ಶಾಸಕರು ಮೊದಲು ನೀತಿ ಪಾಠಕಲಿಯಲಿ

ಹುಣಸೂರು, ಮೇ.10.ಶಾಸಕ ಎಚ್.ವಿಶ್ವನಾಥ್ ತಾಲ್ಲೂಕು ಕಾಂಗ್ರೆಸ್ ಹಾಗೂ ಅದರ ನಾಯಕರುಗಳಿಗೆ ನೀತಿ ಪಾಠ ಮಾಡುವ ಮೊದಲು ಕಾಂಗ್ರೆಸ್ ನಾಯಕರಿಂದ ಪಡೆದ ಲಾಭವನ್ನು ಮರೆಯಬಾರದೆಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮಾಜಿ ಬ್ಲಾಕ್ ಅಧ್ಯಕ್ಷ ಅಸ್ವಾಳು ಕೆಂಪೆಗೌಡ ಮೊನ್ನೆ ನಡೆದ ತಾ.ಪಂ ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಹಾಗೂ ಅದರ ತಾಲ್ಲೂಕು ನಾಯಕರ ಬಗ್ಗೆ ಹಗುರವಾಗಿ ಮಾತನಾಡಿರುವ ಶಾಸಕ ವಿಶ್ವನಾಥ್ ಹಿಂದೆ ಅವರು ಸಂಸದರಾದ ಸಂದರ್ಭದಲ್ಲಿ ಮಾಜಿ ಶಾಸಕ ಮಂಜುನಾಥ್‍ರವರಿಂದ ತನು ಮನ ಧನ ಸೇರಿದಂತೆ ಪಡೆದ ಎಲ್ಲಾ ಸಹಾಯವನ್ನು ಮರೆತಂತಿದೆ ಎಂದ ಕೆಂಪೆಗೌಡರು ಪಕ್ಷದ ನೈತಿಕತೆ ಬಗ್ಗೆ ಮಾತನಾಡುವ ಶಾಸಕರು ತಮ್ಮ ಮಗ ಭೇರ್ಯ ಜಿ.ಪಂ ಸದಸ್ಯ ಅಮಿತ್ ಕಾಂಗ್ರೆಸ್‍ನಿಂದ ಗೆದ್ದು ಜೆ.ಡಿ.ಎಸ್ ಪರ ಕೆಲಸ ಮಾಡುತ್ತಿದರಲ್ಲಾ ಈಗ ಎಲ್ಲಿದೆ ಅವರ ನೈತಿಕತೆ? ಎಂದು ಪ್ರಶ್ನಿಸಿದ ಅವರು ಜೆ.ಡಿ.ಎಸ್ ರಾಜ್ಯಾಧ್ಯಕ್ಷರಾಗಿದ್ದು ಈ ಬಾರಿ ಸಂಸತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಬೆಂಬಲಿಸುವ ಬದಲು ನೀವು ನಿಮ್ಮ ಮಗ ಯಾರನ್ನು ಬೆಂಬಲಿಸಿದಿರಿ ಎಂದು ತಾಲ್ಲೂಕು ಜನತೆಗೆ ಚೆನ್ನಾಗಿಗೊತ್ತಿದೆ ಎಂದ ಅವರು ನಾವು ನಿಮ್ಮಿಂದ ನೀತಿ ಪಾಠಕಲಿಯುವ ಅನಿವಾರ್ಯವಿಲ್ಲ ಎಂದರು.
ನಂತರ ಮಾತನಾಡಿದ ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷ ಟಿ.ನಾರಯಣ್ ಶಾಸಕರು ಅಲ್ಪ ಸಂಖ್ಯಾತರ ಬಗ್ಗೆ ಕಾಳಜಿ ವಹಿಸಿ ಮಾತನಾಡತ್ತರಲ್ಲಾ, ಅಧಿಕಾರಕ್ಕಾಗಿ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಹಾಗೂ ಅವರ ಅನುಯಾಯಿ ಮಂಜುನಾಥ್ ವಿರುದ್ಧ ಸ್ಪರ್ಧಿಸಿದರಲ್ಲಾ ಆಗ ಎಲ್ಲಿತ್ತು ಅಲ್ಪ ಸಂಖ್ಯಾತ ಕಾಳಜಿ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ತಾ.ಪಂ ಅಧ್ಯಕ್ಷೆ ಪದ್ಮಮ್ಮ, ಕಾಂಗ್ರೆಸ್ ಮುಖಂಡರಾದ ರಾಘು, ರವಿ ಪ್ರಸನ್ನ, ಗಣಪತಿ ಹಿಂಡೋಡ್ಕರ್ ಸೇರಿದಂತೆ ಆನೇಕರು ಉಪಸ್ಥಿತರಿದ್ದರು

Leave a Comment