ಶಿಕ್ಷಣ ಗಗನ ಕುಸುಮವಾಗಿದ್ದಾಗ ಪ್ರಾರಂಭವಾದದ್ದು ವೀ.ವಿ.ಸಂಘ

ಬಳ್ಳಾರಿ, ಸೆ.8:ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನೆಯ ಶತಮೊನೋತ್ಸಹದ ಅಂಗವಾಗಿ ವುಂಕಿ ಸಣ್ಣ ರುದ್ರಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದ್ದು ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಕೆ. ಬಿ. ಸಿಧ್ಧಲಿಂಗಪ್ಪ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನೆ ಪೂಜ್ಯ ಸ್ವಾಮೀಜಿಗಳ ವೀರಶೈವ ಸಮಾಜದ ಗಣ್ಯರ ಉಧಾರ ಕೊಡುಗೆಯಿಂದಸ್ಥಾಪನೆಯಾಯಿತು ಎಂದು ಹೇಳಿದರು. 19 ನೇ ಶತಮಾನದ ಪ್ರಾರಂಭದಲ್ಲಿ ಇಂದಿನ ಬಳ್ಳಾರಿಯ ಚಿತ್ರಣ ಅಂದುಇರಲಿಲ್ಲ ಅದು ಹಲವಾರು ಪ್ರಾಂತ್ಯಗಳಲ್ಲಿ ಹರಿದುಹಂಚಿಹೋಗಿತು.್ತ ವಿವಿಧ ಭಾಷಿಕರದೌರ್ಜನ್ಯಜೊತೆಗೆ ಬಡತನಅನಕ್ಷರತೆ, ನಿರುದ್ಯೋಗ, ಸಾಮಾಜಿಕಅಸಮತೋಲನ ತಾಂಡವಾಡುತ್ತಿತ್ತು. ಬಡಜನತೆಗೆ ಶಿಕ್ಷಣ ಗಗನ ಕುಸುಮವಾಗಿತ್ತು ಇದನ್ನೆಲ್ಲಅರಿತ ಬಳ್ಳಾರಿಯ ಅಂದಿನ ವೀರಶೈವ ಸಮಾಜಿಕಪ್ರಜ್ಞಾವಂತರೆಲ್ಲಾ ಸೇರಿ ಸಮಾಜದಎಲ್ಲಾಜಾತಿ, ವರ್ಣ, ವರ್ಗಗಳಲ್ಲಿ ಆವರಿಸಿದ ಈ ದಾರಿದ್ರ್ಯವನ್ನುನಾಶಪಡಿಸುವಏಕ್ಯೆಕ ಪರಿಹಾರ ಮಾರ್ಗವೆಂದರೆಅದು ಶಿಕ್ಷಣ ಮತ್ತುಉಚಿತ ಪ್ರಸಾದ ನಿಲಯದಿಂದ ಮಾತ್ರ ಸಾಧ್ಯಎಂಬುದನ್ನುಅರಿತುಕೊಂಡ ಪೂಜ್ಯರಾದ ಹಾನಗಲ್ ಕುಮಾರಸ್ವಾಮಿಗಳು ಹಾಗೂ ಪೂಜ್ಯಉಜ್ಜಯಿನಿ ಜಗದ್ಗುರು ಸಿದ್ದ್ದಲಿಂಗ ಶಿವಚಾರ್ಯ ಸ್ವಾಮಿಗಳು ಸಾಮಾಜಬಾಂಧಾವರನ್ನೆಲ್ಲಾಒಟ್ಟುಗೂಡಿಸಿ 1909ರ ಡಿಸೆಂಬರ್ 27 ರಿಂದ 30ರವರೆಗೆ ಅಖಿಲ ಭಾರತ ವೀರಶೈವ ಮಹಾಸಭಅಧಿವೇಶನವನ್ನು ಸೊಲ್ಲಾಪುರದ ವರದ ಮಲ್ಲಪ್ಪನವರಅಧ್ಯಕ್ಷತೆಯಲ್ಲಿ ನೆಡೆಸಿ, ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಬೀಜಾಂಕುರವಾಯಿತು. ಪೂಜ್ಯ ಉಜ್ಜಿಯಿನಿ ಜಗದ್ಗುರುಗಳ ಸಂಪೂರ್ಣ ಸಹಕಾರ ಹಣಕಾಸಿನ ನೆರವು ನೇತೃತ್ವ ಆಶೀರ್ವಾದದ ನಡುವೆ ಅಂದಿನ ವೀರಶೈವ ಸಮಾಜಿದ ಪ್ರಮುಖರೆಲ್ಲರೂ ಸಭೆ ಸೇರಿ ಹಣ ಸಂಗ್ರಹಿಸಿ ಸಂಘ ಸ್ಥಾಪಿಸುವ ನಿರ್ಣಯ ಕೈಗೊಳ್ಳುತ್ತಾರೆ. ಆ ನಿರ್ಣಯದ ಮೇರೆಗೆ 1916ರಲ್ಲಿ ವಿದ್ಯುಕ್ತವಾಗಿ ಕೌತಾಳದ ಯಜಮಾನ ಗುರುಶಾಂತಪ್ಪನವರ ಅಧ್ಯಕ್ಷತೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಸಕ್ಕರಿ ಕರೆಡೆಪ್ಪನವರ ಚೌಕಿಯಲ್ಲಿ ವಿದ್ಯಾರ್ಥಿ ಪ್ರಸಾದ ನಿಯಲದ ಮೂಲಕ ಸಂಘವು ಕಾರ್ಯಾರಂಭವಾಯಿತು, ಹೀರದ ಕರಿಬಸಪ್ಪನವರು ಮೊದಲ ಕಾರ್ಯದರ್ಶಿಗಳಾಗಿದ್ದರು. ತದ ನಂತರ ಒಂದೊಂದಾಗಿ ಕಾಲೇಜುಗಳನ್ನು ಸ್ಥಾಪಿಸುತ್ತಾ ಇಂದು ಅನೇಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿ 100ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ ಎಂದು ಹೇಳಿದರು,

ಕಾರ್ಯಕ್ರಮವನ್ನು ಉದ್ಘಾಟಿಸಿದ ವುಂಕಿ ಸಣ್ಣ ರುದ್ರಪ್ಪ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷರಾದ ದರೂರು ಶಾಂತನಗೌಡರು ಮಾತನಾಡಿ ಅಂದಿನ ಹಿರಿಯರ ದೂರದೃಷ್ಟಿ, ಶ್ರಮ,ದಾನ, ಸಹಕಾರ, ಸೇವಾ ಮನೋಭಾವದಿಂದಾಗಿ ಈ ಸಂಘವು ಹೆಮ್ಮರವಾಗಿ ಬೆಳೆದು ಇಂದು ಸಮಾಜಕ್ಕೆ ಉತ್ತಮ ಫಲ ಮತ್ತು ಆಶ್ರಯವನ್ನು ನೀಡುತ್ತಾಯಿದೆ. ಈ ಸಂಘವು ಸೂರ್ಯ ಚಂದ್ರಾದಿ ಕಾಲದವರೆಗೂ ನಿರಂತರವಾಗಿ ಸಮಾಜಕ್ಕೆ ಶಿಕ್ಷಣವನ್ನು ನೀಡುತ್ತದೆ. ಶಿಕ್ಷಣಕ್ಷೇತ್ರದಲ್ಲಿ ಕರ್ನಾಟಕದಾದ್ಯಂತ ಪ್ರಚಲಿತವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆ.ಎಸ್.ನೇಪಾಕ್ಷಪ್ಪನವರು ಕೋಳೂರು ಚಂದ್ರಶೇಖರಗೌಡರು, ಬಣಾಪುರ ನಾಗಭೂಷಣಗೌಡರು ಏಳುಬೆಂಚೆ ರಾಜಶೇಖರಗೌಡರು, ಎಲ್.ಟಿ. ಶೇಖರ್. ಟಿ. ಎಂ. ಜಡೇಶ್,ಶಾನವಾಸಪುರದ ರಾಜಶೇಖರಗೌಡ ಇತರರು ಹಾಗೂ ಪ್ರಾಂಶುಪಾಲರಾದ ಡಾ. ಕೆ. ರಜನಿಕುಮಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಎಸ್. ಭಾರತಿ ಮತ್ತು ವಂದನಾರ್ಪಣೆಯನ್ನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎ. ರಮೇಶ್ ನೇರವೇರಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಕಾಲೇಜಿನ ವಿಧ್ಯಾರ್ಥಿಗಳು ಹಾಜರಿದ್ದರು.

Leave a Comment