ಶಿರಾಡಿ-ಸಂಪಾಜೆ ಘಾಟ್‌ನಲ್ಲಿ ಲಘುವಾಹನ ಸಂಚಾರ

ಮಂಗಳೂರು, ಆ.೧೩- ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರು, ಮಡಿಕೇರಿ, ಮೈಸೂರಿ ಸಂಪರ್ಕ ಕಲ್ಪಿಸುವ ಶಿರಾಡಿ ಮತ್ತು ಸಂಪಾಜೆ ಘಾಟ್‌ಗಳು ಲಘುವಾಹನ ಸಂಚಾರಕ್ಕೆ ಮುಕ್ತಗೊಂಡಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಸಂಪಾಜೆ ರಸ್ತೆಯ ಮೂಲಕ ಲಘು ವಾಹನಗಳು ಮತ್ತು ಪ್ರಯಾಣಿಕ ಸಾಗಣೆ ವಾಹನಗಳ ಸಂಚಾರ ನಡೆಸಬಹುದಾಗಿದೆ. ಶಿರಾಡಿ ಘಾಟ್‌ನಲ್ಲಿ ಕೂಡ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ಹವಾನಿಯಂತ್ರಿತವಲ್ಲದ ದೊಡ್ಡ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಚಾರ್ಮಾಡಿ ಘಾಟ್ ತೀರಾ ಹದಗೆಟ್ಟಿದ್ದು ಇನ್ನೂ ಕೆಲವು ತಿಂಗಳುಗಳ ಕಾಲ ಘನವಾಹನಗಳ ಸಂಚಾರ ಸಾಧ್ಯವಿಲ್ಲ. ಇಲ್ಲಿ ಕುಸಿದುಬಿದ್ದ ಮಣ್ಣು, ಕಲ್ಲುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಲು ಹಲವು ಸಮಯ ಬೇಕಾಗಬಹುದು ಎನ್ನಲಾಗಿದೆ. ಮಳೆ ಹಾನಿಯಿಂದ ಚಾರ್ಮಾಡಿ ಘಾಟ್ ರಸ್ತೆ ಅಲ್ಲಲ್ಲಿ ಕುಸಿದಿದ್ದು ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಚಾರ್ಮಾಡಿ ಅಂದ ಕಳೆದುಕೊಂಡಿದೆ.

Leave a Comment