ಶಾ ಬದಿಗಿಟ್ಟು ಅಡ್ವಾಣಿ ಬಳಿ ಹೋದ ರಾಹುಲ್

ನವದೆಹಲಿ, ಮಾ. ೧೩- ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರು ನಿನ್ನೆ ಸಂಸತ್‌ನಲ್ಲಿ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರ ಬಳಿ ಹೋಗಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಕಾಂಗ್ರೆಸ್ -ಬಿಜೆಪಿ ನಡುವೆ ಭಾರಿ ಭಿನ್ನಾಭಿಪ್ರಾಯಗಳು ಈ ಭೇಟಿಗೆ ಅಡ್ಡಿಯಾಗಲಿಲ್ಲ. ನಿನ್ನೆ ಸಂಸತ್ ಕಲಾಪಗಳು ಆರಂಭಕ್ಕೆ ಮುನ್ನ ಆಗಮಿಸಿದ್ದ ರಾಹುಲ್, ಮೊದಲ ಸಾಲಿನಲ್ಲಿ ಒಂಟಿಯಾಗಿ ಕುಳಿತಿದ್ದ ಅಡ್ವಾಣಿ ಬಳಿ ತೆರಳಿ ಕೈಜೋಡಿಸಿ, ನಮಸ್ಕರಿಸಿ ಅವರ ಯೋಗಕ್ಷೇಮ ವಿಚಾರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಡ್ವಾಣಿ, `ನಾನು ಚೆನ್ನಾಗಿದ್ದೇನೆ. ಆದರೆ ಕಲಾಪಗಳು ನಡೆಯದೆ ಸದನದ ಸ್ಥಿತಿ ಚೆನ್ನಾಗಿಲ್ಲ` ಎಂದಿದ್ದಾರೆ.
ಈ ಬಿಕ್ಕಟ್ಟನ್ನು ಬಗೆಹರಿಸಲು ವಿರೋಧ ಪಕ್ಷಗಳು, ಸ್ಪೀಕರ್ ಅಥವಾ ಪ್ರಧಾನಿ ಸರಿಯಾದ ರೀತಿಯಲ್ಲಿ ಪ್ರಯತ್ನಸುತ್ತಿಲ್ಲ. ಇಂತಹ ಸ್ಥಿತಿಯನ್ನು ನಾನು ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದೂ ಅಡ್ವಾಣಿ ಹೇಳಿದ್ದಾರೆ.

Leave a Comment