ಶಿಕ್ಷಕರಿಗಾಗಿ ‘ಸಾಹೋ’ ವಿಶೇಷ ಪ್ರದರ್ಶನ

ನವದೆಹಲಿ, ಸೆ 05 – ಶಿಕ್ಷಕರ ದಿನದ ಅಂಗವಾಗಿ ಸಿನೆಪೊಲಿಸ್ ಮೂವಿ ಥಿಯೇಟರ್ ಗುರುವಾರ ‘ಸಾಹೋ’ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಿತ್ತು  ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರಿಗೆ ಕೆಂಪು ಹಾಸಿನ ಭವ್ಯ ಸ್ವಾಗತ ನೀಡಲಾಯಿತು

  ಚಿತ್ರ ಪ್ರದರ್ಶನದ ಜತೆಗೆ ಮೋಚಿನ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು,  ಸವಿ ನೆನಪಿಗಾಗಿ, ಕಾರ್ಯಕ್ರಮದ ಭಾವಚಿತ್ರಗಳನ್ನು ಎಲ್ಲ ಶಿಕ್ಷಕರಿಗೂ ನೀಡಲಾಯಿತು.

  ಈ ಸಂದರ್ಭದಲ್ಲಿ ಮಾತನಾಡಿದ ಸಿನೆಪೊಲಿಸ್ ಇಂಡಿಯಾದ ಉಪ ಕಾರ್ಯನಿರ್ವಹಣಾಧಿಕಾರಿ ದೇವಾಂಗ್ ಸಂಪತ್, “ಶಿಕ್ಷಕರು ಯಾವಾಗಲೂ ತಮ್ಮ ವಿದ್ಯಾರ್ಥಿಗಳನ್ನು ನೋಡಿಕೊಳ್ಳುವುದು ಮತ್ತು ಶಾಲೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುತ್ತಾರೆ.  ಹೀಗಾಗಿ ಸಿನೆಪೊಲಿಸ್ ಶಿಕ್ಷಕರನ್ನು ಗೌರವಿಸುವ ಈ ಅವಕಾಶವನ್ನು ವಿನೋದ ಮತ್ತು ಮನರಂಜನೆಯಿಂದ ತುಂಬಿದ ಆನಂದದಾಯಕ ದಿನವನ್ನಾಗಿಸಲು ಬಯಸಿತು” ಎಂದರು.

  ಆಕ್ಷನ್ ಥ್ರಿಲ್ಲರ್ ‘ಸಾಹೋ’ ಪ್ರದರ್ಶನದ ಮೂಲಕ ನಾವು ಶಿಕ್ಷಕರ ದಿನವನ್ನು ಸಂಪೂರ್ಣ ಆಕ್ಷನ್, ಥ್ರಿಲ್, ರೋಮ್ಯಾನ್ಸ್ ಪ್ಯಾಕೇಜ್‌ನೊಂದಿಗೆ ಸ್ಮರಣೀಯವಾಗಿಸಲು ಪ್ರಯತ್ನಿಸಿದ್ದೇವೆ”ಎಂದು ಹೇಳಿದರು.

Leave a Comment