ಶಿಲ್ಪಾ : 15 ಇನ್ಫ್ರಾರೆಡ್ ಥರ್ಮಾಮೀಟರ್

ರಾಯಚೂರು.ಏ.05- ಪ್ರತಿಷ್ಠಿತ ಶಿಲ್ಪಾ ಮೆಡಿಕೇರ್‌ನ ಶಿಲ್ಪಾ ಫೌಂಡೇಷನ್ ಕೊರೊನಾಕ್ಕೆ ಸಂಬಂಧಿಸಿ ಅತ್ಯಂತ ಪ್ರಮುಖ ಸಾಧನವೊಂದನ್ನು ನೀಡಿ, ಜಿಲ್ಲಾಡಳಿತಕ್ಕೆ ನೆರವಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರ ಭೇಟಿಯ ಸಂದರ್ಭದಲ್ಲಿ ಇನ್ಫ್ರಾರೆಡ್ ಸಾಧನೆಗಳನ್ನು ಸಚಿವರಿಗೆ ಹಸ್ತಾಂತರಿಸುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ವಿರುದ್ಧದ ಸಮರಕ್ಕೆ ವೈದ್ಯರಿಗೆ ಶಿಲ್ಪಾ ಈ ರೀತಿಯಲ್ಲಿ ನೆರವಾಗಿದೆ. ಈಗಾಗಲೇ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ನಿಧಿಗೆ 35 ಲಕ್ಷ ದೇಣಿಗೆ ನೀಡಿದ ಅವರು, ಮತ್ತೊಂದು ಕಡೆ ಬಡವರಿಗೆ ದಿನಸು ನೀಡುವ ಮೂಲಕ ತಮ್ಮ ಮಾನವೀಯತೆ ಮೆರೆದಿದ್ದಾರೆ.
ಈಗ ಕೊರೊನಾ ವಿರುದ್ಧದ ಹೋರಾಟದಲ್ಲಿ ಅತ್ಯಂತ ಮಹತ್ವದ ಪ್ರಮುಖ ಸಾಧನೆಯೆಂದೇ ಗುರುತಿಸಿಕೊಂಡ ಇನ್ಫ್ರಾರೆಡ್ ಥರ್ಮಾಮೀಟರನ್ನು ನೀಡುವ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಭಾರೀ ನೆರವು ನೀ‌ಡಿದ್ದಾರೆ. ಶಿಲ್ಪಾ ಫೌಂಡೇಷನ್ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಸ್ತಾಂತರಿಸಲಾಯಿತು. ಥರ್ಮಾಮೀಟರಗಳನ್ನು ಸ್ವೀಕರಿಸಿದ ಉಸ್ತುವಾರಿ ಸಚಿವರು ಶಿಲ್ಪಾ ಮೆಡಿಕೇರ್ ಕಾರ್ಯ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶಿಲ್ಪಾ ಮೆಡಿಕೇರ್ ವ್ಯವಸ್ಥಾಪಕ ನಿರ್ದೇಶಕರಾದ ವಿಷ್ಣುಕಾಂತ ಬುತಡಾ, ಅಜೀತ್ ಜೈನ್, ಗೌತಮ್ ಗಿನಿಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment