ಶಾಸಕ ಎಸ್.ಎಸ್.ಹೇಳಿಕೆಗೆ ಕುರುಬರ ಸಂಘ ಖಂಡನೆ

ದಾವಣಗೆರೆ, ಜ. 23 – ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆಂಗೋ ಹನುಮಂತಪ್ಪ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಇತ್ತೀಚಿಗೆ ಹಿರಿಯರಾದ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ದಾವಣಗೆರೆ ನಗರ ಹಾಗೂ ರಾಜ್ಯದಲ್ಲಿ ಕುರುಬ ಸಮಾಜದ ಅಧಿಕಾರಿಗಳಿದ್ದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಲಿಂಗಾಯತ ಅಧಿಕಾರಿಗಳಿದ್ದಾರೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ದಾವಣಗೆರೆಯಲ್ಲಿ ಕುರುಬ ಸಮಾಜದ ಅಧಿಕಾರಿಗಳು ಬೆರಳೆಣಿಕೆಯಷ್ಟಿದ್ದರು. ಆ ವೇಳೆಯೂ ಲಿಂಗಾಯತ ಸಮಾಜದ ಅಧಿಕಾರಿಗಳು ಇದ್ದರು ಎಂಬುದನ್ನು ಮರೆಯಬಾರದು. ಶಾಸಕರು ಅಧಿಕಾರಿದಲ್ಲಿದ್ದ ವೇಳೆ ನಗರದಲ್ಲಿ ಒಬ್ಬ ಕುರುಬ ಸಮಾಜದ ಅಧಿಕಾರಿಗಳನ್ನು ಬಿಡದೆ ಬೇರೆಯವರನ್ನು ನೇಮಕ ಮಾಡಿದ್ದಾರೆಂಬುದನ್ನು ಮರೆಯಬಾರದು. ಸಿದ್ದರಾಮಯ್ಯ ಅವರ ಬಗ್ಗೆ ವ್ಯಂಗ್ಯವಾಡುವುದನ್ನು ನಿಲ್ಲಿಸಬೇಕು. ಒಂದು ಕಡೆ ವೀರಶೈವ ಲಿಂಗಾಯತ ಬೇರೆಮಾಡಬೇಕೆಂದು ಸಿದ್ದರಾಮಯ್ಯ ಅವರಿಗೆ ಸನ್ಮಾನಿಸಿ ಬೆಳ್ಳಿಗದೆ ನೀಡುತ್ತಾರೆ. ಲಿಂಗಾಯತ ಸಮುದಾಯ ಇಬ್ಬಾಗ ಮಾಡಿದ್ದರಿಂದಲೇ ಕಾಂಗ್ರೆಸ್ ಸೋಲು ಕಂಡಿದೆ ವ್ಯಂಗ್ಯವಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಬಳ್ಳಾರಿ ಷಣ್ಮುಖಪ್ಪ, ಕೆ.ವಿರೂಪಾಕ್ಷಪ್ಪ, ಹೆಚ್.ಬಿ.ಗೋಣೆಪ್ಪ, ಸಂಗಪ್ಪ, ಎನ್,ಜೆ.ನಿಂಗಪ್ಪ ಮತ್ತಿತರರಿದ್ದರು.

Leave a Comment