ಶಿಕ್ಷಕ ದಿನಾಚರಣೆಯ ಪ್ರಯುಕ್ತ ನಾ ಕಂಡ ಶಿಕ್ಷಕ ಭಾಷಣ ಸ್ಫರ್ಧೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ ಮಹತ್ವ-ಪ್ರೇಮಲತಾ

ಹೊಸಪೇಟೆ, ಸೆ.8: ಸ್ಪರ್ಧೆಗಳಲ್ಲಿ ಸೋಲು ಗೆಲವು ಮುಖ್ಯವಲ್ಲ. ಸ್ಪರ್ಧಾಮನೋಭಾವದಿಂದ ಪಾಲ್ಗೊಳುವುದು ಮಹತ್ವದ್ದುಎಂದು ಶಿಕ್ಷಕಿ ಪ್ರೇಮಲತಾ ಹೇಳಿದರು.

ಸ್ಥಳೀಯ ಕೊಟ್ಟೂರುಸ್ವಾಮಿ ಮಠದ ಶಿವಾನುಭವ ಮಂಟಪದಲ್ಲಿ ಗುರುವಾರ ವಿಕಾಸ ಯುವಕ ಮಂಡಳ ಹಮ್ಮಿಕೊಂಡಿದ್ದ ನಾ ಕಂಡ ಶಿಕ್ಷಕ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿ, ಪಾಠದ ಹೊರತಾಗಿಯಾವುದೇ ವಿಷಯವನ್ನು ಸಮರ್ಥವಾಗಿ ಪ್ರತಿಪಾದಿಸಬೇಕಾದರೆ ಸಭಾ ಸ್ಥೈರ್ಯವೂ ಮುಖ್ಯವಾಗುತ್ತದೆ ಎಂದರು.

ಕೆಎಸ್‍ಪಿಎಲ್ ಶಾಲೆಯ ಶಿಕ್ಷಕ ಬಾಬು ಮಾತನಾಡಿ, ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆಯಬೇಕಾಗಿದೆ, ಸ್ಪರ್ಧಾತ್ಮಕಯುಗದಲ್ಲಿ ಬೆಳೆಯಲು ಅನೇಕ ಅವಕಾಶಗಳು ಇವೆ ಎಂದು ಹೇಳಿದರು.

ಮಂಡಳದ ಅಧ್ಯಕ್ಷ ಗೋಸಲ ಬಸವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಪಿ ಯಲ್ಲೇಶ್, ಭಾಗ್ಯಶ್ರೀ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ. ಕಾವ್ಯ ಪ್ರಥಮ, ಮಹಿಳಾ ಸಮಾಜ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ಎನ್.ಜಿ. ದ್ವಿತೀಯ, ಸರ್ದಾರ ಪಟೇಲ್ ಪ್ರೌಢಶಾಲೆಯ ವಿದ್ಯಾರ್ಥಿ ಸಿಧಾಥ್ ತೃತೀಯ ಸ್ಥಾನ ಪಡೆದರು.

ಕಳೆದ 20 ವರ್ಷಗಳಿಗಿಂತಲೂ ಹೆಚ್ಚುಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರಜಿಯಾಬೇಗಂ ಸೇರಿದಂತೆ ಇತರೆ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ವಿಕಾಸ ಯುವಕಮಂಡಳದ ಹಿರಿಯರಾದ ಕೆ. ದಿವಾಕರ್, ರಮೇಶ ಪುರೋಹಿತ್, ಛಾಯಾದಿವಾಕರ್, ಮಂಡಳದ ಅಧ್ಯಕ್ಷ ಗೋಸಲ ಬಸವರಾಜ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.

Leave a Comment