ಶಿರಾಡಿಘಾಟ್ ರಸ್ತೆ ಸಂಚಾರ 1 ವಾರ ಬಂದ್

ಮಂಗಳೂರು, ಆ. ೧೭- ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿಘಾಟ್‌ನಲ್ಲಿ ನಿರಂತರ ಭೂಕುಸಿತದ ಹಿನ್ನೆಲೆಯಲ್ಲಿ ಆ. 25ರವರೆಗೆ ಶಿರಾಡಿಘಾಟ್ ರಸ್ತೆ ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ.
ಭೂಕುಸಿತದಿಂದ ರಸ್ತೆಯಲ್ಲಿ ಬಿದ್ದಿರುವ ಮಣ್ಣು ಹಾಗೂ ಕಲ್ಲುಬಂಡೆಗಳ ತೆರವಿಗೆ ಕನಿಷ್ಠ 6 ದಿನಗಳು ಬೇಕಾಗಿದೆ. ಅಲ್ಲದೆ ಹದಗೆಟ್ಟಿರುವ ದುರಸ್ತಿಗೂ ಮತ್ತಷ್ಟು ಸಮಯ ಬೇಕಾಗಿರುವುದರಿಂದ ಶಿರಾಡಿಘಾಟ್ ರಸ್ತೆಯನ್ನು ಬಂದ್ ಮಾಡಲಾಗುವುದು.
ಪಶ್ಚಿಮಘಟ್ಟ ತಪ್ಪಲು ಪ್ರದೇಶಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸೂಳ್ಯ, ಸುಬ್ರಮಣ್ಯ ಪ್ರದೇಶಗಳಲ್ಲಿ ಇಂದೂ ಸಹ ಮಳೆ ಸುರಿದಿದೆ.
ಕುಮಾರಧಾರ, ಪಯಸ್ವಿನಿ ಸೇರಿದಂತೆ ಇತರ ಸಣ್ಣ ಹೊಳೆಗಳು ಉಕ್ಕಿ ಹರಿಯಲಾರಂಭಿಸಿವೆ. ಕಡಲ ತೀರದಲ್ಲಿ ಗಾಳಿ ವೇಗವಾಗಿ ಬೀಸಲಿದ್ದು, ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳಲಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಡಲ ಅಬ್ಬರ ಹೆಚ್ಚಾಗಿರುವುದರಿಂದ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

ಮಳೆ ಹಿನ್ನೆಲೆಯಲ್ಲಿ ಬಿರುಗಾಳಿಗೆ ತುಂಡಾಗಿ ಬಿದ್ದಿದ್ದ ಹೈಟೆನ್‌ಷನ್ ಸ್ಪರ್ಶಿಸಿದ ಅಶೋಕ್ ಡಿಸೋಜಾ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದು ಬಹಳಷ್ಟು ಹೊತ್ತಿನ ಬಳಿಕ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿದ್ಯುತ್ ಕಡಿತಗೊಳಿಸಿದ್ದಾರೆ. ಉಲ್ಲಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment