ಶಿಕ್ಷಕರ ಪ್ರತಿಭಾಪರಿಷತ್ ವಾರ್ಷಿಕೋತ್ಸವ 18 ರಂದು

ಕಲಬುರಗಿ ಫೆ 13:ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಜಿಲ್ಲಾ ಘಟಕದ 7 ನೆಯ ವಾರ್ಷಿಕೋತ್ಸವ ಫೆ 18 ರಂದು ಬೆಳಿಗ್ಗೆ 11.13 ಕ್ಕೆ ನಗರದ ಡಾ ಎಸ್ ಎಂ ಪಂಡಿತರಂಗಮಂದಿರದಲ್ಲಿ ನಡೆಯಲಿದೆ .ಕಾರ್ಯಕ್ರಮದಲ್ಲಿ ಪ್ರತಿಭಾಪುರಸ್ಕಾರ ವಿವಿಧ ಪ್ರಶಸ್ತಿ ಪ್ರದಾನ ಪುಸ್ತಕ ಮತ್ತು ಕ್ಯಾಲೆಂಡರ್ ಬಿಡುಗಡೆ ನಡೆಯಲಿದೆ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಚಿಂಚೋಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಗುರು, ಅಪೂರ್ವ, ಶಿಕ್ಷಣ ಸುಧಾಂಶು, ನೇಗಿಲಯೋಗಿ, ಅತ್ಯತ್ತಮ ಶಿಕ್ಷಕ ,ಪಿಯುಸಿ ಎಸ್‍ಎಸ್‍ಎಲ್ಸಿಯಲ್ಲಿ ಟಾಪರ್ ಗಳಿಗೆ ಪುರಸ್ಕಾರ  ಕುಶಲ ಕರಣಿಕ ಮೊದಲಾದ ಪ್ರಶಸ್ತಿ ಪುರಸ್ಕಾರ ವಿತರಿಸಲಾಗುವದು. ಗಂಗಮ್ಮ ಆರ್ ನಾಲವಾರ ರಚಿಸಿದ ನಾನು ಆದರೆ ನಾನಲ್ಲ ಕವನ ಸಂಕಲನ ಬಿಡುಗಡೆ ಮಾಡಲಾಗುವದು ಎಂದರು

ಕಾರ್ಯಕ್ರಮವನ್ನು ಸಾಶಿ ಇಲಾಖೆ ಉಪನಿರ್ದೆಶಕ ಶಾಂತಗೌಡ ಪಾಟೀಲ ಉದ್ಘಾಟಿಸುವರು. ನಳಂದಾ ಪಿಯುಕಾಲೇಜು ಪ್ರಾಚಾರ್ಯ  ಶ್ರೀನಿವಾಸ ಭಾರದ್ವಾಜ ಕ್ಯಾಲೆಂಡರ್ ಮತ್ತು ಎಚ್‍ಕೆಸಿಸಿಐ ಅಧ್ಯಕ್ಷ ಡಾ ಸೋಮಶೇಖರ ತೆಂಗಳಿ ಪುಸ್ತಕ ಬಿಡುಗಡೆ ಮಾಡುವರು.ಶಿಕ್ಷಣ ಇಲಾಖೆ ಅಧಿಕಾರಿಗಳು ಗಣ್ಯರು ಪಾಲ್ಗೊಳ್ಳುವರು ಎಂದರು

ಸುದ್ದಿಗೋಷ್ಠಿಯಲ್ಲಿ ಎಸ್ ಬಿ ಸಾಗರ,ಬಾಬುರಾವ ಕುಲಕರ್ಣಿ,ಪರಮೇಶ್ವರ ವಾಗದರ್ಗಿ, ಝಾಕೀರ ಹುಸೇನ್ ಸೇರಿದಂತೆ ಹಲವರಿದ್ದರು

Leave a Comment