ಶಿಂಜೋ-ಮೋದಿ ಭೇಟಿ; ಮಾತುಕತೆ

ನವದೆಹಲಿ, ಸೆ.೧೩: ಎರಡು ದಿನಗಳ ಭಾರತ ಭೇಟಿಯಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಇಂದು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರಧಾನಿ ಭಾರತಕ್ಕೆ ಬಂದಿದ್ದಾರೆ. ಶೃಂಗಸಭೆಗೆ ಅಹ್ಮದಾಬಾದ್ ಸಂಪೂರ್ಣ ಸಜ್ಜಾಗಿದ್ದು, ನಾಳೆ ಸಭೆ ನಡೆಯಲಿದೆ. ಮೋದಿ ಮತ್ತು ಶಿಂಜೋ ನಡುವೆ ನಾಲ್ಕನೇ ಮಾತುಕತೆ ಇದಾಗಿದೆ. ಅಹ್ಮದಾಬಾದ್‌ನಲ್ಲಿ ನಡೆಯುತ್ತಿರವುದು ೧೨ನೇ ವಾರ್ಷಿಕ ಶೃಂಗಸಭೆಯಾಗಿದೆ.
ಉಭಯ ನಾಯಕರ ನಡುವೆ ಜಾಗತಿಕ ಸಹಭಾಗಿತ್ವ ಮತ್ತು ವಿಶೇಷ ವೂಹಾತ್ಮಕತೆಯ ಕುರಿತು ಚರ್ಚೆ ನಡೆಸಲಿದ್ದಾರೆ. ಅಹ್ಮದಾಬಾದ್ ಮತ್ತು ಮುಂಬೈ ನಡುವಿನ ಭಾರತದ ಪ್ರಥಮ ಹೈಸ್ಪೀಡ್ ರೈಲು ಯೋಜನೆ ಪ್ರಾರಂಭ ಕುರಿತ ಕಾರ್ಯಕ್ರಮದಲ್ಲೂ ಈ ಇಬ್ಬರು ನಾಯಕರು ಪಾಲ್ಗೊಳ್ಳಲಿದ್ದಾರೆ.
ಹೈಸ್ಪೀಡ್ ರೈಲು ಆರಂಭಗೊಂಡರೆ ಈ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಹೈಸ್ಪೀಡ್ ರೈಲು ಯೋಜನೆ ನಿರ್ಮಿಸುವಲ್ಲಿ ಜಪಾನ್ ದೇಶ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಜಪಾನ್ ದೇಶ ಭಾರತದಲ್ಲಿ ಹೈಸ್ಪೀಡ್ ರೈಲು ಯೋಜನೆಗೆ ಜಾರಿಗೆ ಉತ್ಸುಕವಾಗಿದೆ.

Leave a Comment