ಶಾಸಕರಿಂದ ಸಂಚಾರಿ ಪೊಲೀಸರಿಗೆ ಪರಿಕರಗಳ ವಿತರಣೆ

ಬಳ್ಳಾರಿ ಜೂ 30 : ಇಂದು ಬೆಳಿಗ್ಗೆ ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಸಂಚಾರಿ ಠಾಣೆ ಪೊಲೀಸರಿಗೆ ನಗರ ಶಾಸಕ‌ ಗಾಲಿ ಸೋಮಶೇಖರ ರೆಡ್ಡಿ ಅವರು ಸಂಚಾರಿ ವ್ಯವಸ್ಥೆಯ ಪರಿಕರಗಳನ್ನು ವಿತರಿಸಿದರು.

ಪಾಲಿಕೆಯಿಂದ 14ನೇ ಹಣಕಾಸು ಯೋಜನೆಯಡಿ ಈ ಪರಿಕರಗಳನ್ನು ಸಂಚಾರಿ ಪೊಲೀಸರಿಗೆ ಶಾಸಕರು, ಪಾಲಿಕೆ ಆಯುಕ್ತೆ ತುಷಾರಮಣಿ, ಮಾಜಿ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್ ಅವರುಗಳು ಸಂಚಾರಿ ಪೊಲೀಸ್ ಸಿಬ್ಬಂದಿಗೆ ಸಂಚಾರಿ ಪರಿಕರಗಳಾದ ಸೋಲಾರ್ ರಿಫ್ಲೆಕ್ಟರ, ಸೋಲಾರ್ ಲೈಟಿಂಗ್ ಸಿಸ್ಟಮ್, ಟ್ರಾಫಿಕ್ ಸೈನ್ ಬೋರ್ಡ್ಸ್, ರೋಡ್ ಡಿವೈಡರ್, ಬ್ರೀತಿಂಗ್ ಅನಲೈಸಿಸ್( ಹಾಲ್ಕೋಹಾಲ್ ಚೆಕಿಂಗ್ ಡಿವೈಸ್ ) ಬ್ಯಾರಿಕೇಡ್, ಮತ್ತಿತರ ಸಲಕರಣೆಗಳನ್ನು ಹಸ್ತಾಂತರಿಸಲಾಯಿತು,

ಈ ಸಂದರ್ಭದಲ್ಲಿ ಸಂಚಾರಿ ಠಾಣೆಯ ಪಿಎಸ್ ಐ ಬಿ.ಪಿ. ಮರಿಯಮ್, ಎಎಸ್ ಐ ಗಳಾದ ಲಕ್ಷ್ಮಿಪತಿ , ನಾಗಭೂಷಣ, ನಾಗರಾಜ್ ಮಾವಳ್ಳಿ, ಸುವರ್ಥ, ವೆಂಕಟೇಶ್ ನಾಯ್ಡು, ಶಂಕ್ರಪ್ಪ, ಸೋಮಯ್ಯ, ಗೋಪಿ, ವೆಂಕಟೇಶ್ ,ಮತ್ತಿತರರು ಇದ್ದರು.

Share

Leave a Comment