ಶಿಕ್ಷಣ ಕೇಂದ್ರವಾಗಿ ಪಾಕ್ ಪ್ರಧಾನಿ ನಿವಾಸ

ಇಸ್ಲಾಮಾಬಾದ್ (ಪಾಕಿಸ್ತಾನ್), ಸೆ. ೧೪- ಇಸ್ಲಾಮಾಬಾದ್‌ನಲ್ಲಿರುವ ಪ್ರಧಾನಿ ನಿವಾಸವನ್ನು ಸ್ನಾತಕೋತ್ತರ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು ಎಂದು ಶಿಕ್ಷಣ ಸಚಿವ ಷಸ್ಪಕತ್ ಅಹ್ಮದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದಿನ ಸರ್ಕಾರ ಆಡಳಿತ ಹಾಗೂ ಜನಪ್ರತಿನಿಧಿಗಳ ಐಷಾರಾಮಿ ಜೀವನದಿಂದ ಜನರ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅವರ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಪ್ರಸ್ತುತ ಪ್ರಧಾನಿ ಇಮ್ರಾನ್ ಖಾನ್ ಅವರು ಐಷಾರಾಮಿ ಸೌಲಭ್ಯಯುಳ್ಳ ಪ್ರಧಾನಿ ನಿವಾಸದಲ್ಲಿ ತಂಗದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಹಣದುರ್ಬಳಕೆ ತಡೆಯಲು ಚಿಂತಿಸಿರುವ ಅವರು ರಾಜ್ಯಪಾಲರು ಸಹ ಅವರ ನಿವಾಸದಲ್ಲಿ ತಂಗದ್ದಂತೆ ಸೂಚಿಸಿದ್ದಾರೆ ಎಂದರು.
ವಾರ್ಷಿಕ ಪ್ರಧಾನಿಗಳ ನಿರ್ವಹಣೆಗಾಗಿ 470 ಮಿಲಿಯನ್ ಪಾಕಿಸ್ತಾನಿ ಹಣ ವೆಚ್ಚ ಮಾಡಲಾಗುತ್ತಿತ್ತು. ಈ ಹಣ ಉಳಿತಾಯ ಮಾಡುವ ಉದ್ದೇಶದಿಂದ ಪ್ರಧಾನಿ ನಿವಾಸವನ್ನು ಉನ್ನತ ಸೌಲಭ್ಯಗಳುಳ್ಳ ಸ್ನಾತಕೋತ್ತರ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು ಹಾಗೂ ಸಿಂಧ್, ಪಂಜಾಬ್, ಬಲಿಚಿಸ್ತಾನ್ ಪ್ರದೇಶದಗಳಲ್ಲಿರುವ ರಾಜ್ಯಪಾಲರ ನಿವಾಸನಗಳನ್ನು ಸಾರ್ವಜನಿಕರಿಗಾಗಿ ಮ್ಯೂಸಿಯಂಗಳಾಗಿ ಪರಿವರ್ತಿಸಲಾಗುವುದು ಎಂದು ಶಿಕ್ಷಣ ಸಚಿವ ತಿಳಿಸಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿರುವ ಪ್ರಧಾನಿ ಇಮ್ರಾನ್ ಅವರು ಕಳೆದ ಸರ್ಕಾರ ಜನರ ಹಣವನ್ನು ಲೂಟಿ ಮಾಡಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳ ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ರಾಜ್ಯಪಾಲರು ಸಹ ಈ ಸಂಬಂಧ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕೆಂದು ತಿಳಿಸಿದ್ದಾರೆ.
ಕ್ರಿಕೆಟರ್ ಆಗಿದ್ದ ಇಮ್ರಾನ್ ಇದೀಗ ದೇಶದ ಪ್ರಧಾನಿಯಾಗಿದ್ದು ಪಾಕಿಸ್ತಾನದ ಹಿಂದಿನ ಘನತೆ, ಗೌರವವನ್ನು ಪುನರ್ ಸೃಷ್ಠಿಸಲು ಯತ್ನಿಸಿದ್ದಾರೆನ್ನಲಾಗಿದ್ದು, ಸಚಿವರುಗಳು ಸಹ ಐಷರಾಮಿ ಸೌಲಭ್ಯಗಳನ್ನು ಬಳಸದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

Leave a Comment