ ಆರಂಭವಾಗುತ್ತದೆ. ಶಿಳ್ಳೆಯ ಸದ್ದಿನಿಂದ ಯಾರೂ ಬೇಸರಿಸುವುದಿಲ್ಲ. ಮಾತಿನ ಬದಲಿಗೆ ಶಿಳ್ಳೆ ಹೊಡೆಯುವುದು ಸಾಧ್ಯಾನಾ ಎಂದೆನಿಸಬಹುದು. ದಿನ ಬೆಳಗಾದರೆ ಈ ಜನ ಮಾತನಾಡುವುದೇ ಇಲ್ಲ. ಶಿಳ್ಳೆ ಹೊಡೆಯುವ ಮೂಲಕವೇ ಇನ್ನೊಬ್ಬರ ಜತೆ ವ್ಯವಹರಿಸುತ್ತಾರೆ. ಭಾಷೆ ಬದಲಿಗೆ ಶಿಳ್ಳೆಯೇ ಮಾಧ್ಯಮವಾಗಿದೆ.

ಈ ಹಳ್ಳಿ, ಕಾಡು ಹಾಗೂ ಬೆಟ್ಟಗಳಿಂದ ಆವೃತವಾಗಿದೆ. ಇಲ್ಲಿರುವ ನೂರಾರು ಪಕ್ಷಿ ಪ್ರಬೇಧಗಳೇ ವೈವಿಧ್ಯಮಯ ಶಿಳ್ಳೆಗಳಿಗೆ ಕಾರಣ. ಇಲ್ಲಿನ ಲೋಕಲ್ ಭಾಷೆಯೇ ಶಿಳ್ಳೆ.

Leave a Comment