ಶಿರಾಲಿಯಲ್ಲಿ  ಅತ್ಯಧಿಕ 16 ಸೆಂ.ಮೀ ಮಳೆ

ಬೆಂಗಳೂರು, ಜೂ 20 -ರಾಜ್ಯದ ಕರಾವಳಿ ಹಾಗೂ ಒಳನಾಡಿನ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ.

ಶಿರಾಲಿಯಲ್ಲಿ ಅತಿಹೆಚ್ಚು 16 ಸೆಂ.ಮೀ, ಮಂಕಿ, ಕಾರವಾರ ತಲಾ 13. ಮಂಗಳೂರು ವಿಮಾನ ನಿಲ್ದಾಣ ತಲಾ 9, ಮಂಗಳೂರು, ಪಣಂಬೂರು, ಭಟ್ಕಳ, ಗೋಕರ್ಣ, ಅಗುಂಬೆ ತಲಾ 7, ಕುಮಟಾ, ಅಂಕೋಲಾ ತಲಾ 6; ಕಾರ್ಕಳ, ಹೊನ್ನಾವರ, ಕದ್ರಾ, ಭಾಗಮಂಡಲ ತಲಾ 5, ಸುಬ್ರಹ್ಮಣ್ಯ, ಸುಳ್ಯ, ಉಡುಪಿ, ಕೋಟಾ, ಕೊಲ್ಲೂರು, ಸಿದ್ದಾಪುರ, ಗೇರುಸೊಪ್ಪ, ಕ್ಯಾಸಲ್ ರಾಕ್ ತಲಾ 4, ತಾಳಗುಪ್ಪ, ಶೃಂಗೇರಿ, ಮೂಡಿಗೆರೆ, ಕಮ್ಮರಡಿ ತಲಾ 3, ಮೂಡಬಿದಿರೆ, ಮುಲ್ಕಿ, ಮಂಚಿಕೆರೆ, ಮಡಿಕೇರಿ, ಲಿಂಗನಮಕ್ಕಿ, ಕಳಸ, ಜಯಪುರ, ಸಕಲೇಶಪುರ ತಲಾ 2, ಧರ್ಮಸ್ಥಳ, ಉಪ್ಪಿನಂಗಡಿ, ಸಿದ್ದಾಪುರ, ಯಲ್ಲಾಪುರ, ಜಗಲ್‌ಬೆಟ್‌, ಲೋಂಡಾ, ಹುಮ್ನಾಬಾದ್, ವಿರಾಜಪೇಟೆ, ಹೊಸನಗರ, ಕೊಟ್ಟಿಗೇಹಾರ, ಕೊಪ್ಪ, ಎನ್.ಆರ್.ಪುರ, ಟಿ.ನರಸಿಪುರದಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.

ಮುನ್ಸೂಚನೆಯಂತೆ, ಮುಂದಿನ 24 ತಾಸಿನಲ್ಲಿ ಕರಾವಳಿ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಅನೇಖ ಕಡೆ, ಉತ್ತರ ಒಳನಾಡಿನ ಕೆಲ ಕಡೆ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಂಭವವಿದೆ.

ಬೆಂಗಳೂರು ಹಾಗೂ ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ, ಕೆಲವು ಪ್ರದೇಶಗಳಲ್ಲಿ ಹಗುರ ಮಳೆ ಬೀಳುವ ಸಾಧ್ಯತೆ ಇದೆ. ಮೇಲ್ಮೈ ಗಾಳಿ ತೀವ್ರವಾಗಲಿದ್ದು, ಒಮ್ಮೊಮ್ಮೆ ಧೂಳು ಮಿಶ್ರಿತ ಗಾಳಿ ಬೀಸಲಿದೆ. ಗರಿಷ್ಠ 32 ,ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು ಸಂಭವವಿದೆ.

Leave a Comment