ಶಾಸಕ ದತ್ತರವರ ಪಾದಯಾತ್ರೆ ರಾಜ್ಯ ರಾಜಕೀಯ ವ್ಯವಸ್ಥೆಗೆ ಮಾದರಿ

ಕಡೂರು.ಆ.13; ಒಬ್ಬ ಜನ ಪ್ರತಿನಿಧಿ, ಜನ ಸಾಮಾನ್ಯರ ಒಡನಾಟದೊಂದಿಗೆ ಸಮಸ್ಯೆಗಳನ್ನು ಅರಿತು ಪರಿಹರಿಸುವ ಮಾರ್ಗವಾಗಿರುವ ಶಾಸಕ ವೈ.ಎಸ್.ವಿ ದತ್ತರವರ ಪಾದಯಾತ್ರೆ ರಾಜ್ಯ ರಾಜಕೀಯ ವ್ಯವಸ್ಥೆಗೆ ಮಾದರಿ ಮತ್ತು ಅನುಕರಣೀಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರವರು ಅಭಿಪ್ರಾಯಿಸಿದರು. ಅವರು ಪಟ್ಟಣದ ಎಂ.ಆರ್.ಎಂ ರಂಗಮಂದಿರದಲ್ಲಿ ನಡೆದ ಶಾಸಕ ವೈ.ಎಸ್.ವಿದತ್ತರವರ ಸಾವಿರ ಕಿ.ಮೀ ಕ್ಷೇತ್ರದ ಪಾದÀಯಾತ್ರೆ ಸಮಾರೋಪ ಸಮಾರಂಭ ಮತ್ತು ಶಾಶ್ವತ ನೀರಾವರಿ ಹೋರಾಟದ ಕಾರ್ಯಕ್ರಮದಲ್ಲಿ ಮಾತನಾಡುತಾ ಸತತ ಬರದ ಶಾಪಕ್ಕೆ ತುತ್ತಾಗಿರುವ ಕಡೂರು ಕ್ಷೇತ್ರಕ್ಕೆ. ಶಾಶ್ವತ ನೀರಾವರಿ ಯೋಜನೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ನಿರ್ಲಕ್ಷತಳೆದಿರುವುದು ವಿಷಾಧನೀಯ ಎಂದರಲ್ಲದೇ ಈ ನಿಟ್ಟಿನಲ್ಲಿ ದತ್ತ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಒದಗಿಸಲು ಖಾಸಗಿ ಡಿ.ಪಿ.ಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು ಮುಖ್ಯಮಂತ್ರಿಗಳು ಗಮನಹರಿಸಿ ಈ ಯೋಜನೆಗೆ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು. ಹಿರಿಯ ಸ್ವಾತ್ರಂತ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ರವರು ಮಾತನಾಡಿ ಜನಪರ ಬದ್ದತೆಯುಳ್ಳ ರಚಾನತ್ಮಕ ಚಿಂತನೆಯೊಂದಿಗೆ ಜನರ ನಾಡಿಮಿಡಿತ ಅರಿತು ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವಂತಹ ಮತ್ತು ಕ್ಷೇತ್ರದ ಜನರ ದುಃಖ ದುಮ್ಮಾನಗಳನ್ನು ಬಹಳ ಹತ್ತಿರದಿಂದ ನೋಡಿ ಪರಿಹರಿಸುವ ದತ್ತರವರ ಈ ಪಾದಯಾತ್ರೆಯ ವಿಚಾರದಾರೆ ಜನತಂತ್ರ ವ್ಯವಸ್ಥೆಗೆ ಪೂರಕ ವಾತವಾರಣ ಮತ್ತು ದೇಶದ ಜನ ಪ್ರತಿನಿಧಿಗಳಿಗೆ ಇದೊಂದು ಮಾದರಿ ಎಂದರು ಶಾಸಕ ದತ್ತರವರ ಭ್ರಷ್ಟಚಾರ ರಹಿತ ಜನಪರ ನಿಲುವಿನ ಜನಪರ ನಡವಳಿಕೆ ಪ್ರಸ್ಥುತ ಸಂಸದರು ಶಾಸಕರು ಮತ್ತು ರಾಜಕಾರಣ ಗಳಿಗೆ ಮಾದರಿಯಾದಾಗ ಮಾತ್ರ ದೇಶದ ಪ್ರಗತಿ ಮತ್ತು ಪ್ರಜಾಪ್ರಭುತ್ವದ ಬೆಳವಣ ಗೆಗೆ ಸಾದ್ಯವಾಗುತ್ತದೆ ಎಂದರು ಮುಂದಿನ ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅದರಲ್ಲೂ ಮುಖ್ಯವಾಗಿ ದೇಶದ ಮತ್ತು ರಾಜ್ಯದ ರೈತರು ಮತ್ತು ಜನರ ಸಮಸ್ಯೆಗಳನ್ನು ಆಳವಾಗಿ ಅರಿತುಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರವರು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಬಡತನ ನಿರ್ಮೂಲನೆಗೆ ಅಧ್ಯತ ನೀಡುವ ಅಜೆಂಡಾಕೆ ಒತ್ತು ನೀಡಬೇಕೆಂದು ಸಲಹೆ ನೀಡಿದರು ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ರವರು ಮಾತನಾಡಿ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ಪ್ರಜೆಗಳೆ ಮಾಲೀಕರಾಗಬೇಕಾಗಿರುವ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳೆ ಮಾಲೀಕರಾಗಿರುವುದು ಪ್ರಜಾ ಪ್ರಭುತ್ವದ ತತ್ವಗಳು ತಪ್ಪು ದಾರಿಯಲ್ಲಿ ನಡೆಯುತ್ತಿರುವ ಸಂಕೇತ ಎಂದು ಹೇಳಿದರು 2011 ರಲ್ಲಿ ನಾನು ಲೋಕಾಯುಕ್ತ ನ್ಯಾಯಾಮೂರ್ತಿಯಾದಗ ಹೆಚ್ಚುವರಿಯಾಗಿ 40 ಲಕ್ಷ ನಕಲಿ ಪಡಿತರ ಚೀಟಿಯನ್ನು ಪತ್ತೆಹಚ್ಚಿ ಇದರಿಂದ ಸರ್ಕಾರದ ಬೊಕ್ಕಸಕ್ಕೆ 640 ಕೋಟಿ ನಷ್ಟವಾಗಿರುವುದರ ಸಮಗ್ರವರಧಿಯನ್ನು ಸರ್ಕಾರಕ್ಕೆ ಸಲ್ಲಿಸಿದರೂ ಇದುವರೆಗೂ ಕ್ರಮ ತೆಗೆದುಕೊಳ್ಳದೆ ಇರುವುದು ನಮ್ಮ ಆಡಳಿತ ವ್ಯವಸ್ಥೆಯ ನಿರ್ಲಕ್ಷತನಕ್ಕೆ ಸಾಕ್ಷಿ ಎಂದರು ದೇಶ ಮತ್ತು ರಾಜ್ಯದ ಜ್ವಲಂತ ಸಮಸ್ಯೆಗಳು ಜನ ಪರ ಕಲ್ಯಾಣ ವಿಷಯಗಳ ಬಗ್ಗೆ ಸಂಸತ್ತು ಮತ್ತು ವಿಧಾನ ಸಭೆಗಳ ಸಧನಗಳಲ್ಲಿ ಚರ್ಚೆಯಾಗದಿರುವುದು ನಮ್ಮ ಜನ ಪ್ರತಿನಿಧಿಗಳ ಜನವಿರೋಧಿ ಧೋರಣೆಯನ್ನು ಬಿಂಬಿಸುತ್ತದೆ ಎಂದರು ಶಾಸಕ ವೈ.ಎಸ್.ವಿ.ದತ್ತರವರು ಮಾತನಾಡಿ ಶಾಶ್ವತ ಬರಕ್ಕೆ ತುತ್ತಾಗಿ ಜನಜಾನುವಾರುಗಳು ಕುಡಿಯುವ ನೀರಿಗಾಗಿ ಹಾಹಾಕಾರ ತಲೆದೋರುತ್ತಿರುವ ಸಂದರ್ಭದಲ್ಲಿ ಭವಿಷ್ಯದಲ್ಲಿ ಬರವನ್ನು ಎದುರಿಸಲು ಮತ್ತು ಕ್ಷೇತ್ರದ ಎಲ್ಲಾ 110 ಕೆರೆಗಳನ್ನು ತುಂಬಿಸುವ ಶಾಶ್ವತ ನೀರಾವತಿ ಯೋಜನೆಗೆ ಸರ್ಕಾರ ಮೇಲೆ ಒತ್ತಡವೇರಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಾವು ಕೈಗೊಂಡ ಪಾದಯಾತ್ರೆ ಕ್ಷೇತ್ರದ ಜನರ ನಾಡಿಮಿಡಿತ ಅರಿತುಕೊಳ್ಳುವ ಜನ ಪರ ಮುಖಿಚಿಂತನೆಯಿಂದ ಕೂಡಿತ್ತೆ ಹೊರತು ಯಾವುದೇ ರಾಜಕೀಯ ಲಾಭವಿರಲಿಲ್ಲ ಎಂದರು ಕ್ಷೇತ್ರದ ದೇವಿಕೆರೆ ಮದಗದ ಕೆರೆ ಮತ್ತು ಲಿಫ್ಟ್ ಮೂಲಕ ವಿಷ್ಣುಸಮುದ್ರ ಕೆರೆಯನ್ನು ತುಂಬಿಸುವ ಆ ಮೂಲಕ ಕ್ಷೇತ್ರದ 110 ಕೆರೆಗಳನ್ನು ತುಂಬಿಸಿ ಕೃಷ್ಣ ಬೇಸಿನ್ ಬಿ ಸ್ಕಿಮಂನಲ್ಲಿ ಕಡೂರು ಕ್ಷೆತ್ರಕ್ಕೆ ದೊರಕಿರುವ 1.538 ಟಿ.ಎಂ.ಸಿ. ನೀರು ಪೂರ್ಣ ಬಳಕೆಯ ಮಹತ್ವಕಾಂಕ್ಷಿ ಯೋಜನೆಯಾದ ಭದ್ರಾವತಿಯ ಗೋಂದಿ ಭದ್ರಾಅಣೆಕಟ್ಟಿನಿಂದ ನೀರು ತರುವ 576 ಕೋಟಿ ಅಂದಾಜು ವೆಚ್ಚದ ಯೋಜನೆಯ ಸಮಗ್ರ ಯೋಜನಾ ವರಧಿಯನ್ನು ತಾವೇ ಸ್ವತಹ ಖಾಸಗಿ ಕಂಪನಿಯಿಂದ ತಯಾರಿಸಿ ಮುಖ್ಯಮಂತ್ರಿಗಳು ಅದ್ಯಕ್ಷರಾಗಿರುವ ನೀರಾವರಿ ನಿಗಮದ ಮುಂದೆ ಆಡಳಿತಾತ್ಮಕ ಅನುಮೋದನೆಗೆ ಮಂಡನೆಯಾಗುವ ಹಂತದಲ್ಲಿದ್ದು ಇದು ಜಾರಿಯಾದರೆ ಕಡೂರು ಕ್ಷೇತ್ರ ಶಾಶ್ವತ ಬರದಿಂದ ಮುಕ್ತಿಯಾಗುತ್ತದೆ. ಹಾಗೂ ಈ ನಿಟ್ಟಿನಲ್ಲಿ ನನ್ನ ಹೋರಾಟ ಸತತವಾಗಿ ಮುಂದುವರೆಯುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಜೆ.ಡಿ.ಎಸ್ ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿದರು, ಜೆ.ಡಿ.ಎಸ್ ಮುಖಂಡರಾದ ಸಿಗೆಹಡ್ಲು ಹರೀಶ್, ಕೋಡಿಹಳ್ಳಿ ಮಹೇಶ್, ಶಿರಸಿ ರಾಜೇಶ್ವರಿ ಹೆಗಡೆ, ಜಿ ಸೊಮ್ಮಯ್ಯ ಕದಂಬ ವೆಂಕಟೇಶ, ಜಿಗಣೇಹಳ್ಳಿ ನೀಲಕಂಠಪ್ಪ, ಚಿಕ್ಕಂಗಳ ತಿಮ್ಮೇಗೌಡ, ಯಳ್ಳಗೊಂಡನಹಳ್ಳಿ ಈಶ್ವರಪ್ಪ, ಚಿಕ್ಕಬಾಸೂರು ಕುಮಾರ್, ಲಕ್ಷ್ಮೀತಿಪ್ಪೇಶ್, ಹಾಗೂ ಕ್ಷೇತ್ರದ ಸಾವಿರಾರು ಸಂಖ್ಯೆಯಲ್ಲಿ ಜೆ.ಡಿ.ಎಸ್. ಕಾರ್ಯಕರ್ತರು ಭಾಗವಹಿಸಿದರು.

 

Leave a Comment