ಶಾಸಕ ಸೇಠ್‌ಗೆ ಭದ್ರತೆ ಹೆಚ್ಚಳ

ಮೈಸೂರು, ನ ೨೧- ಶಾಸಕ ತನ್ವೀರ್ ಸೇಠ್ ಅವರ ಕೊಲೆ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.  ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ತನ್ವೀರ್ ಸೇಠ್ ಅವರ ಮೇಲೆ ಕೊಲೆ ಯತ್ನ ನಡೆಯುತ್ತಿದ್ದ ವೇಳೆಯಲ್ಲಿ ಅದನ್ನು ತಡೆಯಲು ವಿಫಲರಾಗಿದ್ದ ಗನ್ ಮ್ಯಾನ್ ಅವರನ್ನು ಸರ್ಕಾರ ಅಮಾನತ್ತುಗೊಳಿಸಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತನ್ವೀರ್ ಸೇಠ್ ಅವರಿಗೆ ಮೂರು ಪಟ್ಟು ಬಿಗಿ ಭದ್ರತೆಯನ್ನು ಒದಗಿಸಿದೆ.  ಕಳೆದ ಭಾನುವಾರ ಮೈಸೂರಿನಲ್ಲಿ ಸ್ನೇಹಿತರೊಬ್ಬರ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರ ಮೇಲೆ ಆರೋಪಿ ಫರಾಕ್ ಪಾಷ ಎಂಬಾತ ಕುತ್ತಿಗೆಗೆ ಚಾಕು ಹಾಕಿ ಕೊಲೆ ಯತ್ನ ನಡೆಸಿದ. ತೀವ್ರವಾಗಿ ಗಾಯಗೊಂಡ ತನ್ವೀರ್ ಸೇಠ್ ಅವರನ್ನು ತಕ್ಷಣವೇ ಕೊಲಂಬಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

Leave a Comment