ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಬಣಜಿಗ ಸಮಾಜದ ಪಾತ್ರ ಬಹುಮುಖ್ಯ

ಹುನಗುಂದ, ಸೆ 9- ವ್ಯಾಪಾರವನ್ನೇ ಕಾಯಕ ಎಂದು ನಂಬಿ ಬದುಕುತ್ತಿರುವ ಬಣಜಿಗ ಸಮಾಜದ ಜನರು ಬಸವ ತತ್ವದ ಕಟ್ಟಾ ಅನುಯಾಯಿಗಳು. ಉತ್ತರ ಕರ್ನಾಟಕದ ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಈ ಸಮಾಜದ ಜನರ ಪಾತ್ರ ಬಹು ಮುಖ್ಯಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಘಟಕ ಇಲ್ಲಿನ ಬಸವ ಮಂಟಪದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದುಡಿದಿದ್ದರಲ್ಲಿ ಹಣದ ಉಳಿತಾಯ ಮಾಡುವ ಜ್ಞಾನ ಈ ಸಮಾಜದ ಜನರಲ್ಲಿ ಇರುವುದರಿಂದ ಈ ಜ್ಞಾನವನ್ನು ಇತರ ಸಮಾಜದ ಜನ ಅನುಸರಿಸಿಕೊಂಡು ಹೋಗಬೇಕು. ರಾಜಕೀಯವಾಗಿಯೂ ಬಣಜಿಗ ಸಮಾಜದ ಜನರು ಪ್ರಭುದ್ದರಾಗಿರುವುದರಿಂದ ಈ ಸಮಾಜಕ್ಕೆ ಸೇರಿದ 7 ಜನ ಮುಖ್ಯಮಂತ್ರಿಗಳು ಆಗಿರುವುದು ರಾಜ್ಯದಲ್ಲಿಯೇ ಇತಿಹಾಸ ಎಂದರು.
ಮಾಜಿ ಶಾಸಕ ರಾಜಶೇಖರ ಶಿಲವಂತ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಜಗತ್ತಿಗೆ ನಾವು ಹೊಂದಿಕೊಳ್ಳುವುದು ಅಗತ್ಯವಾಗಿದೆ. ಹಿಂದಿನ ದಿನಮಾನಗಳಲ್ಲಿ ಇತರರಿಗೆ ಉದ್ಯೋಗ ನೀಡುತ್ತಿದ್ದ ನಾವು ಇಂದು ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಜನರು ಮುಂದೆ ಬರಬೇಕಾದರೆ ಮಕ್ಕಳಿಗೆ ಶಿಕ್ಷಣ ಜೊತೆಗೆ ನೀತಿ ಪಾಠ ಮಾಡುವುದು ಅಗತ್ಯವಾಗಿದೆ ಎಂದರು.
ಶಿರೂಳ ರಾಮಾರೂಢ ಮಠದ ಶಂಕರಾರೂಡ ಸ್ವಾಮಿಜಿ ಸಾನಿಧ್ಯ ವಹಿಸಿ ಮಾತನಾಡುತ್ತ ರಾಜಕೀಯ ಪಕ್ಷಗಳ ಗೊಂದಲ ಬಿಟ್ಟು ಸಮಾಜ ಸಂಘಟನೆ ಮಾಡಿರಿ ಆರಂಭದ ಸೂರತನ ನಮ್ಮ ಸಮಾಜದಲ್ಲಿ ಬೇಡ ಒಗ್ಗಟ್ಟನ ಸಂಘಟನೆ ಇದ್ದರೆ ನಮ್ಮನ್ನ ಮುಂದೆ ಕರೆಯುತ್ತಾರೆ ನಮ್ಮ ಸಮಾಜದಲ್ಲಿಯೆ ಅನೇಕ ಜನ ದಾನಿಗಳಿದ್ದಾರೆ ದಾನ ಧರ್ಮ ಪರೋಪಕಾರ ಮಾಡಿದ ಸಮಾಜ ಇನ್ನೊಬ್ಬರಿಗೆ ಕೈ ಚಾಚುವದು ಬೇಡ ರಾಜಕೀಯಕ್ಕೆ ಸಂಪೂರ್ಣ ಜೋತು ಬೀಳದೆ ಉದ್ದೋಗದಲ್ಲಿ ತೊಡಗಿ ಆರ್ಥಿಕ ಶೈಕ್ಷಣಿಕವಾಗಿ ಮುಂದೆ ಬನ್ನಿರಿ ಎಂದು ಪೂಜ್ಯರು ಹೇಳಿದರು. ಬಣಜಿಗ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ಗೌಡರ ಅಧ್ಯಕ್ಷತೆ ವಹಿಸಿದ್ದರು. ಜಿಪಂ. ಸದಸ್ಯೆ ಭಾಗ್ಯಶ್ರೀ ಜಂಬಗಿ, ತಾಪಂ. ಸದಸ್ಯೆ ರಾಚಮ್ಮ ಬಡ್ಡಿ, ಪುರಸಭೆ ಅಧ್ಯಕ್ಷೆ ಗಂಗಮ್ಮ ಎಮ್ಮಿ, ನೂತನ ಸದಸ್ಯ ಶರಣು ಬೆಲ್ಲದ, ತಹಸಿಲ್ದಾರ್ ಸುಭಾಷ ಸಂಪಗಾವಿ, ಮಲ್ಲಿಕಾರ್ಜುನ ಶೆಟ್ಟರ, ಬಸವರಾಜ ಬಡ್ಡಿ, ಎಸ್.ಎಸ್. ಗರಡಿ, ಗುರಣ್ಣ ಮರಟದ, ಬಸವರಾಜ ಕಬ್ಬಿಣದ, ದೊಡ್ಡಮ್ಮ ಹವಾಲ್ದಾರ,ರಾಚಮ್ಮ ಬಡ್ಡಿ, ಸಿ.ಸಿ. ಚಂದ್ರಾಪಟ್ಟಣ,ಅರುಣೋದಯ ದುದ್ಗಿ. ಇತರರು ಇದ್ದರು.  ಸಮಾಜದ ಮಂಗಲ ಭವನ ನಿರ್ಮಾಣಕ್ಕೆ 1 ಎಕರೆ ಭೂಮಿ ದಾನ ಮಾಡಿದ  ಅಂದಾನೇಪ್ಪ ಹವಾಲ್ದಾರ ದಂಪತಿಗಳಿಗೆ,ಸಮಾಜದಲ್ಲಿ ಸಾಧನೆ ಮಾಡಿದ  ಸಾಧಕರಿಗೆ ಹಾಗೂ ಪ್ರತಿಭಾನ್ವಿತ  ವಿದ್ಯಾರ್ಥಿಗಳಿಗೆ ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಿವಪುತ್ರಪ್ಪ ತಾರಿವಾಳ ಪ್ರಾರ್ಥಿಸಿದರು. ಮಂಜುನಾಥ ಶೆಟ್ಟರ ಸ್ವಾಗತಿಸಿದರು. ಸಂಗಣ್ಣ ಚಿನಿವಾಲರ ಪ್ರಸ್ತಾವಿಕವಾಗಿ ಮಾತನಾಡಿ. ಶಿವಗಂಗಾ ದುದ್ಗಿ ನಿರೂಪಿಸಿ ಪ್ರಭು ಇದ್ದಲಗಿ ವಂದಿಸಿದರು.

Leave a Comment