ಶಿಕ್ಷಕಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ | ಡ್ರಾಯಿಂಗ್ ಶಿಕ್ಷಕನ ಕೃತ್ಯ ಬಯಲಿಗೆ!

ಕಾಸರಗೋಡು, ಜ.೨೫- ನಿಗೂಢವಾಗಿ ನಾಪತ್ತೆಯಾಗಿ ಬಳಿಕ ಸಮುದ್ರ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದ ಮೀಯಪದವು ವಿದ್ಯಾವಿರ್ಧಕ ಶಾಲೆಯ ಶಿಕ್ಷಕಿ ರೂಪಶ್ರೀ(೪೪) ಸಾವಿನ ಹಿನ್ನೆಲೆ ಬೇಧಿಸುವಲ್ಲಿ ಕ್ರೈಮ್ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ. ರೂಪಶ್ರೀ ತನ್ನದೇ ಶಾಲೆಯ ಡ್ರಾಯಿಂಗ್ ಶಿಕ್ಷಕನ ಜೊತೆ ಸಂಗ ಬೆಳೆಸಿದೆನ್ನಲಾಗಿದ್ದು, ಅದರಲ್ಲಿ ಒಬ್ಬನ ಜೊತೆ ಇರಿಸಿದ್ದ ಹಣಕಾಸಿನ ವ್ಯವಹಾರವೇ ಆಕೆಯ ಕೊಲೆಗೆ ಕಾರಣ ಎನ್ನುವುದು ಬಯಲಾಗಿದೆ.

ಮನೆಗೆ ಕರೆದು ಬಕೆಟ್ ನಲ್ಲಿ ಮುಳುಗಿಸಿ ಕೊಲೆಗೈದ ಬಳಿಕ ಶವವನ್ನು ಸಮುದ್ರ ತೀರದಲ್ಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾವರ್ಧಕ ಶಾಲೆಯ ಡ್ರಾಯಿಂಗ್ ಶಿಕ್ಷಕ ವೆಂಕಟರಮಣ ಕಾರಂತ(೫೦) ಮತ್ತು ಕಾರು ಚಾಲಕ ನಿರಂಜನ(೩೨) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: 

ಜನವರಿ ೧೪ರ ಸಂಜೆ ಶಿಕ್ಷಕಿ ರೂಪಶ್ರೀ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ೧೬ರಂದು ಕುಂಬಳೆ ಸಮೀಪದ ಪೆರುವಾಡು ಕಡಲ ತೀರದಲ್ಲಿ ರೂಪಶ್ರೀ ಶವ ಪತ್ತೆಯಾಗಿತ್ತು. ಮೃತದೇಹ ಅರೆನಗ್ನ ಸ್ಥಿತಿಯಲ್ಲಿದ್ದು ಕೂದಲು ಇರದೆ ತಲೆ ಬೋಳಾಗಿತ್ತು. ಮೈಮೇಲಿದ್ದ ಚಿನ್ನಾಭರಣ ಕೂಡ ಕಾಣೆಯಾಗಿತ್ತು. ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿದ್ದರು. ಮಂಜೇಶ್ವರದ ನಾಗರಿಕರು , ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು. ಶಿಕ್ಷಕ ವೆಂಕಟರಮಣ ಈ ಕೃತ್ಯ ನಡೆಸಿದ್ದು, ಜ.೧೪ರಂದು ರೂಪಶ್ರೀಯನ್ನು ಮನೆಗೆ ಕರೆಸಿ ಬಕೆಟ್‌ನಲ್ಲಿ ಮುಖ ಮುಳುಗಿಸಿ ಕೊಲೆಗೈದ್ದಿದ್ದು , ಬಳಿಕ ಮೃತದೇಹವನ್ನು ನಿರಂಜನ್ ಸಹಾಯದಿಂದ ಕಾರಿನಲ್ಲಿ ಕುಂಬಳೆ ಶಿರಿಯ ಹೊಳೆಗೆ ಕೊಂಡೊಯ್ದು ಎಸೆದಿದ್ದರು. ಫಾರೆನ್ಸಿಕ್ ತಜ್ಞರು ಮನೆ ಮತ್ತು ಕಾರನ್ನು ತಪಾಸಣೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ರೂಪಶ್ರೀಯ ತಲೆಗೂದಲು ಲಭಿಸಿದ್ದು ವೆಂಕಟರಮಣನನ್ನು ಹೆಚ್ಚಿನ ತನಿಖೆಗೊಳಪಡಿಸಿದಾಗ ತಾನೇ ಕೊಲೆಗೈದುದಾಗಿ ಬಾಯ್ಬಿಟ್ಟಿದ್ದಾನೆ. ರೂಪಶ್ರೀ ಮತ್ತು ವೆಂಕಟರಮಣ ನಡುವೆ ಸಂಬಂಧವಿದ್ದು ಆತನ ಬ್ಯಾಂಕ್ ಲೋನ್‌ಗೆ ಜಾಮೀನು ನಿಂತಿದ್ದಳು. ಈ ಮಧ್ಯೆ ಇನ್ನೊಬ್ಬ ಶಿಕ್ಷಕ ಜೊತೆಗೆ ಸಂಗ ಬೆಳೆದಿತ್ತು. ಇದರಿಂದ ವೆಂಕಟರಮಣ ಕೋಪಗೊಂಡಿದ್ದ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಕೆಲ ಸಮಯದಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಕೊಲೆ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Leave a Comment